• search
 • Live TV
ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಖ್ಯಮಂತ್ರಿಗಳಿಗೆ ಟ್ವೀಟ್ ಬಾಣ ಬಿಟ್ಟ ಸಿದ್ದರಾಮಯ್ಯ!

|
Google Oneindia Kannada News

ಹಾವೇರಿ, ಅಕ್ಟೋಬರ್ 18; ಹಾನಗಲ್ ಕ್ಷೇತ್ರದ ಉಪ ಚುನಾವಣೆ ಪ್ರಚಾರ ದಸರಾ ಬಳಿಕ ರಂಗು ಪಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಪ್ರಚಾರ ಕಣಕ್ಕೆ ಧುಮುಕಿದ್ದಾರೆ.

ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ ಪರವಾಗಿ ಪ್ರಚಾರ ನಡೆಸಿದರು. ಶನಿವಾರ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದು, ಬಿಜೆಪಿ ನಾಯಕರ ವಿರುದ್ಧ ಟೀಕೆಗಳನ್ನು ಮಾಡಿದ್ದರು.

ಟ್ವೀಟ್‌ನಲ್ಲೇ ಕಿರಿಯ ಬಸವರಾಜ ಬೊಮ್ಮಾಯಿ ಕಿವಿ ಹಿಂಡಿದ ಸಿದ್ದರಾಮಯ್ಯ! ಟ್ವೀಟ್‌ನಲ್ಲೇ ಕಿರಿಯ ಬಸವರಾಜ ಬೊಮ್ಮಾಯಿ ಕಿವಿ ಹಿಂಡಿದ ಸಿದ್ದರಾಮಯ್ಯ!

ಭಾನುವಾರ ಬಸವರಾಜ ಬೊಮ್ಮಾಯಿ, "ಕಾಂಗ್ರೆಸ್ ನಾಯಕರು ಬೆಂಜ್ ಗಿರಾಕಿಗಳು. ಬೆಂಜ್ ಕಾರಲ್ಲಿ ಓಡಾಡ್ತಾರೆ, ಚಕ್ಕಡಿಯಲ್ಲಿ ಪ್ರತಿಭಟನೆ ಮಾಡುತ್ತಾರೆ. ಅವರದ್ದು ದೊಡ್ಡ ನಾಟಕ ಕಂಪನಿ" ಎಂದು ಟೀಕಾಪ್ರಹಾರ ಮಾಡಿದ್ದರು.

ಪೊಲೀಸರ ದಿರಿಸು ಬದಲಿಸಿದ ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಪ್ರಶ್ನೆ!ಪೊಲೀಸರ ದಿರಿಸು ಬದಲಿಸಿದ ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಪ್ರಶ್ನೆ!

ಸೋಮವಾರ ಟ್ವೀಟ್ ಮೂಲಕ ಮುಖ್ಯಮಂತ್ರಿಗಳಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 'ಕಾಂಗ್ರೆಸ್ ನಾಯಕರು ಬೆಂಜ್ ಕಾರಲ್ಲಿ ಓಡಾಡ್ತಾರೆ, ಚಕ್ಕಡಿ ಏರಿ ಪ್ರತಿಭಟನೆ ಮಾಡುತ್ತಾರೆ ಎಂದು ಕರ್ನಾಟಕದ ಮುಖ್ಯಮಂತ್ರಿಗಳು ಗೇಲಿ ಮಾಡಿದ್ದಾರೆ. ನೀವು ಓಡಾಡಲು ಮನೆಯಲ್ಲಿ ಎತ್ತಿನ ಬಂಡಿ ಇಟ್ಟುಕೊಂಡಿದ್ದೀರಾ ಬಸವರಾಜ ಬೊಮ್ಮಾಯಿ?" ಎಂದು ಪ್ರಶ್ನಿಸಿದ್ದಾರೆ.

