• search
 • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಾಸನ; ಏನಿದು ನಟ ಯಶ್ ಭೂಮಿ, ರಸ್ತೆ ವಿವಾದ?

|
Google Oneindia Kannada News

ಹಾಸನ, ಮಾರ್ಚ್ 10; ರಾಕಿಂಗ್ ಸ್ಟಾರ್ ಯಶ್, ಅಭಿಯಾನಿಗಳ ಪ್ರೀತಿಯ ರಾಕಿ ಭಾಯ್ ಸುದ್ದಿಯಲ್ಲಿದ್ದಾರೆ. ಕೆಜಿಎಫ್-2 ಸಿನಿಮಾ ಬಿಡುಗಡೆ ತಡವಿದೆ. ಆದರೆ, ಯಶ್ ಸುದ್ದಿಯಾಗಿರುವುದು ಭೂಮಿಯ ವಿಚಾರಕ್ಕೆ. ಗ್ರಾಮಗಳಲ್ಲಿ ಭೂಮಿ, ರಸ್ತೆ ನಿರ್ಮಾಣಕ್ಕಾಗಿ ನಡೆಯುವ ವಿವಾದ ಈಗ ಯಶ್ ಕುಟುಂಬಕ್ಕೂ ಸುತ್ತಿಕೊಂಡಿದೆ.

ಹಾಸನ ಜಿಲ್ಲೆಯ ದುದ್ದ ಪೊಲೀಸ್ ಠಾಣೆಗೆ ಯಶ್ ಮಂಗಳವಾರ ಭೇಟಿ ನೀಡಿದ್ದರು. ಯಶ್ ವಾಪಸ್ ಹೋಗುವಾಗ ಗ್ರಾಮಸ್ಥರು ಅವರ ಕಾರನ್ನು ಅಡ್ಡಗಟ್ಟಿ ಘೋಷಣೆ ಕೂಗಿದರು. ಠಾಣೆ ಮುಂದೆ ಹೈಡ್ರಾಮ ನಡೆಯಿತು. ರೈತರು ಸಹ ಭೂ ವಿವಾದದ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ, ಯಶ್ ಪೋಷಕರು ಸಹ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ.

ಹಾಸನ ವಿಮಾನ ನಿಲ್ದಾಣ ಜಾಗದ; ವಿದ್ಯುತ್ ಮಾರ್ಗ ಸ್ಥಳಾಂತರಕ್ಕೆ ಸೂಚನೆಹಾಸನ ವಿಮಾನ ನಿಲ್ದಾಣ ಜಾಗದ; ವಿದ್ಯುತ್ ಮಾರ್ಗ ಸ್ಥಳಾಂತರಕ್ಕೆ ಸೂಚನೆ

ಯಶ್ ತಂದೆ ಅರುಣ್ ಕುಮಾರ್ ಮತ್ತು ತಾಯಿ ಪುಷ್ಪಾ ಜಮೀನಿಗೆ ರಸ್ತೆ ಮಾಡಿಸಲು, ಬೇಲಿ ಹಾಕಿಸಲು ಹೋದಾಗ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಿವಾದ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಿವಾದವನ್ನು ಬಗೆಹರಿಸಲು ಯಶ್ ಅಖಾಡಕ್ಕೆ ಇಳಿದಿದ್ದಾರೆ.

 ಮೈಸೂರು; ಭೂಮಿ ಕೊಟ್ಟವರಿಗೆ ಉದ್ಯೋಗ ಕೊಟ್ಟ ಏಷಿಯನ್ ಪೇಂಟ್ಸ್ ಮೈಸೂರು; ಭೂಮಿ ಕೊಟ್ಟವರಿಗೆ ಉದ್ಯೋಗ ಕೊಟ್ಟ ಏಷಿಯನ್ ಪೇಂಟ್ಸ್

ಒಂದೂವರೆ ವರ್ಷದ ಹಿಂದೆಯೇ ಯಶ್ ಅವರಿಗೆ ರಸ್ತೆಗಾಗಿ ಜಮೀನು ಕೊಟ್ಟಿದ್ದೆವು. ಈಗ ಮತ್ತೆ ರೈತರ ಜಮೀನಿನಲ್ಲಿ ರಸ್ತೆ ಬೇಕು ಎನ್ನುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಪೊಲೀಸ್ ಠಾಣೆಗೆ ಹೋಗುವ ಬದಲು ನಮ್ಮ ಜೊತೆ ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತಿತ್ತು ಎಂಬುದು ಗ್ರಾಮಸ್ಥರ ಹೇಳಿಕೆಯಾಗಿದೆ.

