ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ನಮಗೆ ಮೋಸ ಮಾಡಿದರು : ಬಿ.ಸಿ.ಪಾಟೀಲ್

|
Google Oneindia Kannada News

Recommended Video

ಸಿದ್ದರಾಮಯ್ಯ ನಮಗೆ ಮೋಸ ಮಾಡಿದರು : ಬಿ.ಸಿ.ಪಾಟೀಲ್

ಹಾವೇರಿ, ಆಗಸ್ಟ್ 05 : "ಅನರ್ಹಗೊಂಡ ಶಾಸಕರು ಸಿದ್ದರಾಮಯ್ಯ ಅವರ ಆಪ್ತರಾಗಿದ್ದವರು. ಮಂತ್ರಿ ಮಾಡುತ್ತೇವೆ ಎಂದು ಕರೆದು ಮೋಸ ಮಾಡಿದರು" ಎಂದು ಬಿ. ಸಿ. ಪಾಟೀಲ್ ಆರೋಪ ಮಾಡಿದರು.

ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ಸಿ. ಪಾಟೀಲ್ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಸೋಮವಾರ ಅವರು ಹಾವೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕಾಂಗ್ರೆಸ್ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಪುತ್ರಿಯ ಜೊತೆ ಯಡಿಯೂರಪ್ಪ ಭೇಟಿಯಾದ ಬಿ. ಸಿ. ಪಾಟೀಲ್!ಪುತ್ರಿಯ ಜೊತೆ ಯಡಿಯೂರಪ್ಪ ಭೇಟಿಯಾದ ಬಿ. ಸಿ. ಪಾಟೀಲ್!

BC Patil Upset With Former CM Siddaramaiah

"ಬಿಜೆಪಿಯಿಂದ ಆಹ್ವಾನ ಬರುತ್ತಿದೆ, ನಾನು ಯಾವುದೇ ತೀರ್ಮಾನವನ್ನು ಮಾಡಿಲ್ಲ. ಅನರ್ಹತೆ ಮಾಡಿದ್ದು ಕ್ರಮಬದ್ಧವಾಗಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ನಮಗೆ ಜಯ ಸಿಗುತ್ತದೆ" ಎಂದು ಬಿ. ಸಿ. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನೂ ಹತ್ತು ಶಾಸಕರು ರಾಜೀನಾಮೆ ಕೊಡ್ತಾರೆ: ಬಿಸಿ ಪಾಟೀಲ್ಇನ್ನೂ ಹತ್ತು ಶಾಸಕರು ರಾಜೀನಾಮೆ ಕೊಡ್ತಾರೆ: ಬಿಸಿ ಪಾಟೀಲ್

ಬಿ. ಸಿ. ಪಾಟೀಲ್ ಹೇಳಿದ್ದೇನು?

* ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಬಹಳ ಭರವಸೆ ಹೊಂದಿದ್ದೆ. ಆದರೆ, ಕೊನೆ ಘಳಿಗೆಯಲ್ಲಿ ಅವರು ಕೈ ಕೊಟ್ಟರು. ಮಂತ್ರಿ ಮಾಡುತ್ತೀವಿ ಅಂತ ಕರೆದು ಮೋಸ ಮಾಡಿದರು.

ಸರ್ಕಾರದ ವಿರುದ್ಧ ಕೆಂಪು ಬಾವುಟ ಹಾರಿಸಿದ ಶಾಸಕ ಬಿ.ಸಿ.ಪಾಟೀಲ್ಸರ್ಕಾರದ ವಿರುದ್ಧ ಕೆಂಪು ಬಾವುಟ ಹಾರಿಸಿದ ಶಾಸಕ ಬಿ.ಸಿ.ಪಾಟೀಲ್

* ಅನರ್ಹಗೊಂಡ ಶಾಸಕರು ಸಿದ್ದರಾಮಯ್ಯ ಅವರ ಆಪ್ತರಾಗಿದ್ದವರು. ಸಿದ್ದರಾಮಯ್ಯ ಅವರ ಸಮಾಜಕ್ಕೆ ಸೇರಿದ ನಾಲ್ಕು ಶಾಸಕರನ್ನೇ ಅವರು ಕೈ ಬಿಟ್ಟಿದ್ದಾರೆ. ಇನ್ನು ನಾನು ಯಾವ ಲೆಕ್ಕ.

* ಕುಮಾರಸ್ವಾಮಿ ಅವರದ್ದು ಒಂದು ಕುಟುಂಬದ ಆಡಳಿತ. ಕುಮಾರಸ್ವಾಮಿ ಮತ್ತು ದೇವೇಗೌಡರ ಕುಟುಂಬದ ಆಡಳಿತ ರಾಜ್ಯದಲ್ಲಿ 14 ತಿಂಗಳು ನಡೆಯಿತು.

* ಕಾಂಗ್ರೆಸ್‌ನ ಡಿ. ಕೆ. ಶಿವಕುಮಾರ್, ಜಿ. ಪರಮೇಶ್ವರ ಆಡಳಿತ ಮಾಡಿದರು. ಯಾವ ಸಚಿವರಿಗೂ ಸ್ವಾತಂತ್ರ ಸಿಗಲಿಲ್ಲ

* ನಾನು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗಿಲ್ಲ. ಅಪ್ಪ ಮಾಡಿದ ಆಸ್ತಿಯಲ್ಲಿ 10 ಎಕರೆ ಮಾರಾಟ ಮಾಡಿದ್ದೀನಿ.

English summary
Former Chief Minister Siddaramaiah cheated us alleged Hirekerur MLA B.C. Patil who disqualified and expelled from Congress. I have invitation to join BJP yet to take final decision he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X