ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಸಿಲೆ ಘಾಟಿಯ ಕಾಡಾನೆ ದಾಳಿಯಲ್ಲಿ ವಾಹನದಲ್ಲಿದ್ದವರು ಅಪಾಯದಿಂದ ಪಾರು, ಬಚಾವ್ ಮಾಡಿದ್ದು ಯಾರು?!

|
Google Oneindia Kannada News

ಹಾಸನ, ಅಕ್ಟೋಬರ್. 30: ರಸ್ತೆಯಲ್ಲಿ ಬರುತ್ತಿದ್ದ ವಾಹನದ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಸೋಮವಾರ ತಡರಾತ್ರಿ (ಅ.29) ಬಿಸಿಲೆ ಘಾಟ್ ನಲ್ಲಿ ನಡೆದಿದೆ. ಬಿಸಿಲೆ ಘಾಟಿಯ ಕುಲ್ಕುಂದ ಗೇಟಿನ ಬಳಿ ಕಳೆದ ರಾತ್ರಿ ವಾಹನದ ಮೇಲೆ ಕಾಡಾನೆ ದಾಳಿ ಮಾಡಿದ್ದು, ಆನೆ ದಾಳಿ ಸಂದರ್ಭದಲ್ಲಿ ವಾಹನದಲ್ಲಿದ್ದ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ. ಅವರು ಹಾಗೆ ಪಾರಾಗಿದ್ದಕ್ಕೆ ಕಾರಣ ಯಾರು ಗೊತ್ತಾ? ಮುಂದೆ ಓದಿ....

ಘಟನೆಯ ವಿವರ
ಸೋಮವಾರಪೇಟೆ ಮೂಲದ ವ್ಯಾಪಾರಿಗಳಾದ ಹಮೀದ್ ಮತ್ತು ಅಬ್ದುಲ್ ಬಿಸಿಲೆ ಘಾಟ್ ಮೂಲಕ ಮಂಗಳೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಆಲತ್ತೂರಿನಲ್ಲಿ ಕಾಡಾನೆ ದಾಳಿ: ಓರ್ವ ಮಹಿಳೆ ಬಲಿ, ಮೂವರು ಪಾರುಆಲತ್ತೂರಿನಲ್ಲಿ ಕಾಡಾನೆ ದಾಳಿ: ಓರ್ವ ಮಹಿಳೆ ಬಲಿ, ಮೂವರು ಪಾರು

ಹಮೀದ್ ಹಾಗೂ ಅಬ್ದುಲ್ ಸಲೀಂ ಮೂಲತಃ ಮೀನು ವ್ಯಾಪಾರಿಗಳು. ಕೊಡಗಿನ ಸೋಮವಾರಪೇಟೆಯಿಂದ ಹಸಿ ಮೀನು ತರಲು ಮಂಗಳೂರಿಗೆ ಬರುತ್ತಿದ್ದರು. ಕುಲ್ಕುಂದ ದೇವರ ಗುಡ್ಡ ಬಳಿ ಬರುವಾಗ ತಿರುವಿನಲ್ಲಿ ಕಾಡಾನೆಯೊಂದು ಮರಿಯೊಂದಿಗೆ ರಸ್ತೆ ಮಧ್ಯೆ ಕಾಣಿಸಿಕೊಂಡಿದೆ.

Wild elephant attacked on vehicle in Bisle Ghat

ರಸ್ತೆಯಲ್ಲಿ ಸಾಗಿ ಬರುತ್ತಿದ್ದ ಇವರ ಮಹೀಂದ್ರ ಜೀತೊ ವಾಹನದ ಮೇಲೆ ಆನೆ ಏಕಾಏಕಿ ದಾಳಿ ಮಾಡಿದೆ.

 ಒಡಿಶಾದಲ್ಲಿ ಒಂದೇ ದಿನ ಏಳು ಆನೆಗಳ ದುರ್ಮರಣ ಒಡಿಶಾದಲ್ಲಿ ಒಂದೇ ದಿನ ಏಳು ಆನೆಗಳ ದುರ್ಮರಣ

ಆನೆ ದಾಳಿಯಿಂದ ಈ ಇಬ್ಬರೂ ಪಾರಾಗಿದ್ದಾರೆ. ವಾಹನದ ಮುಂಭಾಗದ ಕನ್ನಡಿಯ ಮೇಲೆ ಆನೆ ಸೊಂಡಿಲಿನ ಪ್ರಹಾರ ನಡೆಸಿದ್ದು, ಕನ್ನಡಿ ಪುಡಿ ಪುಡಿಯಾಗಿದೆ. " ಆದರೆ ಆ ವೇಳೆ ಆನೆಯ ಮರಿ ಕೂಗಿದ್ದರಿಂದ ಆನೆ ವಾಹನ ಬಿಟ್ಟು ಕಾಡು ಸೇರಿದೆ' ಎಂದು ಹಮೀದ್ ಮತ್ತು ಅಬ್ದುಲ್ ತಿಳಿಸಿದ್ದಾರೆ. ಅಲ್ಲಿಗೆ ತಾಯಿ ಆನೆ ಅಲ್ಲಿಂದ ಹೊರಡಲು ಕಾರಣ ಯಾರು ಅಂತ ಗೊತ್ತಾಯಿತಲ್ಲ?!

Wild elephant attacked on vehicle in Bisle Ghat

 ಮತ್ತಿಗೋಡಿನಲ್ಲಿ ಖಾಸಗಿ ಬಸ್ ಡಿಕ್ಕಿಯಾಗಿ ರೌಡಿ ರಂಗ ಸಾವು ಮತ್ತಿಗೋಡಿನಲ್ಲಿ ಖಾಸಗಿ ಬಸ್ ಡಿಕ್ಕಿಯಾಗಿ ರೌಡಿ ರಂಗ ಸಾವು

ಈ ಘಟನೆಯ ನಂತರ ದಾರಿಯಲ್ಲಿ ಬರುತ್ತಿದ್ದ ಬೇರೊಂದು ವಾಹನವೇರಿ ಹಮೀದ್ ಮತ್ತು ಸಲೀಮ್ ಮಂಗಳೂರು ತಲುಪಿದ್ದಾರೆ.

English summary
Wild elephant attacked on vehicle in Bisle Ghat. Both persons in the vehicle were escape from danger during the elephant attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X