ಹಾವೇರಿ ಸಹಕಾರಿ ಸಕ್ಕರೆ ಕಾರ್ಖಾನೆ ಮುಚ್ಚಿಸಿದ್ದೇ ಉದಾಸಿ, ಸಜ್ಜನರ್: ಸಿದ್ದರಾಮಯ್ಯ ಹಾವೇರಿ ಸಹಕಾರಿ ಸಕ್ಕರೆ ಕಾರ್ಖಾನೆ ಮುಚ್ಚಿಸಿದ್ದೇ ಉದಾಸಿ, ಸಜ್ಜನರ್: ಸಿದ್ದರಾಮಯ್ಯ

ಕಾಂಗ್ರೆಸ್ ನಾಯಕರ ಪ್ರತಿಭಟನೆ

ಕಾಂಗ್ರೆಸ್ ನಾಯಕರ ಪ್ರತಿಭಟನೆ

ಹಾನಗಲ್ ತಾಲೂಕು ಕ್ರೀಡಾಂಗಣದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದ ಬಸವರಾಜ ಬೊಮ್ಮಾಯಿ, "ಇತ್ತೀಚೆಗೆ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಚಕ್ಕಡಿ, ಸೈಕಲ್ ತೆಗೆದುಕೊಂಡು ವಿಧಾನಸೌಧಕ್ಕೆ ಬಂದಿದ್ದರು. ಸಿದ್ದರಾಮಯ್ಯ ಕೈಯಲ್ಲಿ ಹಗ್ಗ, ಡಿ. ಕೆ. ಶಿವಕುಮಾರ್ ಕೈಯಲ್ಲಿ ಬಾರಕೋಲು ಇತ್ತು" ಎಂದು ಹೇಳಿದ್ದರು. ಈ ಮೂಲಕ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಡೆಸಿದ್ದ ಪ್ರತಿಭಟನೆಯನ್ನು ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದರು.

ಜಿಲ್ಲೆಯ ಗೌರವದ ಪ್ರಶ್ನೆಯಾಗಿದೆ

ಜಿಲ್ಲೆಯ ಗೌರವದ ಪ್ರಶ್ನೆಯಾಗಿದೆ

"ಕಾಂಗ್ರೆಸ್ ನಾಯಕರು ಬೆಂಜ್ ಕಾರು ಗಿರಾಕಿಗಳು. ಇಂಥವರಿಂದ ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಿಲ್ಲ. ಹಾನಗಲ್ ನೆಲದಲ್ಲಿ ಇವರ ರಾಜಕೀಯ ನಡೆಯುವುದಿಲ್ಲ. ಇದು ಹಾನಗಲ್ ಜನರ ಭವಿಷ್ಯ ಬರೆಯುವ ಚುನಾವಣೆಯಾಗಿದೆ. ಇದು ಜಿಲ್ಲೆಯ ಜನರ ಗೌರವದ ಪ್ರಶ್ನೆಯಾಗಿದ್ದು, ಅದನ್ನು ಉಳಿಸುತ್ತೀರಿ ಎಂಬ ವಿಶ್ವಾಸವಿದೆ" ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದರು.

ಸಿದ್ದರಾಮಯ್ಯಗೆ ಅಚ್ಚೇದಿನ್ ಬರುವುದಿಲ್ಲ

ಸಿದ್ದರಾಮಯ್ಯಗೆ ಅಚ್ಚೇದಿನ್ ಬರುವುದಿಲ್ಲ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಕಾಂಗ್ರೆಸ್‌ನಲ್ಲಿ ಈಗ ಪಿಸುಮಾತಿನ ರಾಜಕಾರಣ ಆರಂಭವಾಗಿದೆ. ತನ್ನ ಜಾಗ ಭದ್ರಪಡಿಸಿಕೊಳ್ಳಲು, ದೆಹಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಸಿದ್ದರಾಮಯ್ಯ ತನ್ನ ಶಿಷ್ಯರ ಮೂಲಕ ಪಿಸುಮಾತು ಆಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅಚ್ಚೇದಿನ್ ಎಲ್ಲಿ? ಎಂದು ಕೇಳುತ್ತಾರೆ. ಕಾಂಗ್ರೆಸ್‌ನಲ್ಲಿ ಇರುವವರಿಗೆ ಸಿದ್ದರಾಮಯ್ಯಗೆ ಅಚ್ಛೇದಿನ್ ಬರುವುದಿಲ್ಲ" ಎಂದು ಲೇವಡಿ ಮಾಡಿದ್ದರು.

