ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತವರು ಜಿಲ್ಲೆಯಲ್ಲಿ 335 ಕೋಟಿ ರೂ.ಗಳ ಯೋಜನೆಗಳಿಗೆ ಸಿಎಂ ಅಡಿಗಲ್ಲು

|
Google Oneindia Kannada News

ಹಾವೇರಿ, ಜನವರಿ 25: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ತವರು ಜಿಲ್ಲೆಯಾದ ಹಾವೇರಿ ವ್ಯಾಪ್ತಿಯಲ್ಲಿ ಭರಪೂರ ಯೋಜನೆಗಳಿಗೆ ಬುಧವಾರ ಅಡಿಗಲ್ಲು ಹಾಕಿದರು.

ಹಿರೇಕೆರೂರಲ್ಲಿ ನಡೆದ ಜನ ಸಂಕಲ್ಪ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮೆಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC)ಗಾಗಿ 100 ಕೋಟಿ ರೂ.ಗಳನ್ನು ಒದಗಿಸಿದ್ದು ರಾಣೆಬೆನ್ನೂರಿನ ಹೊರವಲಯದಲ್ಲಿ ನಿರ್ಮಾಣವಾಗುತ್ತಿದೆ. ಜಲಜೀವನ್ ಮಿಷನ್ ಅಡಿ ಹಿರೇಕೆರೂರು ತಾಲ್ಲೂಕಿನ ವ್ಯಾಪ್ತಿಯೊಂದರಲ್ಲೇ 109 ಗ್ರಾಮಗಳಿಗೆ 335 ಕೋಟಿ ರೂ.ಗಳ ಯೋಜನೆಗೆ ಅಡಿಗಲ್ಲು ಹಾಕಿದ್ದೇವೆ ಎಂದರು.

ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಲಂಚದ ಆರೋಪ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದೇನು? ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಲಂಚದ ಆರೋಪ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದೇನು?

196 ಕೋಟಿ ರೂ.ಗಳ ವೆಚ್ಚದಲ್ಲಿ ಹಿರೇಕೆರೂರು- ರಟ್ಟಿಹಳ್ಳಿ ಭಾಗದಲ್ಲಿ ಪ್ರತಿ ಮನೆಗೆ ನೀರು ಒದಗಿಸಲು ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಹಾವೇರಿ ಜಿಲ್ಲೆಯಲಿ ಸುಮಾರು 2,500 ಕೋಟಿ ರೂ.ಗಳ ಜಲಜೀವನ್ ಮಿಷನ್ ಯೋಜನೆಗೆ ಅನುದಾನ ನೀಡಿ ಕೆಲಸ ಪ್ರಾರಂಭವಾಗಿದೆ ಎಂದು ಅವರು ವಿವರಿಸಿದರು.

CM Basavaraj Bommai laid the foundation stone for multi-crore projects in his home district Haveri.

ಹಾವೇರಿ: ನೀರಾವರಿ ಯೋಜನೆಗಳು ಪ್ರಗತಿ

ಸರ್ವಜ್ಞ ಏತ ನೀರಾವರಿ ಯೋಜನೆಯಡಿ 184 ಕೋಟಿ ರೂ.ಗಳ ವೆಚ್ಚದಲ್ಲಿ 93 ಕೆರೆಗಳನ್ನು ತುಂಬಿಸಲಾಗಿದೆ. ಹಾನಗಲ್ ತಾಲ್ಲೂಕಿನಲ್ಲಿ ಬಾಳಂದೂರು ಏತ ನೀರಾವರಿ ಯೋಜನೆಗೆ 388 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡಿದ್ದೇವೆ. ಹಾನಗಲ್ ತಾಲ್ಲೂಕಿನಲ್ಲಿ. 160 ಕೋಟಿ ರೂ.ಗಳ ಯೋಜನೆ ಬ್ಯಾಡಗಿ ತಾಲ್ಲೂಕಿನಲ್ಲಿ ಏತನೀರಾವರಿ ಯೋಜನೆಗೆ 157 ಕೋಟಿ ರೂ.ಗಳು, ಆನೂರು ಏತ ನೀರಾವರಿಗೆ 112 ಕೋಟಿ ರೂ.ಗಳು ಒದಗಿಸಲಾಗುತ್ತಿದೆ.

ಮುಂದಿನ ತಿಂಗಳು ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ರಾಣೆಬೆನ್ನೂರು ತಾಲ್ಲೂಕಿನ ಮೆಡ್ಲೇರಿ ಏತ ನೀರಾವರಿ 140 ಕೋಟಿ ರೂ.ಗಳ ವೆಚ್ಛದಲ್ಲಿ ಕೈಗೊಂಡು ಇಲ್ಲಿ ಅಭಿವೃದ್ಧಿಯ ಪರ್ವ ನಮ್ಮ ಕಾಲದಲ್ಲಿ ಆಗಿದೆ. ತುಂಗಾ ಮೇಲ್ದಂಡೆಯಿಂದ 8 ಏತ ನೀರಾವರಿ ಯೋಜನೆಗಳನ್ನು ನಮ್ಮ ಕಾಲದಲ್ಲಿ ಅನುಮೋದಿಸಿ, ನಮ್ಮ ಕಾಲದಲ್ಲಿಯೇ ಉದ್ಘಾಟಿಸುತ್ತಿದ್ದೇವೆ. ಇದೊಂದು ದಾಖಲೆ ಎಂದರು.

