ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಸು ಕರುವಿನ ಈ ಮನ ಕಲಕುವ ಕಥೆ ಓದಿ

By Manjunatha
|
Google Oneindia Kannada News

ಹಾವೇರಿ, ಜನವರಿ 29: 'ಅಮ್ಮ' ಎಂಬ ಪದ ಅಸೀಮವಾದುದು, ಮನುಷ್ಯ, ಪ್ರಾಣಿ, ಪಕ್ಷಿ ಯಾವುದೇ ಜೀವ ಜಂತು ಆಗಿರಲಿ ತಾಯ್ತನ ಒಂದೆ. ಅದರ ಪ್ರೀತಿಯೂ ಒಂದೆ. ಅದಕ್ಕೆ ಇಲ್ಲೊಂದು ಕಣ್ಣು ತೇವಗೊಳಿಸುವ ಆರ್ದ್ರ ಉದಾಹರಣೆ ಇದೆ ನೋಡಿ.

ಗಾಯಗೊಂಡ ತನ್ನ ಕರುವನ್ನು ಹೊತ್ತೊಯ್ಯುತ್ತಿರುವ ವಾಹನದ ಹಿಂದೆ ತಾಯಿ ಹಸು ಓಡುತ್ತಿದೆ. ತನ್ನ ಕರುಳ ಕುಡಿಗೆ ಏನಾಗಿದೆಯೊ ಎಂಬ ಗಾಬರಿ, ನೋವಿನ ಭಾವ ಆ ಮೂಕ ಪ್ರಾಣಿಯ ಮುಖದಲ್ಲಿ ಮೂಡಿರುವುದು ಎಂತ ನಿರ್ಭಾವುಕರ ಕಣ್ಣಿಗೂ ಕಾಣುತ್ತದೆ.

ಈ ಘಟನೆ ವರದಿಯಾಗಿರುವುದು ಹಾವೇರಿಯಲ್ಲಿ. ನಗರದ ಜೆಎನ್ ವೃತ್ತದಲ್ಲಿ ಎರಡು ತಿಂಗಳ ಕರು ಅಕಸ್ಮಾತ್‌ ಆಗಿ ಗಾಯಮಾಡಿಕೊಂಡಿದೆ. ಗಾಯದ ನೊವಿನ ತೀರ್ವತೆಗೆ ಮೂರ್ಛೆ ಹೋಗಿಬಿಟ್ಟಿದೆ. ಇದನ್ನು ಕಂಡು ತಾಯಿ ಹಸು ರೋದನ ಪ್ರಾರಂಭಿಸಿದೆ.

cow running behind a vehicle transporting its injured calf

ತಾಯಿ ಹಸುವಿನ ರೋದನೆಗೆ ಮರುಗಿದ ಸ್ಥಳೀಯರು ಮೂರ್ಛೆ ಹೋದ ಹಸುವನ್ನು ವ್ಯಾನ್ ಒಂದಕ್ಕೆ ಹಾಕಿ ಪಶು ಆಸ್ಪತ್ರೆಗೆ ಸಾಗಿಸಿದ್ದಾರೆ. ಜೆಎನ್ ವೃತ್ತದಿಂದ ಅರ್ಧ ಕಿ.ಮೀ ದೂರದಲ್ಲಿದ್ದ ಆಸ್ಪತ್ರೆಯ ವರೆಗೂ ತಾಯಿ ಹಸು ಗಾಡಿಯ ಹಿಂದೆಯೇ ಓಡಿಕೊಂಡೇ ಬಂದಿದೆ. ಈ ಘಟನೆಯನ್ನು ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು ಈಗ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮನುಷ್ಯನೇ ಆಗಲಿ, ಪ್ರಾಣಿಗಳೇ ಆಗಲಿ ತಾಯಿ ಹೃದಯ ಒಂದೇ ಎಂಬುದಕ್ಕೆ ಹಾವೇರಿಯ ಈ ಘಟನೆಗಿಂತ ಅತ್ಯುತ್ತಮ ಉದಾಹರಣೆ ಇರಲಾರದು. ಏನಂತೀರಿ...?

English summary
Heart renching video of a cow running behind a vehicle transporting its injured calf in Karnataka's haveri. The visuals of the incident reported from Haveri district is now going viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X