ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವಾದ ಸುಖಾಂತ್ಯ; ರಸ್ತೆ ನಿರ್ಮಾಣ ಕೈ ಬಿಟ್ಟ ಯಶ್ ಕುಟುಂಬ

|
Google Oneindia Kannada News

ಹಾಸನ, ಮಾರ್ಚ್ 16; ಹಾಸನ ಜಿಲ್ಲೆಯ ದುದ್ದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ರಸ್ತೆ ನಿರ್ಮಾಣ ವಿವಾದ ಬಗೆಹರಿದಿದೆ. ನಟ ಯಶ್ ಕುಟುಂಬದವರು ತಮ್ಮ ತೋಟದ ಮನೆಗೆ ಹೊಸ ರಸ್ತೆ ನಿರ್ಮಿಸುವ ಯೋಜನೆ ಕೈಬಿಟ್ಟಿದ್ದಾರೆ.

ಮಂಗಳವಾರ ಹಾಸನ ತಾಲೂಕಿನ ದುದ್ದ ಹೋಬಳಿಯ ತಿಮಲಾಪುರ ಗ್ರಾಮದಲ್ಲಿ ರೈತರ ಜೊತೆ ನಡೆದ ಸಭೆಯಲ್ಲಿ ವಿವಾದ ಬಗೆಹರಿದಿದೆ. ಗ್ರಾಮದ ಭೈರವೇಶ್ವರ ದೇವಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ ಯಶ್ ಮ್ಯಾನೇಜರ್ ಚೇತನ್ ಪಾಲ್ಗೊಂಡಿದ್ದರು.

ಹಾಸನ; ಏನಿದು ನಟ ಯಶ್ ಭೂಮಿ, ರಸ್ತೆ ವಿವಾದ?ಹಾಸನ; ಏನಿದು ನಟ ಯಶ್ ಭೂಮಿ, ರಸ್ತೆ ವಿವಾದ?

"ಹೊಸ ರಸ್ತೆ ನಿರ್ಮಾಣ ವಿಚಾರ ಕೈಬಿಡಲಾಗಿದೆ. ಹಳೇ ರಸ್ತೆ ಮೂಲಕವೇ ತೋಟದ ಮನೆಗೆ ಓಡಾಟ ನಡೆಸಲಾಗುತ್ತದೆ. ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತದೆ" ಎಂದು ರೈತರಿಗೆ ಭರವಸೆಯನ್ನು ಚೇತನ್ ನೀಡಿದರು.

ಹಾಸನ ವಿಮಾನ ನಿಲ್ದಾಣ ಜಾಗದ; ವಿದ್ಯುತ್ ಮಾರ್ಗ ಸ್ಥಳಾಂತರಕ್ಕೆ ಸೂಚನೆಹಾಸನ ವಿಮಾನ ನಿಲ್ದಾಣ ಜಾಗದ; ವಿದ್ಯುತ್ ಮಾರ್ಗ ಸ್ಥಳಾಂತರಕ್ಕೆ ಸೂಚನೆ

Yash Family Members Stopped Road Construction For Farm House

ರಸ್ತೆ ನಿರ್ಮಾಣ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ರೈತರಾದ ರಮೇಶ್, ಕಾಂತರಾಜು ಇದಕ್ಕೆ ಒಪ್ಪಿಗೆ ನೀಡಿದರು. "ಯಶ್ ಜಮೀನಿಗೆ ಹೋಗಲು ಮುಂದಿನ ದಿನಗಳಲ್ಲಿ ಹೊಸ ರಸ್ತೆಯ ಅವಶ್ಯಕತೆ ಇದ್ದಲ್ಲಿ ಜಾಗವನ್ನು ತಾವೇ ಬಿಟ್ಟುಕೊಡುತ್ತೇವೆ" ಎಂದು ಭರವಸೆಯನ್ನು ಕೊಟ್ಟರು.

ಮೈಸೂರು; ಮೂಡಾ ಸೈಟ್ ಇ- ಹರಾಜು, ವಿವರಗಳು ಮೈಸೂರು; ಮೂಡಾ ಸೈಟ್ ಇ- ಹರಾಜು, ವಿವರಗಳು

ಏನಿದು ವಿವಾದ; ನಟ ಯಶ್ ತಿಮಲಾಪುರ ಗ್ರಾಮದಲ್ಲಿ 8 ವರ್ಷಗಳ ಹಿಂದೆ ಸುಮಾರು 50 ಎಕರೆಗೂ ಹೆಚ್ಚು ಭೂಮಿ ಖರೀದಿ ಮಾಡಿದ್ದಾರೆ. ಈ ಜಾಗದಲ್ಲಿ ತೆಂಗು, ಮಾವು ಸೇರಿದಂತೆ ವಿವಿಧ ಬೆಳೆ ಬೆಳೆದಿದ್ದಾರೆ.

ತೋಟದ ಮನೆಗೆ ಹೋಗಲು ಹೊಸ ರಸ್ತೆ ನಿರ್ಮಾಣ ಮಾಡಲು ಮಾರ್ಚ್‌ 10ರಂದು ಯಶ್ ತಂದೆ ಅರುಣ್ ಕುಮಾರ್ ಮತ್ತು ತಾಯಿ ಪುಷ್ಪಾ ಕೆಲಸಗಾರರ ಜೊತೆ ಹೋಗಿದ್ದರು. ಆಗ ಅಕ್ಕ-ಪಕ್ಕದ ಜಮೀನಿನ ರೈತರು ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಗಲಾಟೆಯೂ ನಡೆದಿತ್ತು.

ಗ್ರಾಮಸ್ಥರು ಮತ್ತು ಯಶ್ ಬೆಂಬಲಿಗರು, ತಂದೆ-ತಾಯಿ ಜೊತೆ ಮಾತಿನ ಚಕಮಕಿ ನಡೆದಿತ್ತು. ಈ ವಿವಾದ ದುದ್ದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ನಟ ಯಶ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು.

Recommended Video

ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡುವ ಪ್ರಸ್ತಾಪ ಇಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ | Oneindia Kannada

ಸ್ಥಳೀಯ ರೈತರಿಗೆ ಯಾವುದೇ ತೊಂದರೆ ಮಾಡುವುದಿಲ್ಲ ಎಂದು ರೈತರು ಹೇಳಿದ್ದರು. ಮಾತುಕತೆ ಮೂಲಕ ಈಗ ವಿವಾದವನ್ನು ಬಗೆಹರಿಸಿಕೊಂಡಿದ್ದಾರೆ.

English summary
Kannada film actor Yash family members stopped new road construction for farm house in Hassan. Road issue witnessed for heated argument by residents of Thimmalapura, Hassan over a land dispute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X