• search
  • Live TV
ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೀಗೇಕಾಯ್ತು ಹಾವೇರಿ: ಒಂದೇ ದಿನ 50 ಮಂದಿಗೆ ಕೊರೊನಾವೈರಸ್ ಸೋಂಕು!

|

ಹಾವೇರಿ, ಜುಲೈ.22: ಕೊರೊನಾವೈರಸ್ ಸೋಂಕಿತ ಪ್ರಕರಣಗಳಲ್ಲಿ ಹಾವೇರಿ ಜಿಲ್ಲೆಯು ಸೇಫ್ ಆಗಿತ್ತು. ಮಹಾಮಾರಿಯಿಂದ ಅಷ್ಟೇನೂ ಅಪಾಯವಿಲ್ಲ ಎಂಬ ಜಿಲ್ಲೆಯ ಜನರ ನಂಬಿಕೆ ದಿನದಿಂದ ದಿನಕ್ಕೆ ಹುಸಿಯಾಗುತ್ತಿದೆ.

ಯಾಲಕ್ಕಿ ಕಂಪಿನ ನಗರದಲ್ಲಿ ಕೊರೊನಾವೈರಸ್ ಅಟ್ಟಹಾಸ ಮೆರೆಯುತ್ತಿದೆ. ಕಳೆದ 24 ಗಂಟೆಗಳಲ್ಲೇ ಜಿಲ್ಲೆಯಲ್ಲಿ ದಾಖಲೆಯ 50 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 583ಕ್ಕೆ ಏರಿಕೆಯಾಗಿದೆ.

ಮದುವೆ ತಂದ ಆಪತ್ತು: ರಾಣೇಬೆನ್ನೂರಿನ ಒಂದೇ ಕುಟುಂಬದ 32 ಜನರಿಗೆ ಕೊರೊನಾ ಸೋಂಕು

ಹಾವೇರಿ ಜಿಲ್ಲೆಯಲ್ಲಿ ಹೊಸ ಕೊವಿಡ್-19 ಸೋಂಕಿತ ಪ್ರಕರಣಗಳು ದಾಖಲಾಗುವುದರ ಜೊತೆಗೆ ಸೋಂಕಿನಿಂದ ಗುಣಮುಖರ ಸಂಖ್ಯೆಯೂ ಕೊಂಚ ಏರಿಕೆ ಕಾಣುತ್ತಿತ್ತು. ಆದರೆ ಕಳೆದ 24 ಗಂಟೆಗಳಲ್ಲಿ ಒಬ್ಬರೇ ಒಬ್ಬ ಸೋಂಕಿತರು ಗುಣಮುಖರಾಗಿಲ್ಲ ಎನ್ನುವುದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಒಂದೇ ದಿನ ಮಹಾಮಾರಿಗೆ ಜಿಲ್ಲೆಯಲ್ಲಿ ನಾಲ್ಕು ಬಲಿ:

ಕೊರೊನಾವೈರಸ್ ಸೋಂಕಿತರ ಸಂಖ್ಯೆಯಷ್ಟೇ ಏರಿಕೆಯಾಗುತ್ತಿಲ್ಲ. ಬದಲಿಗೆ ಜಿಲ್ಲೆಯಲ್ಲಿ ಮಹಾಮಾರಿಯಿಂದಾಗಿ ಸಾವಿನ ಮನೆ ಸೇರುತ್ತಿರುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಒಂದೇ ದಿನದಲ್ಲಿ ನಾಲ್ಕು ಜನರು ಕೊವಿಡ್-19ಗೆ ಪ್ರಾಣ ಬಿಟ್ಟಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಇದುವರೆಗೂ ಮಹಾಮಾರಿಗೆ 19 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

English summary
50 New Coronavirus Cases Reported in Haveri Today, District Tally Rise to 583.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X