ಮೂರು ವರ್ಷದ ಬಳಿಕ ಎಡಿಡಿ ಇಂಜಿನಿಯರಿಂಗ್‌ಗೆ ಸಿಕ್ಕಿತು ಭೂಮಿ ಮೂರು ವರ್ಷದ ಬಳಿಕ ಎಡಿಡಿ ಇಂಜಿನಿಯರಿಂಗ್‌ಗೆ ಸಿಕ್ಕಿತು ಭೂಮಿ

ಏನಿದು ಭೂ ವಿವಾದ?

ಏನಿದು ಭೂ ವಿವಾದ?

ಹಾಸನ ತಾಲೂಕಿನ ದುದ್ದ ಹೋಬಳಿಯ ತಿಮಲಾಪುರ ಗ್ರಾಮದಲ್ಲಿ 8 ವರ್ಷಗಳ ಹಿಂದೆ ಯಶ್ 50 ಎಕರೆಗೂ ಹೆಚ್ಚು ಭೂಮಿ ಖರೀದಿ ಮಾಡಿದ್ದಾರೆ. ಈ ಜಾಗದಲ್ಲಿ ತೆಂಗು, ಮಾವು ಸೇರಿದಂತೆ ವಿವಿಧ ಬೆಳೆ ಬೆಳೆಯಲಾಗಿದೆ. ಫಾರ್ಮ್ ಹೌಸ್ ಕೂಡಾ ನಿರ್ಮಾಣ ಮಾಡಲಾಗಿದೆ. ಈ ಜಾಗಕ್ಕೆ ರಸ್ತೆ ನಿರ್ಮಾಣ ಮಾಡಲು ಮಂಗಳವಾರ ಕೆಲಸ ನಡೆಸಲು ಜೆಸಿಬಿ ತರಲಾಗಿತ್ತು, ಯಶ್ ತಂದೆ, ತಾಯಿ ಸಹ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಕ್ಕ-ಪಕ್ಕದ ಜಮೀನಿನ ರೈತರು ಅಡ್ಡಿ ಮಾಡಿದ್ದಾರೆ. ಆಗ ಗ್ರಾಮಸ್ಥರು ಮತ್ತು ಯಶ್ ಬೆಂಬಲಿಗರು, ತಂದೆ-ತಾಯಿ ಜೊತೆ ಮಾತಿನ ಚಕಮಕಿ ನಡೆದಿದೆ. ಈ ವಿವಾದ ದುದ್ದ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ವಿವಾದ

ಪೊಲೀಸ್ ಠಾಣೆ ಮೆಟ್ಟಿಲೇರಿದ ವಿವಾದ

ಗಲಾಟೆ ನಡೆದು ಹೊಡೆದಾಟದ ಹಂತ ತಲುಪಿದಾಗ ದುದ್ದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಆದರೆ, ಘಟನೆ ಕುರಿತು ಗ್ರಾಮದ ರೈತರಾದ ರಮೇಶ್, ಕಾಂತರಾಜ್ ಈ ಕುರಿತು ಪೊಲೀಸರಿಗೆ ದೂರು ನೀಡಿದರು. ಯಶ್ ತಂದೆ-ತಾಯಿ ಸಹ ಪೊಲೀಸ್ ಠಾಣೆಗೆ ಆಗಮಿಸಿದರು. ಮಂಗಳವಾರ ವಿವಾದ ಬಗೆಹರಿಸಲು ಯಶ್ ಸ್ಥಳಕ್ಕೆ ಭೇಟಿ ನೀಡಿದ್ದರು. ಅವರು ದುದ್ದ ಪೊಲೀಸ್ ಠಾಣೆಗೂ ಭೇಟಿ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಯಶ್ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿವಾದ ಇನ್ನೂ ಬಗೆಹರಿದಿಲ್ಲ.