ಸಿದ್ದರಾಮಯ್ಯ ಟ್ವೀಟ್

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೋಮವಾರ ಟ್ವೀಟ್ ಮೂಲಕ ಬಸವರಾಜ ಬೊಮ್ಮಾಯಿಗೆ ತಿರುಗೇಟು ನೀಡಿದ್ದಾರೆ. 'ಕಾಂಗ್ರೆಸ್ ನಾಯಕರು ಬೆಂಜ್ ಕಾರಲ್ಲಿ ಓಡಾಡ್ತಾರೆ, ಚಕ್ಕಡಿ ಏರಿ ಪ್ರತಿಭಟನೆ ಮಾಡುತ್ತಾರೆ ಎಂದು ಕರ್ನಾಟಕದ ಮುಖ್ಯಮಂತ್ರಿಗಳು ಗೇಲಿ ಮಾಡಿದ್ದಾರೆ. ನೀವು ಓಡಾಡಲು ಮನೆಯಲ್ಲಿ ಎತ್ತಿನ ಬಂಡಿ ಇಟ್ಟುಕೊಂಡಿದ್ದೀರಾ ಬಸವರಾಜ ಬೊಮ್ಮಾಯಿ?" ಎಂದು ಪ್ರಶ್ನೆ ಮಾಡಿದ್ದಾರೆ.

  Ind vs Eng ಅಭ್ಯಾಸ ಪಂದ್ಯ ಇಂದು ಎಲ್ಲಿ , ಯಾವಾಗ ? | Oneindia Kannada
  ಮೈಸೂರಿನ ಜನ ನಿಮ್ಮನ್ನು ನಂಬಲಿಲ್ಲ

  ಮೈಸೂರಿನ ಜನ ನಿಮ್ಮನ್ನು ನಂಬಲಿಲ್ಲ

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಮೈಸೂರಿನ ಜನರೇ ನಿಮ್ಮ ಮೇಲೆ ವಿಶ್ವಾಸ ಇಟ್ಟಿಲ್ಲ. ಇನ್ನು ಹಾನಗಲ್‌ಗೆ ಬಂದು ಏನು ಮಾಡುತ್ತೀರಾ?. ಕೋವಿಡ್‌ ಸಂದರ್ಭದಲ್ಲಿ ಏನೋ ಸಾಧನೆ ಮಾಡಿದ್ದೇವೆ ಎಂದು ಹೇಳುತ್ತಿದ್ದೀರಿ. ಕೋವಿಡ್‌ ಆಸ್ಪತ್ರೆ ಮಾಡಿದ್ದು ನೋಡಿ, ನೀರಾವರಿ ಯೋಜನೆ ನೋಡಿ. ನಾವು ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ" ಎಂದು ಸಿದ್ದರಾಮಯ್ಯ ಟೀಕಿಸಿದರು.

  "ಉಪ ಚುನಾವಣೆಯಲ್ಲಿ ಹಾನಗಲ್‌ ಕ್ಷೇತ್ರದಲ್ಲಿ ಶಿವರಾಜ ಸಜ್ಜನರ ಗೆಲ್ಲಿಸಿದರೆ ನನ್ನನ್ನು ಗೆಲ್ಲಿಸಿದಂತೆ. ಇಲ್ಲಿಯ ಮಗನಾಗಿ ನಾನು ಸುಳ್ಳು ಹೇಳಲು ಸಾಧ್ಯವಿಲ್ಲ. ಇಲ್ಲೇ ಇರುತ್ತೇವೆ, ನಿಮ್ಮೊಂದಿಗೇ ಬದುಕುತ್ತೇವೆ. ಈ ಚುನಾವಣೆ ನನ್ನ ಪ್ರತಿಷ್ಠೆಯ ಪ್ರಶ್ನೆಯಲ್ಲ. ಇದು ಹಾನಗಲ್ ಕ್ಷೇತ್ರದ ಜನರ ಭವಿಷ್ಯದ ಪ್ರತಿಷ್ಠೆ. ಶಿವರಾಜ ಸಜ್ಜನರನ್ನು ಗೆಲ್ಲಿಸಿ" ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

  English summary
  Leader of opposition Siddaramaiah asked question to Karnataka chief minister Basavaraj Bommai for his comment of Benz car and Congress leaders.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X