ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾವೇರಿಯಲ್ಲಿ ದೃಶ್ಯಂ ಮಾದರಿಯಲ್ಲಿ ಬಾಲಕನ ಕೊಲೆ: ಆರೋಪಿಗಳ ತಾಯಿಯಿಂದಲೇ ಮಾಹಿತಿ?

|
Google Oneindia Kannada News

ಬೆಂಗಳೂರು, ಮಾ. 12: ದೃಶ್ಯಂ ಸಿನಿಮಾ ಮಾದರಿಯಲ್ಲಿ ಅಪ್ರಾಪ್ತ ಬಾಲಕನೊಬ್ಬನನ್ನು ಕೊಲೆ ಮಾಡಿ ಸಾಕ್ಷಿ ನಾಶ ಮಾಡಲು ಪ್ರಯತ್ನಿಸಿರುವ ಘಟನೆ ಹಾವೇರಿ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಲಕನ ಕೊಲೆ ಮಾಡಿದ ನಂತರ ಆರೋಪಿಗಳು ನಡೆದುಕೊಂಡಿರುವ ರೀತಿ ದೃಶ್ಯಂ ಸಿನಿಮಾದಿಂದ ಪ್ರೇರಿತರಾದಂತೆ ಮೇಲ್ನೋಟಕ್ಕೆ ಕಂಡು ಬಂದಿದೆ.

ಹಾವೇರಿಯ ಅಶ್ವಿನಿ ನಗರದಿಂದ ಒಂದು ವಾರದ ಹಿಂದೆ ಕಾಣೆಯಾಗಿದ್ದ 11 ವರ್ಷದ ಬಾಲಕನೊಬ್ಬನನ್ನು ಪರಿಚಯಸ್ಥರೇ ಹತ್ಯೆ ಮಾಡಿ ಸುಟ್ಟು ಹಾಕಿರುವ ಅಮಾನವೀಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ದೃಶ್ಯಂ ಸಿನಿಮಾ ಮಾದರಿಯಲ್ಲಿ ಬಾಲಕನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ, ನಂತರ ಕೆರೆ ನೀರಿನಲ್ಲಿ ಮುಳುಗಿ ಸತ್ತಿದ್ದಾನೆ ಎಂಬಂತೆ ತೋರಿಸಲು ಪ್ರಯತ್ನಿಸಿದ್ದಾರೆ. ಆದರೆ ಶವ ಪೊಲೀಸರಿಗೆ ಸಿಗಬಹುದು ಎಂಬ ಆತಂಕದಲ್ಲಿ ಶವವನ್ನು ಹೂತು ಹಾಕಿದ್ದಾರೆ. ನಂತರ ಹೂತಿದ್ದ ಶವವನ್ನು ಹೊರತೆಗೆದು ಸುಟ್ಟು ಹಾಕಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇಡೀ ಘಟನೆಯಿಂದ ಜಿಲ್ಲೆಯ ಜನರು ಹೌಹಾರಿದ್ದು ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ತೇಜಸಗೌಡ ಮಲ್ಲಿಕೇರಿ ಎಂಬ ದುರ್ದೈವಿ ಬಾಲಕನ ಶವದ ಸುಟ್ಟು ಅಳಿದುಳಿದ ಭಾಗಗಳು ಪತ್ತೆಯಾಗಿವೆ.

ಕುತೂಹಲ ಮೂಡಿಸಿದ ಕೊಲೆ ಪ್ರಕರಣ

ಕುತೂಹಲ ಮೂಡಿಸಿದ ಕೊಲೆ ಪ್ರಕರಣ

ಅಶ್ವಿನಿ ನಗರದ ಶಿವಾ ಪಾರ್ಕ್‌ನ ನಿವಾಸಿ ಜಗದೀಶ ಮಲ್ಲಿಕೇರಿ ಎಂಬುವರ ಪುತ್ರ ತೇಜಸಗೌಡ ಮಲ್ಲಿಕೇರಿ (11) ಕೊಲೆಗೀಡಾರುವ ದುರ್ದೈವಿಯಾಗಿದ್ದಾನೆ. ಕೊಲೆ ಮಾಡಿರುವುದು ಹಾವೇರಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರೊಬ್ಬರ ಮಕ್ಕಳು ಎಂದು ತಿಳಿದು ಬಂದಿದೆ. ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತನೂ ಇರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂಬುದು ಕುತೂಹಲ ಮೂಡಿಸಿದ್ದು, ಮೃತ ಬಾಲಕನ ತಂದೆಯಿಂದ ಮರು ಹೇಳಿಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಅಶ್ವಿನಿ ನಗರದಿಂದ ಕಾಣೆಯಾಗಿದ್ದ ಬಾಲಕ