ಈಗ ಬಣ್ಣ ಕಟ್ಟುತ್ತಿದ್ದಾರೆ

ಈಗ ಬಣ್ಣ ಕಟ್ಟುತ್ತಿದ್ದಾರೆ

ಮಂಗಳವಾರ ದುದ್ದ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ನಟ ಯಶ್ ಮಾಧ್ಯಮಗಳ ಜೊತೆ ಮಾತನಾಡಿದರು. "ರಸ್ತೆ ವಿವಾದ ಒಂದೂವರೆ ವರ್ಷದ ಹಿಂದೆಯೇ ಮುಗಿದಿದೆ. ಈಗ ಎಲ್ಲದಕ್ಕೂ ಬಣ್ಣ ಕಟ್ಟಲಾಗುತ್ತಿದೆ. ನೀವು ನಂಬುವುದಕ್ಕೆ ಹೋಗಬೇಡಿ. ತಂದೆ-ತಾಯಿಗೆ ಮಾತನಾಡಿದರೆ ಇಮೇಜ್ ನೋಡಿಕೊಂಡು ಕೂರಲು ಆಗುವುದಿಲ್ಲ" ಎಂದು ಹೇಳಿದ್ದಾರೆ.

  ನನ್ನ ವಿರುದ್ಧ ತೆವಲಿಗೆ ಮಾತನಾಡುವುದು ನಿಲ್ಲಿಸಬೇಕು-ಹೆಚ್ ಡಿಕೆಗೆ ಪರೋಕ್ಷವಾಗಿ ಕಲ್ಲಹಳ್ಳಿ ಟಾಂಗ್ | Oneindia Kannada
  ಜಮೀನು ಮಾಲೀಕರು ಹೇಳುವುದೇನು?

  ಜಮೀನು ಮಾಲೀಕರು ಹೇಳುವುದೇನು?

  ರಸ್ತೆ ನಿರ್ಮಾಣದ ವಿವಾದಕ್ಕೆ ಕಾರಣವಾಗಿರುವ ಜಾಗ ಕೃಷ್ಣೇಗೌಡ, ಸಿದ್ದರಾಮು ಎಂಬ ರೈತರಿಗೆ ಸೇರಿದೆ. "ನಮ್ಮನ್ನು ಕೇಳದೇ ಜಮೀನಿನಲ್ಲಿ ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ನಾವು ಇದಕ್ಕೆ ಅವಕಾಶ ನೀಡುವುದಿಲ್ಲ. ಯಶ್‌ ಅವರಿಗೆ ಗೌರವ ಕೊಟ್ಟು ರಸ್ತೆಗಾಗಿ ಜಾಗ ಕೊಟ್ಟಿದ್ದೆವು. ಒಂದೂವರೆ ವರ್ಷದ ಹಿಂದೆ ಜಾಗ ನೀಡಲಾಗಿದೆ. ಈಗ ಮತ್ತೆ ಜಮೀನಿನಲ್ಲಿ ರಸ್ತೆ ಮಾಡುತ್ತಿದ್ದಾರೆ. ನಮಗೆ ಇರುವುದು ತುಂಡು ಭೂಮಿ ಅದನ್ನು ರಸ್ತೆಗೆ ಬಳಸಿಕೊಂಡರೆ ನಾವು ಜೀವನಕ್ಕೆ ಏನು ಮಾಡಬೇಕು?" ಎಂದು ಕೃಷ್ಣೇಗೌಡ ಪ್ರಶ್ನಿಸಿದ್ದಾರೆ.

  English summary
  Kannada film actor Yash family members witnessed for heated argument by residents of Thimmalapura, Hassanover a land dispute. Now issue went to Dudda police station.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X