ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತಾಂತರ ನಿಷೇಧ ಕಾಯ್ದೆ ಯಾರಿಗೆ ಬೇಕು?; ದೇವೇಗೌಡ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಡಿಸೆಂಬರ್ 29; "ನಾನು ಲಘುವಾಗಿ ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಪಾದಯಾತ್ರೆ ಮಾಡುವುದಾದರೆ ಮಾಡಲಿ. ಅದರಿಂದ ಸಮಸ್ಯೆ ಬಗೆಹರಿದರೆ ಸಂತೋಷ" ಎಂದು ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್. ಡಿ. ದೇವೇಗೌಡ ಹೇಳಿದರು.

ಬುಧವಾರ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿರುವ ದೇವೇಶ್ವರ ದೇವಾಲಯಕ್ಕೆ ದೇವೇಗೌಡರ ಕುಟುಂಬದವರು ವಿಶೇಷ ಪೂಜೆ ಸಲ್ಲಿಸಿದರು. ಪೂಜಾ ಕಾರ್ಯಗಳಲ್ಲಿ ದೇವೇಗೌಡ, ಚೆನ್ನಮ್ಮ, ರೇವಣ್ಣ, ಭವಾನಿ ರೇವಣ್ಣ, ಸೂರಜ್ ರೇವಣ್ಣ ಭಾಗಿಯಾದ್ದರು.

Highlights: ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯಿದೆ-2021ವಿಧೇಯಕHighlights: ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯಿದೆ-2021ವಿಧೇಯಕ

ದೇವೇಗೌಡರ ಹುಟ್ಟೂರಿನ ದೇವಾಲಯದಲ್ಲಿ ಆಶ್ಲೇಷ ಪೂಜೆ, ಅಷ್ಟಬಂಧ ಬ್ರಹ್ಮ ಕುಂಭಾಭಿಷೇಕ, ಕರ್ಮ ಪ್ರಾಶಯ್ಚಿತ ಮಹಾರುದ್ರಯಾಗ, ಸರ್ಪ ಪೂಜೆ ನಡೆಸಲಾಯಿತು. ಈ ಕಾರ್ಯಕ್ರಮದ ಬಳಿಕ ದೇವೇಗೌಡರು ಮಾಧ್ಯಮಗಳ ಜೊತೆ ಮಾತನಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ವಾರದಲ್ಲೇ ಮತಾಂತರ ಕಾಯ್ದೆ ರದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ವಾರದಲ್ಲೇ ಮತಾಂತರ ಕಾಯ್ದೆ ರದ್ದು

Who Wants Right To Freedom Of Religion Bill 2021 Asks Deve Gowda

"ಮತಾಂತರ ನಿಷೇಧ ಕಾಯ್ದೆ ಯಾರಿಗೆ ಬೇಕು?. ನಾನು ಪ್ರಧಾನಿಯಾಗಿದ್ದೆ, ಮುಖ್ಯಮಂತ್ರಿಯಾಗಿದ್ದೆ. ಈ ದೇಶದಲ್ಲಿ ನನ್ನ ಕಾಲದಲ್ಲಿ ಮತಾಂತರ ಆಗುವ ಒಂದು ಘಟನೆ ನಡೀತಾ?. ನನ್ನ ಆಡಳಿತದಲ್ಲಿ ಹಿಂದೂಸ್ಥಾನದಲ್ಲಿ, ಕರ್ನಾಟಕದಲ್ಲಿ ಮತಾಂತರ ಆಗಿದೆಯಾ?. ಈಗ ಯಾಕೇ ಅದು ಶುರುವಾಯ್ತು?" ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ತಿನಲ್ಲಿ ಮಂಡನೆಯಾಗದ ಮತಾಂತರ ಮಸೂದೆ: ಸರ್ಕಾರಕ್ಕೆ ಹಿನ್ನಡೆವಿಧಾನ ಪರಿಷತ್ತಿನಲ್ಲಿ ಮಂಡನೆಯಾಗದ ಮತಾಂತರ ಮಸೂದೆ: ಸರ್ಕಾರಕ್ಕೆ ಹಿನ್ನಡೆ

"ಮತಾಂತರ ನಿಷೇಧ ಕಾಯ್ದೆ ಬಗ್ಗೆ ಕಾಂಗ್ರೆಸ್ ಕಾಲದಲ್ಲಿ ಬಿಲ್ ತಂದರೂ ಪಾಸಾಗಲಿಲ್ಲ. ಇವರು ಪಾಸ್ ಮಾಡಲು ಹೊರಟಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಈ ಬಗ್ಗೆ ತೀವ್ರವಾಗಿ ವಿರೋಧಿಸಿದ್ದಾರೆ. ರೇವಣ್ಣ, ತಿಪ್ಪೇಸ್ವಾಮಿ ವಿರೋಧಿಸಿದ್ದಾರೆ. ಯಾರೂ ಅಧಿಕಾರ ನಡೆಸುತ್ತಾರೋ ಅವರು ಎಲ್ಲರ ವಿಶ್ವಾಸ ಗಳಿಸಿಕೊಂಡರೆ ಇವೆಲ್ಲಾ ಬರಲ್ಲ" ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಮೇಕೆದಾಟು ಯೋಜನೆ; ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಮಾತನಾಡಿದ ದೇವೇಗೌಡರು, "ಈ ವಿಚಾರದಲ್ಲಿ ನಾನು ಹಿಂದೆ ಅಳಿಲು ಸೇವೆ ಮಾಡಿದ್ದೇನೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ದೆಹಲಿಗೆ ಹೋಗಿ ಬಂದಿದ್ದಾರೆ. ಈಗಿನ ಮುಖ್ಯಮಂತ್ರಿಗಳು ಜಲಸಂಪನ್ಮೂಲ ಸಚಿವರಾಗಿದ್ದರು, ಡಿ. ಕೆ. ಶಿವಕುಮಾರ್ ಸಹ ಸಚಿವರು ಆಗಿದ್ದರು. ಆದರೆ ಈಗ ಅವರಲ್ಲಿ ಏನು ಚರ್ಚೆ ನಡೆದಿದೆ ಗೊತ್ತಿಲ್ಲ. ಅವರ ಚುನಾವಣೆಗೆ ಅನೂಕೂಲವಾದರೆ ಆಗಲಿ, ಒಟ್ಟಿನಲ್ಲಿ ಸಮಸ್ಯೆ ಬಗೆಹರಿದರೆ ಸಾಕು. ಅವರ ಪಾದಯಾತ್ರೆ ಬಗ್ಗೆ ನಾನು ಏಕೆ ಹೊಟ್ಟೆ ಕಿಚ್ಚು ಪಡಲಿ?, ನಮ್ಮ ಪಕ್ಷ ಉಳಿಸಿಕೊಳ್ಳುವುದು ನಮ್ಮ ಕೆಲಸ ಅಷ್ಟೇ" ಎಂದರು.