ಅಶ್ವಿನಿ ನಗರದಿಂದ ಕಾಣೆಯಾಗಿದ್ದ ಬಾಲಕ

ಹಾವೇರಿಯ ಅಶ್ವಿನಿ ನಗರದ ಶಿವಾ ಪಾರ್ಕ್‌ನಿಂದ ದುರ್ದೈವಿ ಬಾಲಕ ಕಾಣೆಯಾಗಿದ್ದ ಕುರಿತು ದೂರು ದಾಖಲಾಗಿತ್ತು. ಕಳೆದ ಮಾರ್ಚ್ 7 ರಂದು ಮಧ್ಯಾಹ್ನ 3.30ಕ್ಕೆ ಮನೆಯಿಂದ ಹೊರಗೆ ಹೋಗಿದ್ದ ಬಾಲಕ ನಂತರ ನಾಪತ್ತೆಯಾಗಿದ್ದ. ಈ ಕುರಿತು ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಪಹರಣವಾಗಿರುವ ಶಂಕೆಯನ್ನು ಬಾಲಕನ ತಂದೆ ವ್ಯಕ್ತಪಡಿಸಿದ್ದರು.

ಮುಳುಗಿಸಿ ಹತ್ಯೆ, ಮೃತದೇಹ ಸುಟ್ಟಿದ್ದ ದುಷ್ಟರು

ಮುಳುಗಿಸಿ ಹತ್ಯೆ, ಮೃತದೇಹ ಸುಟ್ಟಿದ್ದ ದುಷ್ಟರು

ದೂರು ದಾಖಲಿಸಿಕೊಂಡಿದ್ದ ಪೊಲೀಸರು ನಾಲ್ಕು ದಿನಗಳಾದರೂ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ನಿನ್ನೆ ಮಾರ್ಚ್ 11 ರಂದು ಪೊಲೀಸರಿಗೆ ಮರು ಹೇಳಿಕೆ ನೀಡಿದ್ದ ಮೃತ ಬಾಲಕನ ತಂದೆ ಕೊಲೆ ಶಂಕೆಯನ್ನು ವ್ಯಕ್ತಪಡಿಸಿದ್ದರು. ಹೇಳಿಕೆ ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಅಘಾತ ಕಾಯ್ದಿತ್ತು. ಸುಟ್ಟು ಕರಕಲಾಗಿದ್ದ ಬಾಲಕನ ದೇಹದ ಭಾಗಗಳು ಅಶ್ವಿನಿ ನಗರದ ಶಿವಾ ಪಾರ್ಕ್‌ ಸಮೀಪದ ಖುಲ್ಲಾ ಜಾಗೆಯಲ್ಲಿ ಪತ್ತೆಯಾಗಿದ್ದವು.

ಹತ್ಯೆ ನಂತರ ಕಾರಿನಲ್ಲಿ ಶವ ಸಾಗಣೆ

ಹತ್ಯೆ ನಂತರ ಕಾರಿನಲ್ಲಿ ಶವ ಸಾಗಣೆ

ಮಾರ್ಚ್‌ 7ರಂದು ಮಧ್ಯಾಹ್ನ ಮನೆಯ ಸಮೀಪದಲ್ಲಿಯೇ ಪರಿಚಯಸ್ಥ ಆರೋಪಿಗಳು ಬಾಲಕನನ್ನು ಕಾರಿನಲ್ಲಿ ಅಪಹರಿಸಿದ್ದಾರೆ. ಆಗ ಬಾಲಕ ಕಾರಿನಲ್ಲಿ ಕೂಗಿಕೊಳ್ಳಲು ಆರಂಭಿಸಿದಾಗ ಬಾಯಿ ಮೂಗನ್ನು ಒತ್ತಿ ಹಿಡಿದ್ದಾರೆ. ಅದರಿಂದಾಗಿ ಕಾರಿನಲ್ಲಿಯೇ ಬಾಲಕ ಉಸಿರುಗಟ್ಟಿ ಸಾವಿಗೀಡಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.


