ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನದಲ್ಲಿ ಜೂನ್ 25ರಂದು ದೇವೇಗೌಡ-ಸಿದ್ದರಾಮಯ್ಯ ಮುಖಾಮುಖಿ

By Mahesh
|
Google Oneindia Kannada News

ಸನ, ಜೂನ್ 23: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ಸಿನ ಡಿಕೆ ಶಿವಕುಮಾರ್ ಅವರ ಭೇಟಿ, ಹಸ್ತಲಾಘವ ಚಿತ್ರ ಇತ್ತೀಚೆಗೆ ವೈರಲ್ ಆಗಿತ್ತು. ಮುಂದಿನ ಸರದಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರದ್ದು ಆಗ ಬಹುದು. ಈ ಇಬ್ಬರು ರಾಜಕೀಯ ದಿಗ್ಗಜರು ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಸನ ವಿಭಾಗ, ಹಾಸನ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ನಗರ ಸಾರಿಗೆ ಬಸ್ ನಿಲ್ದಾಣ (ಟಿಟಿಎಂಸಿ) ಹಾಗೂ ಬಸ್ ಘಟಕದ ಉದ್ಘಾಟನಾ ಸಮಾರಂಭವನ್ನು ಜೂನ್ 25 ರಂದು ನಡೆಯಲಿದೆ.

ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ, ಮಾನ್ಯ ಮಾಜಿ ಪ್ರದಾನ ಮಂತ್ರಿಗಳು ಹಾಗೂ ಲೋಕಸಭಾ ಸದಸ್ಯರಾದ ಎಚ್.ಡಿ.ದೇವೆಗೌಡರು ಉಪಸ್ಥಿರಿರುವರು ಎಂದು ಸಚಿವ ಅರಕಲಗೂಡು ಮಂಜು ಅವರು ಹೇಳಿದ್ದಾರೆ.

ಹಾಸನದ ನಗರ ಸಾರಿಗೆ ನಿಲ್ದಾಣ

ಹಾಸನದ ನಗರ ಸಾರಿಗೆ ನಿಲ್ದಾಣ

ಅಪರೂಪದ ಸಮಾಗಮ : ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಚರ್ಚಿಸಲು ಮಾಜಿ ಪ್ರಧಾನಿ ದೇವೇಗೌಡರನ್ನು ಹುಡುಕಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂದಿದ್ದಾರೆ. ಹತ್ತಾರು ವರ್ಷಗಳ ಬಳಿಕ ಪದ್ಮನಾಭ ನಗರ ನಿವಾಸದಲ್ಲಿ ಈ ಇಬ್ಬರು ಹಿರಿಯ ರಾಜಕಾರಣಿಗಳ ಸಮಾಗಮಕ್ಕೆ 'ಕಾವೇರಿ' ಸಾಕ್ಷಿಯಾಗಿತ್ತು. ಇದು ಬಿಟ್ಟರೆ, ಬೇರೆ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಕಡಿಮೆ. ಅದರಲ್ಲೂ ಹಾಸನದಲ್ಲಿ ಎ ಮಂಜು, ಸಿದ್ದರಾಮಯ್ಯ ಹಾಗೂ ದೇವೇಗೌಡರು ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

 ಎ. ಮಂಜುರವರು ಅವರು ಮಾತನಾಡಿ

ಎ. ಮಂಜುರವರು ಅವರು ಮಾತನಾಡಿ

ಜಿಲ್ಲಾ ಉಸ್ತುವಾರಿ ಸಚಿವರು, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಎ. ಮಂಜುರವರು ಅವರು ಮಾತನಾಡಿ, ನೂತನ ಬಸ್ ಮಾರ್ಗಗಳ ಉದ್ಘಾಟನೆ ಮಾಡುವರು, ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಮತ್ತು ಕರಾರಸಾ ನಿಗಮದ ಅಧ್ಯಕ್ಷರಾದ ಕೆ,ಗೋಪಾಲ ಪೂಜಾರಿ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹೆಚ್.ಎಸ್.ಪ್ರಕಾಶ್‌ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ನ ಉಪಸಭಾಪತಿಗಳಾದ ಮರಿತಿಬ್ಬೇಗೌಡರು, ಜಿಲ್ಲಾ ಪಂಚಾಯತ್‌ನ ಅಧ್ಯಕ್ಷರಾದ ಬಿ.ಎಸ್. ಶ್ವೇತಾ ದೇವರಾಜ್‌ರವರು ಭಾಗವಹಿಸಲಿದ್ದಾರೆ.

