ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಇದು ಬಿಎಂಟಿಸಿ ಸೀಟಲ್ಲ, ಹಿರಿಯರಿಗೆ ಬಿಟ್ಟುಕೊಡೋಕೆ' ಟ್ವೀಟ್ ತಪರಾಕಿ

|
Google Oneindia Kannada News

'ಯಾರೂ ಬೇಜಾರು ಮಾಡಿಕೊಳ್ಳಬೇಡಿ. ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಅದನ್ನು ನಮ್ಮ ನಾಯಕರು ಎಷ್ಟರ ಮಟ್ಟಿಗೆ ಸ್ವೀಕರಿಸುತ್ತಾರೆ ಗೊತ್ತಿಲ್ಲ. ಯಾರಿಗೂ ಕೇಳದೆ ನಾನು ಇದನ್ನು ಮಾಡಿದೆ ಎಂದು ಹೇಳಬೇಡಿ. ಗೌಡರು ನಮ್ಮ ಪಕ್ಷದ ಬೇರು. ದೇವೇಗೌಡರ ಆಶೀರ್ವಾದದೊಂದಿಗೆ ನಾನು ರಾಜೀನಾಮೆ ಕೊಟ್ಟು ಗೌಡರಿಗೆ ಈ ಜಿಲ್ಲೆಯನ್ನು ಬಿಟ್ಟುಕೊಡುತ್ತೇನೆ. ಅವರ ಶಕ್ತಿ ರಾಜ್ಯಕ್ಕೆ ಬೇಕಿದೆ' ಎಂದು ಸಂಸದ ಪ್ರಜ್ವಲ್ ರೇವಣ್ಣ ಸುದ್ದಿಗೋಷ್ಠಿಯಲ್ಲಿಂದು ಹೇಳಿದರು.

<br>ಅನರ್ಹಗೊಳ್ಳುವ ಭೀತಿಯಿಂದ ಪ್ರಜ್ವಲ್ ರಾಜೀನಾಮೆಗೆ ಮುಂದಾದರೆ?
ಅನರ್ಹಗೊಳ್ಳುವ ಭೀತಿಯಿಂದ ಪ್ರಜ್ವಲ್ ರಾಜೀನಾಮೆಗೆ ಮುಂದಾದರೆ?

ಹಾಸನದ ನೂತನ ಸಂಸದ ಪ್ರಜ್ವಲ್ ರೇವಣ್ಣ ಅವರ ತುರ್ತು ಸುದ್ದಿಗೋಷ್ಠಿ, ರಾಜೀನಾಮೆ ನೀಡಲು ಮುಂದಾಗಿರುವುದು, ಹಿರಿಯರಿಗೆ ಸೀಟು ಬಿಟ್ಟುಕೊಡುವ ವಿಚಾರ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿರುವ ಟ್ವೀಟ್ ಲೋಕದಲ್ಲಿ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.

ಚೊಚ್ಚಲ ಪ್ರಯತ್ನದಲ್ಲೇ ಸಂಸತ್ತಿಗೆ ಆಯ್ಕೆಯಾದ ದೇವೇಗೌಡರ ಮೊಮ್ಮಗಚೊಚ್ಚಲ ಪ್ರಯತ್ನದಲ್ಲೇ ಸಂಸತ್ತಿಗೆ ಆಯ್ಕೆಯಾದ ದೇವೇಗೌಡರ ಮೊಮ್ಮಗ

ಪ್ರೀತಿಯ ಪ್ರಜ್ವಲ್ ಇದು ಸಂಸತ್ ಸೀಟು, ಬಿಎಂಟಿಸಿ ಸೀಟಲ್ಲ, ಹಿರಿಯರು ಬಂದಾಗ ಬಿಟ್ಟುಕೊಡೋಕೆ ಎಂದು ಗುರುಪ್ರಸಾದ್ ಎಂಬುವರು ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲ ತಾಣಗಳಲ್ಲಿ ಅಕ್ರೋಶ

ಸಾಮಾಜಿಕ ಜಾಲ ತಾಣಗಳಲ್ಲಿ ಅಕ್ರೋಶ

ಚೊಚ್ಚಲ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಮೊದಲ ಪ್ರಯತ್ನದಲ್ಲೇ ಪ್ರಜ್ವಲ್ ರೇವಣ್ಣ ಅವರು ಸಂಸದರಾಗಿದ್ದಾರೆ. ಕರ್ನಾಟಕದ ಯುವ ಸಂಸದರ ಪೈಕಿ ಒಬ್ಬರೆನಿಸಿದ್ದಾರೆ. ಆದರೆ, ಭಾವನಾತ್ಮಕವಾಗೋ, ಮೂರ್ಖತನದಿಂದಲೋ, ಜನಾದೇಶವನ್ನು ಬದಿಗೊತ್ತಿ, ತಾತನ ಮೇಲಿನ ಪ್ರೀತಿಯನ್ನು ತೋರಿಸಲು ಹೋಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಸಿಟ್ಟಿಗೇಳುವಂತೆ ಮಾಡಿದೆ.

