ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಧಿಕಾರ ವ್ಯಾಮೋಹ ಬಿಟ್ಟು, ಪಕ್ಷಕ್ಕಾಗಿ ದುಡಿಯಿರಿ: ಕಾರ್ಯಕರ್ತರಿಗೆ ಡಿಕೆ ಸುರೇಶ್ ಕರೆ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ: ಪಕ್ಷಕಿಂತ ವ್ಯಕ್ತಿ ಮುಖ್ಯವಲ್ಲ, ಎಲ್ಲರೂ ಸಮಾನರು, ಕೇವಲ ಟಿಕೆಟ್‌ಗಾಗಿ ಓಡಾಡಿದರೆ ಪಕ್ಷಕ್ಕೆ ಯಾವುದೇ ಪ್ರಯೋಜನವಿಲ್ಲ, ವಿರೋಧಿ ಪಕ್ಷಗಳ ವೈಫಲ್ಯಗಳನ್ನು ಆಯಾ ಕ್ಷೇತ್ರದ ಜನತೆಗೆ ತಿಳಿಸುವ ಕೆಲಸ ಮಾಡಬೇಕು ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

ಹಾಸನ ಜಿಲ್ಲೆ ಬೇಲೂರು ನಗರದ ಹೊರ ವಲಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ನವ ಸಂಕಲ್ಪ ಚಿಂತನ ಶಿಬಿರದಲ್ಲಿ ಮಾತಾಡಿದ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿದರೆ ಮಾತ್ರ ನಾವು ಅಧಿಕಾರ ಹಿಡಿಯಲು ಸಾಧ್ಯ, ಕೇವಲ ಟಿಕೆಟ್‌ಗಾಗಿ ಓಡಾಡಿದರೆ ಪಕ್ಷಕ್ಕೆ ಯಾವುದೇ ಪ್ರಯೋಜನವಿಲ್ಲ, ವಿರೋಧಿ ಪಕ್ಷಗಳ ವೈಫಲ್ಯಗಳನ್ನು ಆಯಾ ಕ್ಷೇತ್ರದ ಜನತೆಗೆ ತಿಳಿಸುವ ಕೆಲಸದ ಜೊತೆ ನಮ್ಮ ಪಕ್ಷದಿಂದ ಜನತೆಗೆ ಆಗುವ ಉಪಯೋಗಗಳನ್ನು ತಿಳಿಸುವ ಕೆಲಸವೇ ಈ ಚಿಂತನ ಶಿಬಿರ ಎಂದು ತಿಳಿಸಿದರು.

ನಾನೇ ಕರ್ನಾಟಕದ ಮುಂದಿನ ಮುಖ್ಯಮಂತ್ರಿ: ಕುಮಾರಸ್ವಾಮಿ ವಿಶ್ವಾಸನಾನೇ ಕರ್ನಾಟಕದ ಮುಂದಿನ ಮುಖ್ಯಮಂತ್ರಿ: ಕುಮಾರಸ್ವಾಮಿ ವಿಶ್ವಾಸ

ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರಲ್ಲಿ ಶಕ್ತಿ ತುಂಬುವ ಕೆಲಸ ಮಾಡಬೇಕು ಹಿಜಾಬ್, ಅಜಾನ್, ವ್ಯಾಪಾರಿಕಾರಣ, ಪಠ್ಯಪುಸ್ತಕ ಪರಿಸ್ಕರಣೆ, ದಾರ್ಶನಿಕರಿಗೆ ಮಾಡಿರುವ ಅವಮಾನ, ಇನ್ನೂ ಮುಂತಾದ ವಿಚಾರಗಳ ಬಗ್ಗೆ ಕಾಂಗ್ರೆಸ್ ಪಕ್ಷ ಹೋರಾಟ ಮಾಡಬೇಕಿದೆ. ಅದಕ್ಕಾಗಿ ಸದಸ್ಯರೆಲ್ಲರೂ ಹಗಲಿರುಳು ದುಡಿಯುವ ಕೆಲಸ ಮಾಡಬೇಕು ಎಂದರು.

Work together for Party Success: DK Suresh call to Activists

ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಜನರ ನೋಂದಣಿಯಾಗಬೇಕಿದೆ, ಸಮಿತಿಗಳನ್ನು ರಚಿಸಿ ಸದಸ್ಯರುಗಳಿಗೆ ನವ ಚೈತನ್ಯ ತುಂಬುವ ಕೆಲಸವನ್ನು ಈ ಶಿಬಿರದ ಮೂಲಕ ಮಾಡಬೇಕು ಎಂದು ಸುರೇಶ್ ತಿಳಿಸಿದರು.

