ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದುವೆ ತಂದ ಆಪತ್ತು: ರಾಣೇಬೆನ್ನೂರಿನ ಒಂದೇ ಕುಟುಂಬದ 32 ಜನರಿಗೆ ಕೊರೊನಾ ಸೋಂಕು

|
Google Oneindia Kannada News

ರಾಣೇಬೆನ್ನೂರು, ಜುಲೈ 17: ಮದುವೆ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. ವರನ ತಂದೆ ಹಾಗೂ ವಧುವಿನ ತಾಯಿ ಇಬ್ಬರೂ ಕೊರೊನಾ ವೈರಸ್ ಗೆ ಬಲಿಯಾಗಿದ್ದು, ಶುಕ್ರವಾರ ಒಂದೇ ದಿನ ಆ ಕುಟುಂಬದ 32 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

Recommended Video

B Srimalu ಆರೋಗ್ಯ ಸಚಿವರಾಗಿ ಹೀಗೆ ಹೇಳಬಾರದಿತ್ತಾ ? | Oneindia Kannada

ಜೂನ್ 29 ರಂದು ಮಾರುತಿ ನಗರದ 55 ವರ್ಷದ ವ್ಯಕ್ತಿಯೊಬ್ಬರು ತನ್ನ ಮಗನ ಮದುವೆ ಮಾಡಿದ್ದರು. ಅದೇ ದಿನ ಆ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕೊರೊನಾ ವೈರಸ್ ಸೋಂಕು ದೃಢಪಟ್ಟಿತ್ತು.

ಹಿರೇಕೆರೂರು, ರಟ್ಟಿಹಳ್ಳಿಯಲ್ಲಿ ಹೋದವರಿಗೆ ಗಂಟಲು ದ್ರವ್ಯ ತಪಾಸಣೆಹಿರೇಕೆರೂರು, ರಟ್ಟಿಹಳ್ಳಿಯಲ್ಲಿ ಹೋದವರಿಗೆ ಗಂಟಲು ದ್ರವ್ಯ ತಪಾಸಣೆ

ಜು.7 ರಂದು ಚಿಕಿತ್ಸೆ ಫಲಕಾರಿಯಾಗದೆ ವರನ ತಂದೆ ದಾವಣಗೆರೆಯಲ್ಲಿ ಮೃತಪಟ್ಟಿದ್ದರು. ಇದಾದ ನಾಲ್ಕು ದಿನದಲ್ಲಿ ಅಂದರೆ ಜು.11 ರಂದು ವಧುವಿನ ತಾಯಿ ಕೂಡ ಕೊರೊನಾ ಸೋಂಕಿಗೆ ಬಲಿಯಾಗಿದ್ದರು.

58 New Coronavirus Infection Cases Reported In Haveri District

ವರನ ತಂದೆಗೆ ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಒಂದೇ ಕುಟುಂಬದ 38 ಜನರನ್ನು ಅಂತರವಳ್ಳಿ ರಸ್ತೆಯ ಸರ್ಕಾರಿ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

ರಾಣೇಬೆನ್ನೂರು ಲಾಕ್ ಡೌನ್: ಹಾವೇರಿ ಜಿಲ್ಲಾಧಿಕಾರಿಯಿಂದ ಸ್ಪಷ್ಟನೆರಾಣೇಬೆನ್ನೂರು ಲಾಕ್ ಡೌನ್: ಹಾವೇರಿ ಜಿಲ್ಲಾಧಿಕಾರಿಯಿಂದ ಸ್ಪಷ್ಟನೆ

ಎಲ್ಲರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಆ ಪೈಕಿ 32 ಜನರಿಗೆ ಸೋಂಕು ದೃಢಪಟ್ಟಿದೆ. ಇನ್ನೂ 6 ಜನರ ವರದಿ ಬರುವುದು ಬಾಕಿಯಿದೆ.

58 New Coronavirus Infection Cases Reported In Haveri District

ಕೊರೊನಾ ಸೋಂಕು ಆರಂಭದಿಂದಲೂ ದಿನಕ್ಕೆ 1 ಅಥವಾ 2 ಪ್ರಕರಣ ಕಾಣಿಸಿಕೊಳ್ಳುತ್ತಿದ್ದ ವಾಣಿಜ್ಯ ನಗರಿ ರಾಣೆಬೆನ್ನೂರಿನಲ್ಲಿ ಮದುವೆ ಸಮಾರಂಭವೊಂದರ ಪರಿಣಾಮ ಇಂದು 32 ಜನರಿಗೆ ಸೋಂಕು ದೃಢಪಟ್ಟಿದ್ದು, ಜನತೆ ಬೆಚ್ಚಿ ಬಿದ್ದಿದ್ದಾರೆ. ಇಂದು ಹಾವೇರಿ ಜಿಲ್ಲೆಯಲ್ಲಿ 58 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 389 ಕ್ಕೆ ಏರಿಕೆಯಾಗಿದೆ.

English summary
58 cases of coronavirus were detected in the Haveri district today, and the total number of infected cases increased to 389.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X