ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರಕಾರ ಇರುವಷ್ಟು ದಿನ ಕೆಲಸ ಮಾಡ್ತೀವಿ: ಎಚ್ ಡಿ ರೇವಣ್ಣ, ಸ್ವಾತಿ ನಕ್ಷತ್ರ

|
Google Oneindia Kannada News

Recommended Video

ಮಾರ್ಮಿಕ ಹೇಳಿಕೆ ನೀಡಿದ ಎಚ್.ಡಿ.ರೇವಣ್ಣ | Oneindia Kannada

ಹಾಸನ, ಜೂನ್ 19: ಮಧ್ಯಂತರ ಚುನಾವಣೆಯ ಬಗ್ಗೆ ಪರೋಕ್ಷವಾಗಿ ಜೆಡಿಎಸ್ ವರಿಷ್ಠ ದೇವೇಗೌಡ್ರು, ಬೆಂಗಳೂರಿನಲ್ಲಿ ಮಂಗಳವಾರ (ಜೂ 18) ಮಾರ್ಮಿಕವಾಗಿ ಹೇಳಿಕೆಯನ್ನು ನೀಡಿದ್ದರು. ಈಗ, ಅವರ ಪುತ್ರ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರ ಸರದಿ.

ನಂದು ಸ್ವಾತಿ ನಕ್ಷತ್ರ, ಇಂತಹ ನಕ್ಷತ್ರದವರ ವಿರುದ್ದ ಯಾರದರೂ ಕೈಹಾಕಿದರೆ ಅದು ಅವರಿಗೇ ರಿವರ್ಸ್ ಆಗುತ್ತದೆ. ಸ್ವಾತಿ ನಕ್ಷತ್ರದವರಿಗೆ ಯಾವುದೇ ಮಾಟಮಂತ್ರ ತಟ್ಟುವುದಿಲ್ಲ ಎಂದು ಲೋಕಸಭಾ ಚುನಾವಣೆಗೆ ಮುನ್ನ ರೇವಣ್ಣ ಹೇಳಿದ್ದು, ವ್ಯಾಪಕ ಟ್ರೋಲ್ ಆಗಿತ್ತು. ಇದು, ಪರೋಕ್ಷವಾಗಿ ವಿರೋಧ ಪಕ್ಷದವರನ್ನು ಉದ್ದೇಶಿಸಿ, ರೇವಣ್ಣ ನೀಡಿದ್ದ ಹೇಳಿಕೆಯಾಗಿತ್ತು.

ಅಧಿಕಾರಿಗಳ ಸಭೆಯಲ್ಲಿ ಪರಮೇಶ್ವರ್-ರೇವಣ್ಣ ಡಿಶುಂ ಡಿಶುಂಅಧಿಕಾರಿಗಳ ಸಭೆಯಲ್ಲಿ ಪರಮೇಶ್ವರ್-ರೇವಣ್ಣ ಡಿಶುಂ ಡಿಶುಂ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ರೇವಣ್ಣ, ಸಮ್ಮಿಶ್ರ ಸರಕಾರ ಪತನಗೊಳ್ಳುತ್ತೆ ಎಂದು ಒಂದು ವರ್ಷದಿಂದ ಯಡಿಯೂರಪ್ಪ ಸಾಹೇಬ್ರು ಹೇಳಿಕೊಂಡು ಬಂದರು, ಆದರೆ ಸರಕಾರ ಬಿತ್ತಾ ಎಂದು ಪ್ರಶ್ನಿಸಿದ್ದಾರೆ.

We will continue to do our best till government exists: HD Revanna

ನಾವು ನಮ್ಮ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ, ಸರಕಾರ ಇರುವಷ್ಟು ದಿನ ನಾವು ನಮ್ಮ ಇಲಾಖೆಯನ್ನು ಮುನ್ನಡೆಸಿಕೊಂಡು ಹೋಗುತ್ತೇವೆ ಎಂದು ರೇವಣ್ಣ ಹೇಳಿದ್ದಾರೆ.

ಮಧ್ಯಂತರ ಚುನಾವಣೆಗೆ ಸಜ್ಜಾಗಿ ಎಂದ ದೇವೇಗೌಡರಿಂದ ವಿಶ್ವನಾಥ್‌ ಮನವೊಲಿಕೆ? ಮಧ್ಯಂತರ ಚುನಾವಣೆಗೆ ಸಜ್ಜಾಗಿ ಎಂದ ದೇವೇಗೌಡರಿಂದ ವಿಶ್ವನಾಥ್‌ ಮನವೊಲಿಕೆ?

ನಮ್ಮ ಸರಕಾರದ ಮೇಲೆ ದೇವತಾನುಗ್ರಹ ಇದೆ ಎಂದು ಹಿಂದೆನೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಎಷ್ಟುದಿನ ದೇವರ ಅನುಗ್ರಹ ಇರುತ್ತದೋ, ಅಷ್ಟುದಿನ ಸರಕಾರ ಇರುತ್ತದೆ ಎಂದು ರೇವಣ್ಣ ಹೇಳಿರುವುದಕ್ಕೂ, ದೊಡ್ಡಗೌಡ್ರು ನಿನ್ನೆ ಹೇಳಿರುವುದಕ್ಕೂ ಏನಾದರೂ ಸಂಬಂಧ ಇದೆಯಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.

ಕಳೆದ ಬಾರಿ ಬಿಜೆಪಿ ಜೊತೆ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಹಲವು ಜನಪರ ಕೆಲಸವನ್ನು ಮಾಡಿದ್ದೆವು. ಆದರೆ, ಯಾವುದರಿಂದಲೂ ನಮಗೆ ಪ್ರಚಾರ ಸಿಕ್ಕಿರಲಿಲ್ಲ ಎಂದು ರೇವಣ್ಣ ಬೇಸರ ವ್ಯಕ್ತ ಪಡಿಸಿದ್ದಾರೆ.

English summary
We will continue to do our best till government exists: PWD Minister HD Revanna statement in Hassan on June 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X