ಮಾಜಿ ಸಂಸದ ಹಾಗೂ 7 ಜಿಲ್ಲೆಗಳ ಉಸ್ತುವಾರಿ ಆಗಿರುವ ಧ್ರುವ ನಾರಾಯಣ್ ಮಾತನಾಡಿ, ಮೊದಲು ಅಧಿಕಾರ ವ್ಯಮೋಹ ಬಿಡಬೇಕು, ಪಕ್ಷಕ್ಕಾಗಿ ದುಡಿಯುವ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ನಮ್ಮ ಪಕ್ಷದ ತತ್ವ, ಸಿದ್ದಾಂತದ ಬಗ್ಗೆ ಹೇಳುವಂತ ನಾಯಕರು ಬೇಕೆ ಹೊರತು ಕೇವಲ ರಾಜ್ಯ ನಾಯಕರ ಜೊತೆ ತೊರ್ಪಡಿಕೆ ಸದಸ್ಯರು ನಮ್ಮ ಪಕ್ಷಕ್ಕೆ ಅವಶ್ಯಕತೆ ಇಲ್ಲ, ಪ್ರತಿ ಜಿಲ್ಲೆಗೆ ಒಂದು ಪ್ರಣಾಳಿಕೆ ಹೊರಡಿಸಬೇಕು. ಪ್ರಣಾಳಿಕೆಯ ಅಂಶವನ್ನು ಜನತೆಗೆ ಮುಟ್ಟುವಂತೆ ಜಾಗೃತಿ ಮೂಡಿಸಬೇಕು ಎಂದರು.

ದೇವೇಗೌಡರ ಬಗ್ಗೆ ಹೇಳಿಕೆ: ರಾಜಣ್ಣ ಮಾನಸಿಕ ಅಸ್ವಸ್ಥ ಎಂದ ಶ್ರೀಕಂಠೇಗೌಡದೇವೇಗೌಡರ ಬಗ್ಗೆ ಹೇಳಿಕೆ: ರಾಜಣ್ಣ ಮಾನಸಿಕ ಅಸ್ವಸ್ಥ ಎಂದ ಶ್ರೀಕಂಠೇಗೌಡ

ಕಾಂಗ್ರೆಸ್ ನಿಂದ ದೇಶದ ಪ್ರತಿಯೊಬ್ಬ ಪ್ರಜೆಗೂ ಅನುಕೂಲವಾಗಿದೆ, ಸ್ವತಂತ್ರಕ್ಕಾಗಿ ಹೋರಾಡಿದ ಪಕ್ಷವೆಂದರೆ ಅದು ಕಾಂಗ್ರೆಸ್ ಪಕ್ಷ, ತ್ಯಾಗ, ಬಲಿದಾನ ಮಾಡಿರುವ ಪಕ್ಷವೆಂದರೆ ನಮ್ಮ ಪಕ್ಷ. ಜಿಲ್ಲೆಯ 7 ಕ್ಷೇತ್ರಗಳಲ್ಲೂ ಪಾದಯಾತ್ರೆ ಮಾಡಿ ಪಕ್ಷದ ಕೊಡುಗೆಯನ್ನು ಜನತೆಗೆ ತಲುಪಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಿದರೆ 2023 ಕ್ಕೆ ನಮ್ಮ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದರಲ್ಲಿ ಅನುವನವಿಲ್ಲ ಎಂದರು.

Work together for Party Success: DK Suresh call to Activists

Recommended Video

ಧೋನಿ ಮಾಡಿದ ನಂಬಿಕೆ ದ್ರೋಹವನ್ನ ಬಿಚ್ಚಿಟ್ಟ ಆಟಗಾರರು | *Cricket | OneIndia Kannada

ಬಿಜೆಪಿ ಹಾಗೂ ಜೆಡಿಎಸ್ ಎರಡು ಪಕ್ಷಗಳು ಒಂದೇ ನಾಣ್ಯದ ಮುಖಗಳು ಇದ್ದಂತೆ, ರಾಷ್ಟ್ರಪತಿ ಚುನಾವಣೆಯಲ್ಲಿ ಮಮತಾ ಜೊತೆ ಮಾತುಕತೆ ನಡೆಸಿ ನಂತರ ತಮ್ಮ ನಿಲುವನ್ನೇ ಬದಲಿಸಿದ, ತತ್ವ, ಸಿದ್ದಾಂತ ಇಲ್ಲದ ಪಕ್ಷವೆಂದರೆ ಅದು ಜೆಡಿಎಸ್ ಎಂದು ಕಿಡಿಕಾರಿದರು.

English summary
Nobody greater than party, work together for party success in next election, DK Suresh call to Activism in Hassan Chintan shivir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X