ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಠ್ಯ ಪುಸ್ತಕ ಯಾವಾಗ ಕೊಡಿಸ್ತೀರಾ?; ಸಿ. ಟಿ. ರವಿಗೆ ವಿದ್ಯಾರ್ಥಿಗಳ ಪ್ರಶ್ನೆ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಜೂನ್ 8 : ರಾಜ್ಯದಲ್ಲಿ ಮಕ್ಕಳ ಪಠ್ಯ ಪುಸ್ತಕ ವಿಚಾರ ಚರ್ಚೆಯಲ್ಲಿರುವಾಗಲೇ, "ಸರ್ ನಮಗೆ ಪುಸ್ತಕ ಯಾವಾಗ ಕೊಡ್ತೀರಾ?. ನಮಗೆ ತೊಂದರೆಯಾಗುತ್ತಿದೆ" ಎಂದು ಶಾಲಾ ವಿದ್ಯಾರ್ಥಿಗಳು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಪ್ರಶ್ನಿಸಿದ್ದಾರೆ.

Recommended Video

CT Raviಗೆ ಹಾಸನದ ಶಾಲಾ ವಿದ್ಯಾರ್ಥಿಗಳು ಹೀಗೆ ಕೇಳಿದ್ದೇಕೆ | OneIndia Kannada

ಮಂಗಳವಾರ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆಯುತ್ತಿರುವ ರಣಘಟ್ಟ ನೀರಾವರಿ ಯೋಜನೆ ವೀಕ್ಷಣೆಗೆ ಸಿ. ಟಿ. ರವಿ ಆಗಮಿಸಿದ್ದ ವೇಳೆ ಚಿಲ್ಕೂರು ಗೇಟ್ ಬಳಿ ಕಾರ್ಯಕರ್ತರನ್ನು ನೋಡಿ, ಮಾತನಾಡಲು ಕಾರು ನಿಲ್ಲಿಸಿದ್ದರು. ಈ ವೇಳೆ ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳು, ಸಿ. ಟಿ. ರವಿ ನೋಡಿ ತಕ್ಷಣ ಅವರ ಬಳಿ ತೆರಳಿ ಪಠ್ಯಪುಸ್ತಕವನ್ನು ಯಾವಾಗ ಕೊಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ನವರಿಗೆ ಮಾಡಲು ಕೆಲಸವಿಲ್ಲ, ಚಡ್ಡಿ ಸುಟ್ಕೊಂಡು ಇರಲಿ: ಸಿಟಿ ರವಿ ಕಿಡಿ ಕಾಂಗ್ರೆಸ್‌ನವರಿಗೆ ಮಾಡಲು ಕೆಲಸವಿಲ್ಲ, ಚಡ್ಡಿ ಸುಟ್ಕೊಂಡು ಇರಲಿ: ಸಿಟಿ ರವಿ ಕಿಡಿ

ಶಾಲೆ ಆರಂಭವಾಗಿ ಒಂದು ತಿಂಗಳು ಕಳೆದರೂ ಪುಸ್ತಕ ನೀಡಿಲ್ಲ, ಇದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಆದಷ್ಟು ಬೇಗ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿ ಎಂದು ಮನವಿ ಮಾಡಿದರು.

When will we get textbook Students Question to CT Ravi in Hassan

ಮಕ್ಕಳಿಗೆ ಪ್ರತ್ಯುತ್ತರ ನೀಡಿದ ಸಿ. ಟಿ. ರವಿ, ನೀವು ಬುದ್ದಿವಂತರಿದ್ದೀರಾ, ಆದಷ್ಟು ಬೇಗ ಪುಸ್ತಕ ಕೊಡುತ್ತಾರೆ, ನೀವು ಪಾಸಾಗುತ್ತೀರಾ ಹೋಗಿ ಎಂದು ತಿಳಿಸಿದ್ದಾರೆ. ಮಕ್ಕಳಿಗೆ ಬಿಸಿಯೂಟದ ಹೇಗೆ ಮಾಡಲಾಗುತ್ತಿದೆ ಎಂದು ಮಕ್ಕಳ ಬಳಿ ಕೇಳಿ ತಿಳಿದುಕೊಂಡರು.

ಕುಮಾರಸ್ವಾಮಿ ಕಾಲೆಳೆದ ಸಿ. ಟಿ. ರವಿ; ಕೋಮುವಾದಿಗಳನ್ನು ಸೋಲಿಸಲು ನಮಗೆ ಸಹಾಯ ಮಾಡಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ. ಟಿ. ರವಿ, "ನಾವು ರಾಷ್ಟ್ರೀಯ ವಾದಿಗಳು ಅವರು ಜಾತಿವಾದಿಗಳು, ಜಾತಿ ಇಲ್ಲದೆ ಇದ್ದರೆ ಬಹಳ ಜನ ರಾಜಕೀಯ ಅಸ್ತಿತ್ವ ಕಳೆದುಕೊಳ್ತಾರೆ. ನಮ್ಮದು ರಾಷ್ಟ್ರೀಯ ವಿಚಾರದಾರೆ ಹಿನ್ನೆಲೆಯಲ್ಲಿ ನಮ್ಮ ರಾಜಕಾರಣ ನಡೆಯುತ್ತಿದೆ. ಇವರು ಯಾರೋ ಸರ್ಟಿಫಿಕೇಟ್ ಕೊಟ್ಟಕೂಡಲೆ ನಾವು ಕೋಮುವಾದಿ ಆಗುವುದಿಲ್ಲ" ಎಂದು ಕಿಡಿ ಕಾರಿದರು.

