ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಬ್ಬಬ್ಬಾ..! ಬ್ಯಾಡಗಿಯಲ್ಲಿ ಮದ್ಯಪ್ರಿಯರಿಗೆ ಅದೇನು ಶಿಸ್ತು?

|
Google Oneindia Kannada News

ಬ್ಯಾಡಗಿ, ಮೇ.04: ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನದಲ್ಲಿ ಮೂರನೇ ಅವಧಿಯ ಭಾರತ ಲಾಕ್ ಡೌನ್ ದೇಶಾದ್ಯಂತ ಮುಂದುವರಿದೆ. ಕರ್ನಾಟಕದಲ್ಲಿ ಹಸಿರು ವಲಯ ಎಂದು ಗುರುತಿಸಲ್ಪಿಟ್ಟಿರುವ ಪ್ರದೇಶಗಳಿಗೆ ಸರ್ಕಾರವು ಕೆಲವು ವಿನಾಯಿತಿಗಳನ್ನು ನೀಡಿದೆ.

Recommended Video

ಹಾವೇರಿ ಜಿಲ್ಲೆಯ ಆಡೂರಿನಲ್ಲಿ ಕೊರೊನ ತಪಾಸಣೆ | Haveri | Checking | Oneindia Kannada

ರಾಜ್ಯ ಸರ್ಕಾರದ ನೀಡಿರುವ ಎಲ್ಲ ವಿನಾಯಿತಿಗಿಂತಲೂ ಮದ್ಯಪ್ರಿಯರಿಗೆ ಅತಿಹೆಚ್ಚು ಖುಷಿ ಕೊಟ್ಟಿರವ ವಿಚಾರವೇ ಎಣ್ಣೆ ಅಂಗಡಿಗಳನ್ನು ತೆರೆಯಲು ಗ್ರೀನ್ ಸಿಗ್ನಿಲ್ ಕೊಟ್ಟಿರುವುದು. ಅದಕ್ಕೆ ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣ ಕೂಡಾ ಸಾಕ್ಷಿಯಾಯಿತು.

ಮದ್ಯ ಮಾರಾಟಕ್ಕೆ ಅನುಮತಿ: ಒಬ್ಬರು ಎಷ್ಟು ತೆಗೆದುಕೊಳ್ಳಬಹುದು?ಮದ್ಯ ಮಾರಾಟಕ್ಕೆ ಅನುಮತಿ: ಒಬ್ಬರು ಎಷ್ಟು ತೆಗೆದುಕೊಳ್ಳಬಹುದು?

ರಾಜ್ಯಾದ್ಯಂತ ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳಲ್ಲಿ ಎಂಎಸ್ಐಎಲ್ ಹಾಗೂ ಸಿಎಲ್-2 ಮದ್ಯದ ಅಂಗಡಿಗಳನ್ನು ತೆರೆಯಲು ಸರ್ಕಾರವು ಅನುಮತಿ ನೀಡಿದೆ. ಬೆಂಗಳೂರಿನ ಕೆಲವು ಕಂಟೇನ್ಮೆಂಟ್ ಝೋನ್ ಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

ಮದ್ಯದಂಗಡಿ ಎದುರು ಸಾಲುಗಟ್ಟಿ ನಿಂತ ಜನರು

ಮದ್ಯದಂಗಡಿ ಎದುರು ಸಾಲುಗಟ್ಟಿ ನಿಂತ ಜನರು

ಇಷ್ಟುದಿನ ದಿನಸಿ ಅಂಗಡಿ, ಬೇಕರಿಗಳು, ಹಾಲು ಮಾರಾಟ ಕೇಂದ್ರದ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದ ಜನರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸೋಮವಾರ ಮದ್ಯದ ಅಂಗಡಿಗಳ ಎದುರಿಗೆ ಜನರು ನೆರೆದಿದ್ದರು. ಬೆಳ್ಳಂಬೆಳಗ್ಗೆ ಎಣ್ಣೆ ಅಂಗಡಿ ಮುಂದೆ ಮದ್ಯಕ್ಕಾಗಿ ಸಾಲುಗಟ್ಟಿದ್ದರು.

ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿ

ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿ

ಬ್ಯಾಡಗಿ ಪಟ್ಟಣದ ಎಣ್ಣೆ ಅಂಗಡಿಗಳ ಎದುರಿಗೆ ಮದ್ಯಪ್ರಿಯರು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡವರು ಹುಬ್ಬೇರಿಸುವಂತಿತ್ತು. ದಿನಸಿ ಹಾಗೂ ಇತರೆ ಸರಕುಗಳ ಖರೀದಿಗೆ ಮುಗಿಬೀಳುತ್ತಿದ್ದ ಜನರು ಸೋಮವಾರ ಶಿಸ್ತುಬದ್ಧವಾಗಿ ಎಣ್ಣೆ ಅಂಗಡಿಗಳ ಮುಂದೆ ಸಾಲಿನಲ್ಲಿ ನಿಂತಿದ್ದರು. ಏಕೆಂದರೆ ನೂಕು ನುಗ್ಗಲು ಮಾಡಿದರೆ ಎಣ್ಣೆ ಅಂಗಡಿಗಳಿಗೆ ಮತ್ತೆ ಬೀಗ ಜಡಿಯುವುದಾಗಿ ಸರ್ಕಾರ ಮೊದಲೇ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ. ಇದೂ ಕೂಡಾ ಮದ್ಯಪ್ರಿಯರಿಗೆ ಶಿಸ್ತಿನ ಪಾಠವನ್ನು ಹೇಳಿಕೊಟ್ಟಂತೆ ಆಗಿದೆ.

ಅಂತರ ಕಾಯ್ದುಕೊಳ್ಳುವುದರಲ್ಲೂ ಶಿಸ್ತೋಶಿಸ್ತು!

ಅಂತರ ಕಾಯ್ದುಕೊಳ್ಳುವುದರಲ್ಲೂ ಶಿಸ್ತೋಶಿಸ್ತು!

ಮದ್ಯದ ಅಂಗಡಿಗಳ ಎದುರಿಗೆ ಕಟ್ಟಿಗೆ ಕಂಬಗಳನ್ನು ಹಾಕಲಾಗಿದೆ. ಮದ್ಯ ಖರೀದಿಗೆ ಆಗಮಿಸುವವರು ಸಾಲಿನಲ್ಲಿ ಆಗಮಿಸಬೇಕು ಹಾಗೂ ಕನಿಷ್ಠ 6 ಮೀಟರ್ ಅಂತರ ಕಾಯ್ದುಕೊಂಡಿರಬೇಕು. ಈ ಶಿಸ್ತಿನ ಉಸ್ತುವಾರಿ ನೋಡಿಕೊಳ್ಳೋದಕ್ಕೆ, ಗಲಾಟೆ ಆಗದಿರುವಂತೆ ಭದ್ರತೆಯನ್ನು ಕಾಪಾಡುವುದಕ್ಕಾಗಿ ನಗರದ ಪ್ರತಿಯೊಂದು ಎಣ್ಣೆ ಅಂಗಡಿಗಳ ಬಳಿ ಒಬ್ಬೊಬ್ಬ ಪೊಲೀಸರನ್ನು ನಿಯೋಜಿಸಲಾಗಿದೆ.

ಮಾಸ್ಕ್ ಹಾಕಿಕೊಂಡವರಿಗಷ್ಟೇ ಮದ್ಯದಂಗಡಿ ಪ್ರವೇಶ

ಮಾಸ್ಕ್ ಹಾಕಿಕೊಂಡವರಿಗಷ್ಟೇ ಮದ್ಯದಂಗಡಿ ಪ್ರವೇಶ

ಇನ್ನು, ಮದ್ಯ ಅಂಗಡಿಯೊಳಗೆ ಒಂದು ಬಾರಿಗೆ ಐದು ಜನರಿಗೆ ಮಾತ್ರ ಅವಕಾಶ ಎಂದು ಹೇಳಲಾಗಿದೆ. ಆದರೆ ಕನಿಷ್ಠ ಮೂವರಿಗಿಂತ ಹೆಚ್ಚು ಜನರನ್ನು ಮದ್ಯದ ಅಂಗಡಿಗಳೊಳಗೆ ಬಿಟ್ಟುಕೊಳ್ಳುತ್ತಿಲ್ಲ. ಅಲ್ಲಿಯೂ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ. ಸ್ವತಃ ಮದ್ಯದಂಗಡಿ ಮಾಲೀಕರೆ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಜೊತೆಗೆ ಮಾಸ್ಕ್ ಧರಿಸದೇ ಇರುವವರಿಗೆ ಅಂಗಡಿಯೊಳಗೆ ಪ್ರವೇಶವಿಲ್ಲ. ದುಡ್ಡು ಕೊಟ್ಟರೂ ಮಾಸ್ಕ್ ಧರಿಸದವರಿಗೆ ಎಣ್ಣೆ ಸಿಗುತ್ತಿಲ್ಲ.

English summary
Buy Alcohol While Maintaining Social Distance In Badagi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X