ಗೌಡರು ಮತ್ತೆ ಚುನಾವಣೆಗೆ ನಿಲ್ಲಲಿ

ಗೌಡರು ಮತ್ತೆ ಚುನಾವಣೆಗೆ ನಿಲ್ಲಲಿ

ದೇವೇಗೌಡರನ್ನು ರಾಜಕೀಯದಲ್ಲಿ ಕಳೆದುಕೊಳ್ಳಲು ನಾನು ಇಷ್ಟಪಡುವುದಿಲ್ಲ. ನಾನು ಇಂದು ದೇವೇಗೌಡರನ್ನು ಭೇಟಿಯಾಗಿ ಅವರ ಮನವೊಲಿಸಿ ಜಿಲ್ಲೆಯಲ್ಲಿ ಮತ್ತೆ ಚುನಾವಣೆಗೆ ನಿಲ್ಲಿಸಬೇಕಿದೆ ಎಂದು ಹೇಳುವ ಮೂಲಕ ರಾಜೀನಾಮೆಗೆ ಇಂಗಿತ ವ್ಯಕ್ತಪಡಿಸಿದ್ದಾರೆ.

ನನ್ನ ಗೆಲುವು ಪ್ರಜ್ವಲ್ ಗೆಲುವು ಅಲ್ಲ. ನಮ್ಮ ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರ ಗೆಲುವು. ಇದು ದೇವೇಗೌಡರ ಗೆಲುವು. ಇಲ್ಲಿರೋದು ಅವರ ಶಕ್ತಿ. ನನಗೆ ದುಖ ಆಗುತ್ತಿದೆ. ಹೋರಾಟವೇ ನನ್ನ ಜೀವನ ಎಂದು ಗೌಡರು ಹೇಳಿದ್ದರು

ಸಂಸತ್ ಸ್ಥಾನ ಅನರ್ಹತೆಯ ಭೀತಿ

ಪ್ರಜ್ವಲ್ ರೇವಣ್ಣ ಅವರಿಗೆ ಸಂಸತ್ ಸ್ಥಾನದಿಂದ ಅನರ್ಹರಾಗುವ ಭೀತಿ ಎದುರಾಗಿದೆ. ಅಫಿಡವಿಟ್ ನಲ್ಲಿರುವ ದೋಷ ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ವಿಚಾರಣೆ ನಡೆಯಲಿ

ದೊಡ್ಡ ಡ್ರಾಮಾ ಕಂಪನಿ

ಅನರ್ಹತೆ ಬಗ್ಗೆ ತಿಳಿದಿರುವುದರಿಂದ ಈ ರೀತಿ ನಾಟಕವಾಡುತ್ತಿದ್ದಾರೆ. ಅಫಿಡವಿಟ್ ದೋಷದ ಬಗ್ಗೆ ಕೇಂದ್ರ ಚುನಾವಣಾ ಆಯೋಗ ನಿರ್ಧಾರ ಕೈಗೊಳ್ಳಲಿದೆ ಎಂದು ಟ್ವೀಟ್.

ಜನಪ್ರತಿನಿಧಿ ಕಾಯ್ದೆ ಬಗ್ಗೆ ಉಲ್ಲೇಖ

ಜನಪ್ರತಿನಿಧಿ ಕಾಯ್ದೆ ಬಗ್ಗೆ ಉಲ್ಲೇಖಿಸಿ ಟ್ವೀಟ್ ಮಾಡಿದ ಸಾರ್ವಜನಿಕರು, ಪ್ರಜ್ವಲ್ ರೇವಣ್ಣ ವಿರುದ್ಧವೇ ಬಹುತೇಕ ಟ್ವೀಟ್ ಗಳು ಬಂದಿವೆ. ಪ್ರಜಾಪ್ರಭುತ್ವದ ಅಣಕ ಎಂದು ಟೀಕಿಸಿದ್ದಾರೆ.

English summary
Twitterati blasts Prajwal Revanna for offering resignation to his MP seat he won against BJP candidate A Manju in Hassan. This is not BMTC bus seat to offers to elders read on of the tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X