ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಡಗಿ ಮೆಣಸಿಗೆ ಚಿನ್ನದ ಬೆಲೆ; ಕ್ವಿಂಟಾಲ್‌ಗೆ 33 ಸಾವಿರ

|
Google Oneindia Kannada News

ಹಾವೇರಿ, ಜನವರಿ 13 : ಈರುಳ್ಳಿ ಬಳಿಕ ಈಗ ಒಣ ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದೆ. ವಿಶ್ವಪ್ರಸಿದ್ಧ ಹಾವೇರಿಯ ಬ್ಯಾಡಗಿ ಮೆಣಸಿನಕಾಯಿ ಕ್ವಿಂಟಾಲ್‌ಗೆ 33,333 ರೂ.ಗೆ ಮಾರಾಟವಾಗಿದ್ದು, ರೈತರು ಸಂತಸಗೊಂಡಿದ್ದಾರೆ.

ಸೋಮವಾರ ಬ್ಯಾಡಗಿಯ ಒಣ ಮೆಣಸಿನಕಾಯಿ ಬ್ಯಾಡಗಿ ಮಾರುಕಟ್ಟೆಯಲ್ಲಿ 33 ಸಾವಿರಕ್ಕೆ ಮಾರಾಟವಾಗಿದೆ. ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ರೈತ ಮಂಜುನಾಥ ಗಾಡರೆಡ್ಡಿ ಉತ್ತಮ ಬೆಲೆ ಪಡೆದಿದ್ದಾರೆ.

ಕೊಪ್ಪಳ ಗವಿ ಸಿದ್ದೇಶ್ವರ ಜಾತ್ರೆ; 18 ಲಕ್ಷ ಮಿರ್ಚಿ ತಯಾರಿ!ಕೊಪ್ಪಳ ಗವಿ ಸಿದ್ದೇಶ್ವರ ಜಾತ್ರೆ; 18 ಲಕ್ಷ ಮಿರ್ಚಿ ತಯಾರಿ!

ಮಂಜುನಾಥ ಮೂರು ಕ್ವಿಂಟಾಲ್ ಮೆಣಸಿಕಾಯಿಯನ್ನು ಮಾರಾಟ ಮಾಡಿ 99 ಸಾವಿರ ರೂ. ಹಣ ಪಡೆದುಕೊಂಡಿದ್ದಾರೆ. ಕಷ್ಟಪಟ್ಟು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕಿದ್ದು, ಮಂಜುನಾಥ ಅವರ ಸಂತಸ ಇಮ್ಮಡಿಗೊಳಿಸಿದೆ.

ಈರುಳ್ಳಿ ಬಳಿಕ ದಾಖಲೆ ಸೃಷ್ಟಿಸಿದ ಬ್ಯಾಡಗಿ ಮೆಣಸಿನಕಾಯಿ ಈರುಳ್ಳಿ ಬಳಿಕ ದಾಖಲೆ ಸೃಷ್ಟಿಸಿದ ಬ್ಯಾಡಗಿ ಮೆಣಸಿನಕಾಯಿ

Byadgi Chilli Market Price Cross 30 Thousand Per Quintal

ಕಳೆದ ಗುರುವಾರ ಗದಗ ಜಿಲ್ಲೆಯ ರೋಣದ ರೈತರೊಬ್ಬರು ಮೆಣಸಿನಕಾಯಿಯನ್ನು 33,259 ರೂ. ಗೆ ಮಾರಾಟ ಮಾಡಿದ್ದರು. ಇಂದು ಈ ದಾಖಲೆಯನ್ನು ಮುರಿದು ಹಾಕಲಾಗಿದ್ದು, ಉತ್ತಮ ಬೆಳೆಗೆ ಕೆಂಪು ಸುಂದರಿ ಮಾರಾಟವಾಗಿದ್ದಾಳೆ.

ದಿಢೀರ್ ಕುಸಿತ ಕಂಡ ಈರುಳ್ಳಿ ದರ: ಗ್ರಾಹಕರು ಫುಲ್ ಖುಷ್ ದಿಢೀರ್ ಕುಸಿತ ಕಂಡ ಈರುಳ್ಳಿ ದರ: ಗ್ರಾಹಕರು ಫುಲ್ ಖುಷ್

ಒಂದು ವಾರದಿಂದ ಬ್ಯಾಡಗಿ ಮೆಣಸಿನಕಾಯಿ ದರ ಏರಿಕೆಯಾಗುತ್ತಲೇ ಸಾಗಿದೆ. ಚಿಲ್ಲರೆ ಮಾರಾಟ ಅಂಗಡಿಗಳಲ್ಲಿ 50 ರೂ., ಸಗಟು ಮಾರಾಟ ಮಳಿಗೆಗಳಲ್ಲಿ 10 ರಿಂದ 20 ರೂ. ದರ ಹೆಚ್ಚಾಗಿದೆ ಎಂದು ಗ್ರಾಹಕರು ಹೇಳುತ್ತಿದ್ದಾರೆ.

ಸಾಮಾನ್ಯ ಮೆಣಸಿಗಿಂತ ಆಕಾರದಲ್ಲಿ ಉದ್ದವಾಗಿರುವ ಬ್ಯಾಡಗಿ ಮೆಣಸು ವಿಶ್ವಪ್ರಸಿದ್ಧಿ ಪಡೆದಿದೆ. ರಾಮನಗರದ ಗಿಡ್ಡ ಮೆಣಸು, ಗುಂಟೂರು ಒಣ ಮೆಣಸಿನ ಬೆಲೆಯೂ ಏರಿಕೆಯಾಗಿದೆ. ಮೆಣಸಿನ ಬೆಲೆ ಧಿಡೀರ್ ಏರಿಕೆಯಾಗಲಿ ಕಾರಣ ನಿಖರವಾಗಿ ತಿಳಿದುಬಂದಿಲ್ಲ.

ಹೊಸ ಮೆಣಸು ಮಾರುಕಟ್ಟೆಗೆ ಬರುವುದು ವಿಳಂಬವಾಗಿದೆ. ಆದ್ದರಿಂದ, ಒಂದು ವಾರದಿಂದ ಒಣ ಮೆಣಸಿನ ಬೆಲೆ ಹೆಚ್ಚಾಗುತ್ತಿದೆ. ಫೆಬ್ರವರಿ ಮೊದಲ ವಾರದಲ್ಲಿ ಹೊಸ ಮೆಣಸು ಬಂದರೆ ದರ ಕಡಿಮೆಯಾಗಬಹುದು ಎನ್ನುತ್ತಾರೆ ವರ್ತಕರು.

English summary
After onion Red Byadgi chilli price touched 33, 333 per quintal in Haveri marker of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X