ಅಂತಿಮ ಹಂತದಲ್ಲಿ ವೈದ್ಯಕೀಯ ಕಾಲೇಜು

ಜಿಲ್ಲೆಯಲ್ಲಿ ಬಹುನಿರೀಕ್ಷಿತ ವೈದ್ಯಕೀಯ ಕಾಲೇಜು ಈಗಾಗಲೇ ಅಂತಿಮ ಹಂತದಲ್ಲಿದ್ದು, ನಮ್ಮ ಕನಸು ನನಸಾಗುವ ಹಂತದಲ್ಲಿದೆ. ಅದು ಸಂಪೂರ್ಣವಾಗಿ ಬಿಜೆಪಿ ಆಡಳಿತದಲ್ಲಿ ಮಂಜೂರಾಗಿ, ಅನುದಾನ ಪಡೆದು ನಿರ್ಮಾಣವಾಗಿದೆ. ನಮ್ಮ ನಾಯಕ ನರೇಂದ್ರ ಮೋದಿವರು ಸಶಕ್ತ ಭಾರತದ ಕನಸನ್ನು ಕಂಡಿದ್ದಾರೆ. ದುಡಿಯುವ ರೈತನಿಗೆ ಶಕ್ತಿ ತುಂಬಲು ಕೃಷಿ ಸಮ್ಮಾನ್ ಯೋಜನೆಯಡಿ ರಾಜ್ಯದಲ್ಲಿ 53.43 ಲಕ್ಷ ರೈತರಿಗೆ 10.ಸಾವಿರ ರೂ.ಗಳನ್ನು ನೇರವಾಗಿ ಡಿಬಿಟಿ ಮೂಲಕ ಒದಗಿಸಲಾಗಿದೆ. ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಸ್ವಚ್ಛ ಭಾರತಕ್ಕೆ ಅನುಕೂಲವಾಗಿದೆ. ಗ್ಯಾಸ್ ಸಿಲಿಂಡರ್, ಮಕ್ಕಳ ವಿದ್ಯಾಭ್ಯಾಸ, ಪ್ರತಿ ಮನೆಗೆ ವಿದ್ಯುಚ್ಛಕ್ತಿ ನೀಡಿರುವುದು ಬಿಜೆಪಿಯ ಕಾರ್ಯಸಾಧನೆ ಎಂದು ತಿಳಿಸಿದರು.

CM Basavaraj Bommai laid the foundation stone for multi-crore projects in his home district Haveri.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದ ಅಭಿವೃದ್ಧಿ ಕೆಲಸಗಳೇ ನಮ್ಮ ಕೊಡುಗೆಗೆ ಕುರಿತು ಸಾಕ್ಷಿ ಹೇಳುತ್ತವೆ ಎಂದು ಬಿಜೆಪಿ ಕೊಡುಗೆ, ಕೆಲಸಗಳ ಬಗ್ಗೆ ಮಾತನಾಡುವವರಿಗೆ ಅವರು ಅವರು ತಿರುಗೇಟು ನೀಡಿದರು.

ದುಡಿಯುವ ವರ್ಗಕ್ಕೆ ಸರ್ಕಾರ ಬೆಲೆ

ರೈತ ಮಕ್ಕಳಿಗೆ ರೈತ ವಿದ್ಯಾ ನಿಧಿ ಯೋಜನೆಯನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ರೂಪಿಸಲಾಗಿದೆ. ಈ ವರ್ಷ 11 ಲಕ್ಷ ಮಕ್ಕಳಿಗೆ 483 ಕೋಟಿ ರೂ.ಗಳನ್ನು ಈ ಯೋಜನೆಯಡಿ ವಿತರಿಸಲಾಗಿದೆ. 6 ಲಕ್ಷ ರೈತ ಕೂಲಿಕಾರರ ಮಕ್ಕಳು, ಮೀನುಗಾರ, ನೇಕಾರರ ಮಕ್ಕಳಿಗೆ ನೀಡಲಾಗುತ್ತಿದೆ. ದುಡಿಯುವ ವರ್ಗಕ್ಕೆ ಸಹಾಯ ನೀಡಲಾಗಿದೆ. ಗ್ರಾಮೀಣ ಕುಶಲಕರ್ಮಿಗಳಿಗೆ 50 ಸಾವಿರ ರೂ. ಗಳ ಕಾಯಕ ಯೋಜನೆ, ಸ್ತ್ರೀ ಸಾಮರ್ಥ್ಯ ಯೋಜನೆ, ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ ರೂಪಿಸಿದೆ. ದುಡಿಯುವ ವರ್ಗಕ್ಕೆ ಬೆಲೆ ನೀಡುವ ಕೆಲಸವಾಗುತ್ತಿದೆ ಎಂದು ಹೇಳಿದರು.

English summary
CM Basavaraj Bommai laid the foundation stone for multi-crore projects in his home district Haveri on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X