ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾವೇರಿಯಲ್ಲಿ ಬೆಳ್ಳುಳ್ಳಿ ಕಳ್ಳರ ಕಾಟ; ಪೊಲೀಸರ ಮೊರೆ ಹೋದ ರೈತರು

By ಹಾವೇರಿ ಪ್ರತಿನಿಧಿ
|
Google Oneindia Kannada News

ಹಾವೇರಿ, ಅಕ್ಟೋಬರ್ 15: ಆ ರೈತರು ಕಷ್ಟಬಿದ್ದು ಬೆಳ್ಳುಳ್ಳಿ ಬೆಳೆ ಬೆಳೆದಿದ್ದರು. ಮಳೆಯಾಗಿದ್ದರಿಂದ ಒಳ್ಳೆ ಬೆಲೆಯ ನಿರೀಕ್ಷೆಯೂ ಇತ್ತು. ಆದರೆ ಬಂಗಾರದಂತೆ ಬೆಳೆ ಕೈಗೆ ಬಂದು ಲಾಭ ನೋಡಬೇಕೆನ್ನುವ ಹೊತ್ತಲ್ಲೇ ಬೆಳ್ಳುಳ್ಳಿ ರಾತ್ರೋರಾತ್ರಿ ಕಾಣೆಯಾಗುತ್ತಿತ್ತು.

Recommended Video

ಸಿರಗುಪ್ಪದಲ್ಲಿ ಮೊಬೈಲ್ ಅಂಗಡಿಯಲ್ಲಿ ಕಳ್ಳತನ | Oneindia Kannada

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗ್ರಾಮಗಳಲ್ಲಿ ಬೆಳ್ಳುಳ್ಳಿ ಕದಿಯುವವರ ಕಾಟ ಹೆಚ್ಚಾಗಿದ್ದು, ಕಳ್ಳರ ಕಾಟ ತಡೆಯಲು ಟೆಂಟ್ ಹಾಕಿ ಹಗಲು ರಾತ್ರಿ ಕಾವಲು ಕಾಯುವ ಪರಿಸ್ಥಿತಿ ಈ ರೈತರದ್ದಾಗಿದೆ. ತಾಲೂಕಿನ ಮಾಗೋಡು, ಇಟಗಿ, ಮಣಕೂರ, ಕಾಕೋಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೆಳ್ಳುಳ್ಳಿ ಬೆಳೆ ದೋಚಿದ ಖದೀಮರು ರೈತರನ್ನು ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದ್ದಾರೆ.

5 ಕೋಟಿ ರುಪಾಯಿ ವಾಚ್ ಕದ್ದೊಯ್ದ ಕಳ್ಳ, ಮೊಬೈಲ್ ಬೀಳಿಸಿಕೊಂಡ5 ಕೋಟಿ ರುಪಾಯಿ ವಾಚ್ ಕದ್ದೊಯ್ದ ಕಳ್ಳ, ಮೊಬೈಲ್ ಬೀಳಿಸಿಕೊಂಡ

ಈ ಬಾರಿ ನೆರೆಯಿಂದ ಅಷ್ಟಾಗಿ ಬೆಳೆ ಬಂದಿಲ್ಲ. ಅಲ್ಪಸ್ವಲ್ಪ ಬಂದ ಬೆಳ್ಳುಳ್ಳಿ ಬೆಳೆಗೆ ಉತ್ತಮ ಬೆಲೆ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು ಹೊಲದಲ್ಲಿ ರಾಶಿ ಮಾಡಿರುವ ಬೆಳ್ಳುಳ್ಳಿ ಬೆಳೆಯನ್ನು ರಾತ್ರಿ ಕದಿಯುತ್ತಿದ್ದಾರೆ. ಮನೆ ಸಮೀಪ ಜಾಗವಿರುವ ರೈತರು ಬೆಳ್ಳುಳ್ಳಿಯನ್ನು ತಂದು ಕಾಯುತ್ತಾರೆ. ಆದರೆ ಹೊಲದಲ್ಲಿ ಇದ್ದ ಬೆಳ್ಳುಳ್ಳಿಯನ್ನು ಕಾಯಲು ಆಗುತ್ತಿಲ್ಲ. ಈಗಾಗಲೇ ತಾಲ್ಲೂಕಿನ ಕೆಲವು ರೈತರ ಬೆಳೆಯನ್ನು ಕದ್ದಿದ್ದಾರೆ.

Farmers Complained To Arrest Garlic Thieves In Haveri

"ಈ ವರ್ಷ ಬೆಳ್ಳುಳ್ಳಿಗೆ ಉತ್ತಮ‌ ಬೆಲೆ ಸಿಕ್ಕಿರುವುದು ಖುಷಿಯಾಗಿದೆ. ಕಳೆದ ವರ್ಷ ಒಂದು ಕ್ವಿಂಟಲ್ ಬೆಳ್ಳುಳ್ಳಿಗೆ ಮೂರು ಸಾವಿರ ಇತ್ತು. ಈ ಬಾರಿ ಬರೋಬ್ಬರಿ 15 ಸಾವಿರ ರೂಪಾಯಿವರೆಗೆ ಮಾರಾಟವಾಗುತ್ತಿದೆ. ಆದರೆ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುವಂತಾಗಿದೆ" ಎಂದು ಹೇಳಿಕೊಂಡಿದ್ದಾರೆ ರೈತ ಬೈಟ್: ಕುದಿರಿಯಾಳ.

ಶೂನಲ್ಲಿ 2 ಕೇಜಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಅಫ್ಘನ್ ವ್ಯಕ್ತಿ ಕಸ್ಟಮ್ಸ್ ಬಲೆಗೆಶೂನಲ್ಲಿ 2 ಕೇಜಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಅಫ್ಘನ್ ವ್ಯಕ್ತಿ ಕಸ್ಟಮ್ಸ್ ಬಲೆಗೆ

ಇದೀಗ ಬೆಳ್ಳುಳ್ಳಿ ಕಳೆದುಕೊಂಡಿರುವ ರೈತರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಳ್ಳರ ಜಾಡು ಹಿಡಿಯುವಂತೆ ಒತ್ತಾಯಿಸುತ್ತಿದ್ದಾರೆ.

English summary
Garlic theft is happening in Haveri. Farmers who lost their garlic crop have lodged a complaint at the police station and forcing them to keep track of thieves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X