ಹೊಸ ಬಸ್ ನಿಲ್ದಾಣ

ಹೊಸ ಬಸ್ ನಿಲ್ದಾಣ

Traffic and Transit Management Centre (TTMC)ಬಸ್ ನಿಲ್ದಾಣವನ್ನು 32.98 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹಾಸನದ ಎಲ್ಲಾ ಗ್ರಾಮಾಂತರ ಪ್ರದೇಶಗಳಿಗೆ ಇದೇ ಕೇಂದ್ರ ನಿಲ್ದಾಣವಾಗಲಿದೆ. 32,000 ಚದರ ಅಡಿ ಅಭಿವೃದ್ಧಿ ಪಡಿಸಿದ ಪ್ರದೇಶವಿದ್ದು, ವಾಣಿಜ್ಯ ಉದ್ದೇಶಕ್ಕಾಗಿ ಬಳಸಲು ಲಭ್ಯವಿದೆ. ಬಾಡಿಗೆಯೊಂದರಿಂದಲೇ ಕೆಎಸ್ಸಾರ್ಟಿಸಿಗೆ ಸುಮಾರು 15 ಲಕ್ಷ ರು ಸಿಗಲಿದೆ.

ಅತಿಥಿಗಳು

ಅತಿಥಿಗಳು

ಸದ್ಯ ಕೆಎಸ್ಸಾರ್ಟಿಸಿಯಿಂದ 12 ಕಿ.ಮೀ ವ್ಯಾಪ್ತಿಯ ತನಕ ಸಿಟಿ ಬಸ್ ಗಳು ಸಂಚರಿಸುತ್ತಿವೆ. ಆಲೂರು, ಹನುಮಂತಪುರ,ಶಾಂತಿಗ್ರಾಮಕ್ಕೆ ಸಂಪರ್ಕಿಸಲಾಗಿದೆ ಟಿಟಿಎಂಸಿ ಉದ್ಘಾಟನೆ ನಂತರ ವ್ಯವಸ್ಥೆ ಇನ್ನಷ್ಟು ವಿಸ್ತರಿಸಲಿದೆ ಎಂದು ಸಚಿವ ಎ ಮಂಜು ಹೇಳಿದರು.ಶಾಸಕರುಗಳಾದ ಎಚ್.ಡಿ. ರೇವಣ್ಣನವರು, ಎಚ್.ಕೆ.ಕುಮಾರಸ್ವಾಮಿ, ಕೆ.ಎಂ.ಶಿವಲಿಂಗೇಗೌಡರು ವೈ.ಎನ್, ರುದ್ರೇಶ್‌ಗೌಡರು, ಸಿ.ಎನ್. ಬಾಲಕೃಷ್ಣ, ಎಂ.ಎ ಗೋಪಾಲಸ್ವಾಮಿ, ಕೆ.ಟಿ. ಶ್ರೀಕಂಠೇಗೌಡ, ಹೆಚ್.ಪಿ. ಮೋಹನ್, ಎಂ.ಆರ್. ವೆಂಕಟೇಶ್ ಮುಂತಾದವರು ಭಾಗವಹಿಸಲಿದ್ದಾರೆ.

English summary
Old KSRTC bus stand, which has been developed into a Traffic and Transit Management Centre (TTMC), will be inaugurated on June 18. Chief Minister Siddaramaiah and HD Deve Gowda will inaugurate the bus stand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X