ನಂತರ ಹಾವೇರಿ ಸಮೀಪದ ಹೆಗ್ಗೆರಿ ಕೆರೆಯಲ್ಲಿ ಮೃತ ಬಾಲಕನ ಶವವನ್ನು ಎಸೆದಿದ್ದಾರೆ. ಆದರೆ ಮೃತದೇಹ ನೀರಿನಲ್ಲಿ ತೇಲಾಡಿ ಪೊಲೀಸರಿಗೆ ಗೊತ್ತಾಗುತ್ತದೆ ಎಂದು ಮತ್ತೆ ಶವವನ್ನು ಕಾರಿನಲ್ಲಿ ಆರೋಪಿಗಳು ತಮ್ಮ ಮನೆಯ ಹಿತ್ತಲಿಗೆ ಸಾಗಿಸಿದ್ದಾರೆ.

ಒಬ್ಬ ಅಪ್ರಾಪ್ತ ಬಾಲಕನೂ ಆರೋಪಿ!

ಒಬ್ಬ ಅಪ್ರಾಪ್ತ ಬಾಲಕನೂ ಆರೋಪಿ!

ಬಳಿಕ ಶವವನ್ನು ಹಿತ್ತಲಿನಲ್ಲಿ ಹೂತು ಹಾಕಿದ್ದಾರೆ. ಎರಡು ದಿನಗಳ ಬಳಿಕ ಶವದ ವಾಸನೆ ಬರಲು ಶುರುವಾಗಿದೆ. ಹೀಗಾಗಿ ಹೂತಿದ್ದ ಶವವನ್ನು ಮತ್ತೆ ಹೊರೆಗೆ ತೆಗೆದಿದ್ದಾರೆ. ನಂತರ ಶವವನ್ನು ಪೆಟ್ರೋಲ್ ಹಾಗೂ ಟೈರ್‌ಗಳಿಂದ ಸುಟ್ಟು ಹಾಕಲಾಗಿದೆ ಎಂದು ತಿಳಿದು ಬಂದಿದೆ.


ಇದೀಗ ಕೊಲೆ ಸಂಬಂಧ 21 ವಯಸ್ಸಿನ ರಿತೇಶ್ ಮೇಟಿ ಹಾಗು ಒಬ್ಬ ಅಪ್ರಾಪ್ತ ಬಾಲಕನ ವಿರುದ್ಧ ಕೊಲೆ ಮತ್ತು ಸಾಕ್ಷ್ಯನಾಶ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಹಾವೇರಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕೊಲೆ ಮಾಡಿದ ಬಳಿಕ ಬಾಗಲಕೋಟೆಯಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

Recommended Video

ಬಿಬಿಎಂಪಿ ಕಚೇರಿಯಲ್ಲಿ ಅಧಿಕಾರಿ-ಗುತ್ತಿಗೆದಾರರ ನಡುವೆ ಫೈಟಿಂಗ್ | Oneindia Kannada
ಆರೋಪಿಗಳ ತಾಯಿ ಕೊಟ್ಟರಾ ಮಾಹಿತಿ?

ಆರೋಪಿಗಳ ತಾಯಿ ಕೊಟ್ಟರಾ ಮಾಹಿತಿ?

ಇಬ್ಬರು ಆರೋಪಿಗಳ ವರ್ತನೆಯಿಂದ ಸಂಶಯಗೊಂಡಿದ್ದ ಆರೋಪಿಗಳ ತಾಯಿಯೇ ಈ ಕುರಿತು ಮಾಹಿತಿ ಕೊಟ್ಟಿದ್ದಾರೆ ಎನ್ನಲಾಗಿದೆ. ಯಾರಿಗೆ ಮಾಹಿತಿ ಕೊಟ್ಟಿದ್ದಾರೆ? ಆ ಮಾಹಿತಿಯನ್ನು ಪೊಲೀಸರಿಗೆ ಯಾರು ಕೊಟ್ಟಿದ್ದಾರೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಇಂತಹ ಕೊಲೆಗಳಲ್ಲಿ ಅನೈತಿಕ ಸಂಬಂಧವೂ ಕಾರಣವಾಗಿರುವ ಸಧ್ಯತೆಗಳು ಇರುತ್ತವೆ. ಹೀಗಾಗಿ ಆ ಆಯಾಮದಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಾರೆ ಕೊಲೆ ಹಾಗೂ ಕೊಲೆ ನಂತರ ಆರೋಪಿಗಳು ನಡೆದುಕೊಂಡಿರುವ ರೀತಿ ದೃಶ್ಯಂ ಸಿನಿಮಾದಂತೆಯೆ ಕಂಡು ಬರುತ್ತಿದೆ. ಹೀಗಾಗಿ ಈ ಕೊಲೆಗೆ ದೃಶ್ಯ ಸಿನಿಮಾದಿಂದ ಪ್ರೇರಣೆಯಾ? ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

English summary
Drishyam style murder in Haveri, relatives kills young boy and hides his body. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X