ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆ, ಗುಡ್ಡ ಕುಸಿತ : ಹಾಸನ-ಮಂಗಳೂರು ರೈಲು ಸ್ಥಗಿತ

By Gururaj
|
Google Oneindia Kannada News

ಹಾಸನ, ಜೂನ್ 11 : ಹಾಸನ-ಮಂಗಳೂರು ನಡುವಿನ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಭಾರೀ ಮಳೆಯ ಕಾರಣದಿಂದಾಗಿ ರೈಲು ಮಾರ್ಗದ ಮೂರು ಕಡೆ ಗುಡ್ಡ ಕುಸಿದುಬಿದ್ದಿದೆ. ಆದ್ದರಿಂದ, ರೈಲು ಸಂಚಾರ ಸ್ಥಗಿತವಾಗಿದೆ.

ಯಶವಂತಪುರ-ಕಾರವಾರ ರೈಲನ್ನು ಹಾಸನ ರೈಲು ನಿಲ್ದಾಣದಲ್ಲಿಯೇ ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರಿಗೆ ಟಕೆಟ್‌ನ ಹಣವನ್ನು ಮರಳಿಸಿ, ಮುಂದಿನ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲಾಗಿದೆ.

ಹಾಸನ ಜಿಲ್ಲೆಯಲ್ಲಿ ಭಾರಿ ಮಳೆ: ಮೈದುಂಬಿದ ಹೇಮಾವತಿಹಾಸನ ಜಿಲ್ಲೆಯಲ್ಲಿ ಭಾರಿ ಮಳೆ: ಮೈದುಂಬಿದ ಹೇಮಾವತಿ

ಮಂಗಳೂರು-ಯಶವಂತಪುರ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ (16576) ರೈಲಿನ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಪಾಲಘಾಟ್, ಈಡೋಡ್ ಮೂಲಕ ರೈಲು ಬೆಂಗಳೂರು ತಲುಪಲಿದೆ.

train

ಹಾಸನ-ಮಂಗಳೂರು ರೈಲು ಮಾರ್ಗದಲ್ಲಿ ಮೂರು ಕಡೆ ಗುಡ್ಡ ಕುಸಿದಿದ್ದು, ಶಿರವಾಗಿಲು ಸೇರಿ ಎರಡು ಕಡೆ ಮರಗಳು ರೈಲು ಹಳಿಯ ಮೇಲೆ ಬಿದ್ದಿವೆ. ಗುಡ್ಡ ಕುಸಿದು ಬಿದ್ದಿರುವ ಪ್ರದೇಶ ಸಕಲೇಶಪುರ ತಾಲೂಕು ವ್ಯಾಪ್ತಿಗೆ ಸೇರಿದ್ದು, 241.5 ಮಿ.ಮೀ.ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಚುರುಕುಗೊಂಡ ಮುಂಗಾರು: ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳುಚುರುಕುಗೊಂಡ ಮುಂಗಾರು: ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು

ಹಾಸನ ಜಿಲ್ಲೆಯಾದ್ಯಂತ ಮುಂಗಾರು ಬಿರುಸುಗೊಂಡಿದ್ದು, ಭಾರೀ ಮಳೆಯಾಗುತ್ತಿದೆ. ಸಕಲೇಶಪುರ ಮತ್ತು ಆಲೂರು ತಾಲೂಕಿನಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಇದರಿಂದಾಗಿ ಹೇಮಾವತಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾಗಿದೆ.

ಹೇಮಾವತಿ ಜಲಾಶಯಕ್ಕೆ 9115 ಕ್ಯೂಸೆಕ್ ನೀರು ಹರಿದುಬರುತ್ತಿದೆ. 200 ಕ್ಯೂಸೆಕ್‌ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ.

English summary
Train services between Hassan and Mangaluru have been suspended after following a landslide at three places. Mangaluru-Yashwanthpur Gommateshwara Express also rerouted via Palghat and Erode.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X