ಸಂತಸ ವ್ಯಕ್ತಪಡಿಸಿದ ಹೆಚ್‌ಡಿಡಿ; ಮೊಮ್ಮಗ ನಿಖಿಲ್‌ ಕುಮಾರಸ್ವಾಮಿ ಅಭಿನಯದ 'ರೈಡರ್‌' ಸಿನಿಮಾ ಬಗ್ಗೆ ದೇವೇಗೌಡರು ಮಾತನಾಡಿದರು. "ಸಿನಿಮಾ ತುಂಬಾ ಚೆನ್ನಾಗಿದೆ" ಎಂದರು.

ಸಿನಿಮಾ ನೋಡಿದ ನಂತರ ಆ ಬಗ್ಗೆ ಮಾತನಾಡಿದ ಅವರು, "ನಿಖಿಲ್ ಫಿಲಂ ಫೀಲ್ಡ್‌ನಲ್ಲಿ ಇದ್ದಾನೆ. ಈ ಕ್ಷೇತ್ರಕ್ಕೆ ಆತ ಹೊಸಬನಲ್ಲ. ಜಾಗ್ವಾರ್ ಸಿನಿಮಾದಿಂದ ಹಿಡಿದು ಐದಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾನೆ. ಕಥೆ ತುಂಬಾ ಚೆನ್ನಾಗಿದೆ. ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ" ಎಂದು ಹೇಳಿದರು.

"ಇಡೀ ರಾಜ್ಯದಲ್ಲಿ ನೂರು ಸಿನಿಮಾ ಮಂದಿರಗಳಲ್ಲಿ ನಾಲ್ಕು ಶೋ, ಮೂರು ಶೋ ಆಗುತ್ತಿದೆ. ಈ ಸಿನಿಮಾಗೆ ನಾನು ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ, ಈಗಾಗಲೇ ಜನ ಕೊಟ್ಟಿದ್ದಾರೆ. ಸಿನಿಮಾ ತುಂಬಾ ಚೆನ್ನಾಗಿದೆ ಎನ್ನಲು ಆ ಸರ್ಟಿಫಿಕೇಟ್‌ ಒಂದು ಸಾಕು" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಿಖಿಲ್ ಕುಮಾರಸ್ವಾಮಿ ಹೇಳಿಕೆ; ಡಿಸೆಂಬರ್ 31ರ ಕರ್ನಾಟಕ ಬಂದ್ ಬಗ್ಗೆ ಹಾಸನದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು, "ಕರ್ನಾಟಕ ಬಂದ್ ಮಾಡುವುದರಿಂದ ಕನ್ನಡ ಚಿತ್ರಗಳಿಗೆ, ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ, ಅಂತಹ ಬಂದ್ ನಮಗೆ ಅವಶ್ಯಕತೆ ಇಲ್ಲ" ಎಂದರು.

"ಮಾಧ್ಯಮದಲ್ಲಿ ಪ್ರಚಾರ ಪಡೆಯುವುದಕ್ಕೆ ಬಂದ್ ಸೀಮಿತವಾಗಬಾರದು. ಎರಡು ವರ್ಷಗಳ ಕೋವಿಡ್ ಸಂಕಷ್ಟದ ನಂತರ ಸಾಕಷ್ಟು ಚಿತ್ರಗಳು ಬಿಡುಗಡೆಯಾಗಿವೆ, ಬಿಡುಗಡೆಗೆ ಸಿದ್ಧವಾಗಿವೆ. ಬಂದ್‌ಗೆ ಕರೆ‌ ಕೊಟ್ಟಿರುವವರು ಇನ್ನೊಮ್ಮೆ ಯೋಚನೆ ಮಾಡಲಿ ಎಂದು ಮನವಿ ಮಾಡುತ್ತೇನೆ" ಎಂದು ಹೇಳಿದರು.

Recommended Video

IndiGo ವಿಮಾನದಲ್ಲಿ ಕೇಳಿಬಂತು ತುಳುಭಾಷೆಯಲ್ಲಿ ಅನೌನ್ಸ್ಮೆಂಟ್ | Oneindia Kannada

English summary
Former PM H. D. Deve Gowda asked who wants Right to freedom of religion bill 2021 which passed in Karnataka assembly session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X