ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರೆಕೇರೂರಲ್ಲಿ ವಿಜಯ ಪತಾಕೆ ಹಾರಿಸಿದ ಬಿ.ಸಿ.ಪಾಟೀಲ್

|
Google Oneindia Kannada News

ಹಾವೇರಿ, ಡಿಸೆಂಬರ್ 09: ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಪ್ರತಿ ಮತ ಎಣಿಕೆ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಅವರು 29,194 ಮತಗಳ ಅಂತರದಿಂದ ಪ್ರತಿಸ್ಪರ್ಧಿ ಬಿ.ಹೆಚ್.ಬನ್ನಿಕೋಡ್ ಅವರನ್ನು ಪರಾಭವಗೊಳಿಸಿದ್ದಾರೆ.

ಡಿಸೆಂಬರ್ 05 ರಂದು ನಡೆದ ಉಪ ಚುನಾವಣೆಗೆ ಇಂದು ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿದ್ದ ಬಿ.ಸಿ.ಪಾಟೀಲ್ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧಿಸಿದ್ದರು.

ಹಿರೇಕೆರೂರು ಉಪ ಚುನಾವಣೆ: ಗೆಲುವಿನ ಕೇಕೆ ಹಾಕಿದ ಕೌರವ..!ಹಿರೇಕೆರೂರು ಉಪ ಚುನಾವಣೆ: ಗೆಲುವಿನ ಕೇಕೆ ಹಾಕಿದ ಕೌರವ..!

ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದ ಚುನಾವಣಾ ಪ್ರಚಾರದಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದರು. ಬಾಂಬೆ ನೋಟು, ಬನ್ನಿಕೋಡ್ ಗೆ ಓಟು ಅಂತೆಲ್ಲಾ ಮಾತನಾಡಿದ್ದರು. ಆದರೆ ಇದ್ಯಾವುದನ್ನು ತಲೆಗೆ ಹಾಕಿಕೊಳ್ಳದ ಹಿರೇಕೆರೂರು ಮತದಾರ ಬಿ.ಸಿ.ಪಾಟೀಲ್ ಅವರಿಗೆ ಜೈ ಅಂದಿದ್ದಾರೆ.

BC Patel With The Flag Of Victory At Hirekeruru

ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,83,481 ಮತದಾರರಿದ್ದಾರೆ. ಅದರಲ್ಲಿ ಈ ಉಪ ಚುನಾವಣೆಯಲ್ಲಿ 1,45,001 ಜನರು ಮತ ಚಲಾಯಿಸಿದ್ದರು. 79.03% ರಷ್ಟು ಮತದಾನವಾಗಿತ್ತು.

ಹಿರೇಕೆರೂರಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಅವರು ತಮ್ಮ ಸನಿಹ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಬಿ.ಹೆಚ್.ಬನ್ನಿಕೋಡ್ ಅವರನ್ನು 29.194 ಮತಗಳ ಅಂತರದಿಂದ ಸೋಲಿಸಿದ್ದಾರೆ.

English summary
The By Election Results Of The Hirekere Assembly Constituency Have Been Announced. BJP Candidate BC Patil Defeated Rival BH Bannikode By A Margin Of 29,194 Votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X