ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈರುಳ್ಳಿ ಬಳಿಕ ದಾಖಲೆ ಸೃಷ್ಟಿಸಿದ ಬ್ಯಾಡಗಿ ಮೆಣಸಿನಕಾಯಿ

|
Google Oneindia Kannada News

ಹಾವೇರಿ, ಜನವರಿ 10: ಬರೋಬ್ಬರಿ 200ರ ಗಡಿ ತಲುಪಿದ್ದ ಈರುಳ್ಳಿ ಬೆಲೆ ಕ್ರಮೇಣವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಆದರೆ ಅದರ ಬೆನ್ನಲ್ಲೇ ಬ್ಯಾಡಗಿ ಮೆಣಸಿನ ಕಾಯಿ ದಾಖಲೆ ಸೃಷ್ಟಿಸಿದೆ.

ಏರುಗತಿಯಲ್ಲಿ ಸಾಗುತ್ತಿದ್ದ ಬ್ಯಾಡಗಿ ಮೆಣಸಿನಕಾಯಿ ದರ ಮೊದಲ ಬಾರಿಗೆ ಕ್ವಿಂಟಾಲ್‌ಗೆ 30 ಸಾವಿರ ರೂ ದಾಟಿದೆ.

ಗುರುವಾರ ಹಾವೇರಿ ಜಿಲ್ಲೆಯಲ್ಲಿ ಬ್ಯಾಡಗಿ ಎಪಿಎಂಸಿಯಲ್ಲಿ ದಾಖಲೆಯ 33,259 ರೂ ದರಕ್ಕೆ ಖರೀದಿಯಾಗಿದೆ.ಗದಗ ಜಿಲ್ಲೆಯ ರೋಣಾ ತಾಲೂಕಿನ ಸವಡಿ ಗ್ರಾಮದ ರೈತ ಸಂಗರೆಡ್ಡೆಪ್ಪ ಅವರು ಗುರುವಾರ ಬ್ಯಾಡಗಿ ಮಾರುಕಟ್ಟೆಗೆ 17 ಚೀಲ ಡಬ್ಬಿ ಮೆಣಸಿನಕಾಯಿ ತಂದು ದಲ್ಲಾಳಿ ಅಂಗಡಿಯಲ್ಲಿ ಮಾರಾಟಕ್ಕೆ ಹಾಕಿದ್ದರು .

Byadgi Chilli Record Creation After The Onion

ಮೆಣಸಿನಕಾಯಿಗೆ ದರ ನಮೂದಾಗಿದ್ದನ್ನು ನೋಡಿ ಅವರೇ ಆಶ್ಚರ್ಯ ಪಟ್ಟಿದ್ದಾರೆ. ಅವರು ತಂದಿದ್ದ ಮೆಣಸಿನಕಾಯಿ ಕ್ವಿಂಟಾಲ್‌ಗೆ 33,259ಕ್ಕೆ ಖರೀದಿಯಾಗಿದೆ. 7 ಕ್ವಿಂಟಾಲ್‌ಗೆ 2.30 ಲಕ್ಷರೂ ಪಾವತಿಯಾಗಿದೆ.

ಪ್ರವಾಹದಿಂದ ಈ ವರ್ಷ ಒಣಮೆಣಸಿನಕಾಯಿ ಇಳುವರಿ ಕಡಿಮೆಯಾಗಿದೆ. ಅಲ್ಲದೇ ಗುಣಮಟ್ಟದ ಮೆಣಸಿನಕಾಯಿ ಆವಕವೂ ಕಡಿಮೆಯಾಗಿದೆ. ಇದರಿಂದ ವಾರದಿಂದ ವಾರಕ್ಕೆ ಬ್ಯಾಡಗಿ ಎಪಿಎಂಸಿಯಲ್ಲಿ ಮೆಣಸಿನಕಾಯಿ ಧಾರಣೆ ಏರುತ್ತಲೇ ಇದೆ. ಈವರೆಗೆ 26-28 ಸಾವಿರ ಮಾತ್ರ ಮೆಣಸಿನಕಾಯಿ ಕಂಡಿತ್ತು.

English summary
Byadgi Chilli Created Record After Onion Price Hike. For 1 Quintal Byadgi Chilli price is 33 Thousand In Market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X