ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊವಿಡ್-19 ಕೇರ್ ಸೆಂಟರ್ ನಲ್ಲೇ ಮಸ್ತ್ ಮಸ್ತ್ ಡ್ಯಾನ್ಸ್!

|
Google Oneindia Kannada News

ಹಾವೇರಿ, ಜುಲೈ.20: ಕೊರೊನಾವೈರಸ್ ಸೋಂಕಿನಿಂದ ಪಾರಾಗಲು ಇರುವ ಒಂದೇ ಒಂದು ಔಷಧಿ ಎಂದರೆ ಆತ್ಮವಿಶ್ವಾಸ. ಮನುಷ್ಯನಲ್ಲಿನ ರೋಗ ನಿರೋಧಕ ಶಕ್ತಿ ಮತ್ತು ಆತ್ಮವಿಶ್ವಾಸದಿಂದಲೇ ಕೊವಿಡ್-19 ನಿರ್ಮೂಲನೆ ಮಾಡುವುದಕ್ಕೆ ಸಾಧ್ಯ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

Recommended Video

Indiaದಲ್ಲಿ Corona ಕಾಟ ಆಗಸ್ಟ್ ತಿಂಗಳಲ್ಲಿ ತಾರಕಕ್ಕೇರಲಿದೆ! | Oneindia Kannada

ಕೊರೊನಾವೈರಸ್ ಸೋಂಕಿತರಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸುವ ಉದ್ದೇಶದಿಂದ ಮನರಂಜನೆ ನೀಡಲಾಯಿತು. ಹಾವೇರಿ ಜಿಲ್ಲಾಸ್ಪತ್ರೆಯ ಕೋವಿಡ್19 ಆಸ್ಪತ್ರೆಯಲ್ಲಿ ಸೋಂಕಿತರು ಸಖತ್ ಡ್ಯಾನ್ಸ್ ಮಾಡಿದರು. ಒಬ್ಬ ವೃದ್ಧ ಸೇರಿ ನಾಲ್ವರು ಸೋಂಕಿತರು ಭರ್ಜರಿ ಸ್ಟೆಪ್ಸ್ ಹಾಕಿದರು.

ಮದುವೆ ತಂದ ಆಪತ್ತು: ರಾಣೇಬೆನ್ನೂರಿನ ಒಂದೇ ಕುಟುಂಬದ 32 ಜನರಿಗೆ ಕೊರೊನಾ ಸೋಂಕುಮದುವೆ ತಂದ ಆಪತ್ತು: ರಾಣೇಬೆನ್ನೂರಿನ ಒಂದೇ ಕುಟುಂಬದ 32 ಜನರಿಗೆ ಕೊರೊನಾ ಸೋಂಕು

ಕೊರೊನಾವೈರಸ್ ಗೆ ಯಾವುದೇ ರೀತಿ ಹೆದರಬೇಡಿ. ಮಹಾಮಾರಿ ಬಗ್ಗೆ ಜಾಗೃತರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆ ಸೋಂಕಿನ ಭಯವನ್ನು ಬಿಟ್ಟು ಹಾಯಾಗಿ ಸೋಂಕಿತರು ಅಲ್ಲಾಡ್ಸ್, ಅಲ್ಲಾಡ್ಸ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

Coronavirus Infected Peoples Danced In Covid Care Center To Improve Self Confidence

ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಸೋಂಕಿತರ ಮಸ್ತ್ ಡ್ಯಾನ್ಸ್:

ಕೊರೊನಾವೈರಸ್ ಸೋಂಕಿಗೆ ಸಿಲುಕಿರುವ ವಿಮ್ಸ್ ಆಸ್ಪತ್ರೆಯ ಆರೋಗ್ಯ ಸಹಾಯಕ ಸಿಬ್ಬಂದಿಗೆ ಬಳ್ಳಾರಿ ವಿಮ್ಸ್ ಡೆಂಟಲ್ ಕಾಲೇಜ್ ನ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಸೋಂಕಿತ ಆರೋಗ್ಯ ಸಹಾಯಕರಿಗೆ ಡಾ.ರಾಘವೇಂದ್ರ ನೇತೃತ್ವದಲ್ಲಿ ಚಿಕಿತ್ಸೆ ಜೊತೆಗೆ ಜಾಗೃತಿ ಮೂಡಿಸಲಾಗುತ್ತಿದೆ. ಕೊರೊನಾವೈರಸ್ ಬಗ್ಗೆ ಭಯ ಬಿಟ್ಟು ಆರೋಗ್ಯ ಸಹಾಯಕ ಸಿಬ್ಬಂದಿ ಕೂಡ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಪುಟ್ಟಬೊಮ್ಮಾ, ಪುಟ್ಟಬೊಮ್ಮಾ ಅನ್ನೋ ಹಾಡಿಗೆ ಜಬರ್ದಸ್ತಾಗಿ ಕುಣಿದಿದ್ದಾರೆ. ಕೊರೊನಾ ವಾರಿಯರ್ಸ್ ಡ್ಯಾನ್ಸ್ ವಿಡಿಯೋವನ್ನು ಖುದ್ದು ಬಳ್ಳಾರಿ ಜಿಲ್ಲಾಧಿಕಾರಿ SS ನಕುಲ್ ಶೇರ್ ಮಾಡಿದ್ದಾರೆ.

English summary
Coronavirus Infected Peoples Danced In Covid Care Center To Improve Self Confidence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X