ರಾಜ್ಯಸಭಾ ಚುನಾವಣೆ: ಗೌಡ್ರ ಜೊತೆಗಿನ ಜಿದ್ದಿನಲ್ಲಿ ಗೆದ್ದ ಸಿದ್ದು, ಎಲ್ಲಾ ಎಚ್‌ಡಿಕೆ ಎಡವಟ್ಟು? ರಾಜ್ಯಸಭಾ ಚುನಾವಣೆ: ಗೌಡ್ರ ಜೊತೆಗಿನ ಜಿದ್ದಿನಲ್ಲಿ ಗೆದ್ದ ಸಿದ್ದು, ಎಲ್ಲಾ ಎಚ್‌ಡಿಕೆ ಎಡವಟ್ಟು?

ಶಾದಿಭಾಗ್ಯ ಜಾರಿಗೆ ತಂದ ಸಿದ್ದರಾಮಯ್ಯ ಸೆಕುಲರ್‌; "ನಮ್ಮ ಯಾವ ಯೋಜನೆ ಜಾತಿ ತಾರತಮ್ಯ ಮಾಡಿದೆ ಹೇಳಿ, ನಮ್ಮ ನೂರಾರು ಯೋಜನೆಗಳ ಲಾಭ ಎಲ್ಲರಿಗೂ ಸಿಕ್ಕಿದೆ. ಜನಧನ್, ಮುದ್ರಾ ಯೋಜನೆ, ಉಜ್ವಲ ಯೋಜನೆ, ಹೀಗೆ ಇದರಲ್ಲಿ ಯಾವುದರಲ್ಲಿ ತಾರತಮ್ಯ ಇದೆ. ಯಾವುದೇ ತಾರತಮ್ಯ ಮಾಡದ ನಾವು, ನಮ್ಮ ಮೋದಿ ಇವರಿಗೆ ಕೋಮುವಾದಿಗಳು ಹಾಗೆ ಕಾಣುತ್ತೀವಿ. ಶಾದಿಭಾಗ್ಯವನ್ನು ಎಂಬ ಯೋಜನೆಯನ್ನು ಒಂದು ಕೋಮಿಗೆ ಯೋಜನೆ ಮಾಡುವ ಸಿದ್ದರಾಮಯ್ಯ ಸೆಕ್ಯುಲರ್ ಥರ ಕಾಣುತ್ತಾರೆ" ಎಂದು ಲೇವಡಿ ಮಾಡಿದರು.

When will we get textbook Students Question to CT Ravi in Hassan

ಮೋದಿಗೆ 138 ಕೋಟಿ ಜನರೇ ಕುಟುಂಬ; "ಸೆಕ್ಯುಲರ್ ಪರಿಭಾಷೆ ಎಂದರೆ ಅಲ್ಪ ಸಂಖ್ಯಾತರ ಓಲೈಕೆ ಮಾತ್ರಾನಾ, ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂದರೆ ಕೋಮುವಾದಾನ?. 138 ಕೋಟಿ ಜನ ಒಂದೇ ಎಂದು ಭಾವಿಸುವ ಮೋದಿ ಇವರ ದೃಷ್ಟಿಯಲ್ಲಿ ಸ್ವಾರ್ಥಿ, ತನ್ನ ಕುಟುಂಬವೇ ಪರಿವಾರ ದೇಶ ಎಂದು ಭಾವಿಸುವವರು ರಾಷ್ಟ್ಬ ಭಕ್ತರು. ಇದು ಯಾವ ಸೀಮೆ ನ್ಯಾಯ, ಹೇಳೊಕಾದರೂ ಒಂದು ಲೆಕ್ಕಾಚಾರ ಬೇಡವಾ. ನರೇಂದ್ರ ಮೋದಿಗೆ 138 ಕೊಟಿ ಜನರೇ ಅವರ ಕುಟುಂಬ, ಇನ್ನು ಕೆಲವರಿಗೆ ಅವರ ಕುಟುಂಬವೇ 138 ಕೋಟಿ ಜನರಿದ್ದಂತೆ. ಕುಟುಂಬದಿಂದ ಆಚಗೆ ಯೋಚನೆ ಮಾಡದವರೆಲ್ಲಾ ಬಿಜೆಪಿ ಬಗ್ಗೆ ಮಾತಾಡ್ತಾರೆ. ವಾಸ್ತವಿಕವಾಗಿ ಇವರೇ ಕೋಮುವಾದಿಗಳು" ಎಂದು ರವಿ ಟೀಕಿಸಿದರು.

English summary
Some school students appealed to C. T. Ravi for textbook when BJP national secretary CT Ravi visited Hassan for Legislative council election campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X