ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೃಷಿ ಸಚಿವ ಬಿ.ಸಿ.ಪಾಟೀಲ್

|
Google Oneindia Kannada News

ಹಾವೇರಿ, ಮೇ.16: ಹಿರೇಕೇರೂರಿನಲ್ಲಿ ಕುಡಿಯುವ ನೀರಿನ ಘಟಕದ ಅವ್ಯವಸ್ಥೆ ಹಾಗೂ ಸುತ್ತಮುತ್ತಲ ಅಸ್ವಚ್ಛತೆ ಕಂಡು ಕೆಂಡಾಮಂಡಲವಾದ ಕೃಷಿ ಸಚಿವರು ಹಾಗೂ ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Recommended Video

ಹೇಳಿದ ಕೆಲ್ಸ ಮಾಡಿಲ್ಲ‌ ಅಂದ್ರೆ‌ ಸಸ್ಪೆಂಡ್ ಮಾಡ್ತೀನಿ | BC Patil Warning to Officers

ಇಂದು ಹಿರೇಕೇರೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ 2019-20 ನೇ ಸಾಲಿನ 5045 ಯೋಜನೆಯಡಿ ಚನ್ನಳ್ಳಿ ಗ್ರಾಮದಿಂದ ದೂದಿಹಳ್ಳಿ ಗ್ರಾಮದ ವರೆಗೆ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದರು.

ಹಾವೇರಿ; ಇನ್ನೇನು ಶವ ಹೂಳಬೇಕೆನ್ನುವಷ್ಟರಲ್ಲಿ ತಡೆದು ಗಂಟಲ ದ್ರವ ಸಂಗ್ರಹಿಸಿದ ಸಿಬ್ಬಂದಿಹಾವೇರಿ; ಇನ್ನೇನು ಶವ ಹೂಳಬೇಕೆನ್ನುವಷ್ಟರಲ್ಲಿ ತಡೆದು ಗಂಟಲ ದ್ರವ ಸಂಗ್ರಹಿಸಿದ ಸಿಬ್ಬಂದಿ

ಈ ಸಂದರ್ಭದಲ್ಲಿ ಚನ್ನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ಪರಿಶೀಲಿಸಿದರು. ಘಟಕದಲ್ಲಿ ಸರಿಯಾಗಿ ಕುಡಿಯುವ ನೀರು ಬರದಿರುವುದನ್ನು ಹಾಗೂ ಸುತ್ತಮುತ್ತ ಅಸ್ವಚ್ಛತೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜನರಿಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಸರ್ಕಾರ ಕಲ್ಪಿಸಿದೆ. ಕುಡಿಯುವ ನೀರಿನ ಘಟಕವಾಗಲೀ, ಇತರೆ ಏನೇ ಆಗಲೀ ತೊಂದರೆ ಕಂಡು ಬಂದಲ್ಲಿ ಅಥವಾ ಸಾರ್ವಜನಿಕರಿಂದ ದೂರು ಕೇಳಿ ಬಂದಲ್ಲಿ ಅಧಿಕಾರಿಗಳು ಅದರತ್ತ ಗಮನಹರಿಸಿ ಸರಿಪಡಿಸುವಲ್ಲಿ ಮುಂದಾಗಬೇಕು ಎಂದರು.

BC Patil Unhappy With Officers In Hirekerur

ಚನ್ನಹಳ್ಳಿ ಗ್ರಾಮ ಹಿರೇಕೆರೂರಿನಿಂದ 2 ಕಿ.ಮೀ.ದೂರವಿದೆ ಎಂದು ಇಓ ಶ್ರೀನಿವಾಸ ಹಾಗೂ ಪಿಡಿಓ ಸಬೂಬು ಹೇಳಿದಾಗ, ಇರುವ 2 ಕಿ.ಮೀ.ದೂರದಲ್ಲಿ ಅಧಿಕಾರಿಗಳು ಓಡಾಡುವುದಿಲ್ಲ ಎಂದರೇನು ಅರ್ಥ? ಸ್ವಚ್ಛತೆಯೂ ಇಲ್ಲ ಎಂದು ಗದರಿದರು.

ಆದಷ್ಟು ಬೇಗ ಇದನ್ನು ಸರಿಪಡಿಸದೇ ಹೋದಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸುವುದಾಗಿ ಬಿ.ಸಿ.ಪಾಟೀಲ್ ಎಚ್ಚರಿಸಿದರು. ಈ ಸಂದರ್ಭದಲ್ಲಿ ಉಗ್ರಾಣ ನಿಗಮದ ಅಧ್ಯಕ್ಷರಾದ ಯು.ಬಿ.ಬಣಕಾರ್, ಬಿಜೆಪಿಯ ಮುಖಂಡರು ಹಾಗೂ ಗ್ರಾಮ ಪಂಚಾಯತಿಯ ಸದಸ್ಯರು ಹಾಜರಿದ್ದರು.

English summary
BC Patil unhappy with officers who are not maintained clean in drinking water unit in Hirekerur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X