ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ತೆಕ್ಕೆಗೆ ಬ್ಯಾಡಗಿ ಪುರಸಭೆ: ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

|
Google Oneindia Kannada News

ಹಾವೇರಿ, ನವೆಂಬರ್.06: ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಗದ್ದುಗೆ ಬಿಜೆಪಿ ಪಾಲಾಗಿದೆ. ನಗರದ ಪುರಸಭೆ ನೂತನ ಅಧ್ಯಕ್ಷರಾಗಿ ಬಿಜೆಪಿಯ ಕವಿತಾ ಕೊಟ್ರಯ್ಯ ಸೊಪ್ಪಿನಮಠ್ ಹಾಗೂ ಉಪಾಧ್ಯಕ್ಷರಾಗಿ ಕಲಾವತಿ ಮೌನೇಶ್ ಬಡಿಗೇರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಒಟ್ಟು 23 ಸದಸ್ಯ ಬಲದ ಪುರಸಭೆಯಲ್ಲಿ ಅಧಿಕಾರ ಪಡೆದುಕೊಳ್ಳುವುದಕ್ಕೆ ಕನಿಷ್ಠ 12 ಸ್ಥಾನಗಳು ಬೇಕು. ಭಾರತೀಯ ಜನತಾ ಪಕ್ಷವು ಈಗಾಗಲೇ 17 ಸದಸ್ಯರನ್ನೊಳಗೊಂಡಿದ್ದು, ಈವರೆಗೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿರಲಿಲ್ಲ. ಅಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಗರಲ್ಲೇ ನಡೆಯುತ್ತಿದ್ದ ಪೈಪೋಟಿಗೆ ತೆರೆ ಬಿದ್ದಿದೆ.

ಬ್ಯಾಡಗಿಯ ಸರ್ಕಾರಿ ಶಾಲೆ ಆವರಣದಲ್ಲೇ 3 ಮಕ್ಕಳ ಜಲಸಮಾಧಿ ಬ್ಯಾಡಗಿಯ ಸರ್ಕಾರಿ ಶಾಲೆ ಆವರಣದಲ್ಲೇ 3 ಮಕ್ಕಳ ಜಲಸಮಾಧಿ

ಬಿಜೆಪಿಯ ಹಿರಿಯ ನಾಯಕರ ಸೂಚನೆಯಂತೆ ಶುಕ್ರವಾರ ಮಹಿಳೆಯರಿಗೆ ಮೀಸಲಾಗಿದ್ದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಕವಿತಾ ಕೊಟ್ರಯ್ಯ ಸೊಪ್ಪಿನಮಠ್ ರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಸ್ಥಾನವು ಅ- ವರ್ಗಕ್ಕೆ ಮೀಸಲಿರುವ ಕಾರಣ ಉಪಾಧ್ಯಕ್ಷರಾಗಿ ಕಲಾವತಿ ಮೌನೇಶ್ ಬಡಿಗೇರರನ್ನು ಚುನಾಯಿಸಲಾಗಿದೆ.

Byadgi Municipality Election: Kavita Soppinamath As President And Kalavati Badiger Elected As Vice-President


ಕೋರ್ ಕಮಿತಿ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ:

ಬ್ಯಾಡಗಿಯಲ್ಲಿ ಗುರುವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪುರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. ಈ ವೇಳೆ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್, ಬಿಜೆಪಿ ಮುಖಂಡರಾದ ಮುರಿಗೆಪ್ಪ ಶೆಟ್ಟರ್, ಪುರಸಭೆ ಸದಸ್ಯರಾದ ಚಂದ್ರಣ್ಣ ಶೆಟ್ಟರ್, ಬಸವರಾಜ್ ಛತ್ರದ್, ರಾಮಣ್ಣ ಕೋಡಿಹಳ್ಳಿ ಸೇರಿದಂತೆ ಹಲವರು ಹಾಜರಿದ್ದರು.

English summary
Byadgi Municipality Election: Kavita Soppinamath As President And Kalavati Badiger Elected As Vice-President.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X