ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಎಸ್ಐ ನೇಮಕಾತಿ ಹಗರಣ: ಹಾಸನದಲ್ಲಿ ಮೂವರ ಬಂಧನ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಮೇ.9: ರಾಜ್ಯದಲ್ಲಿ ಬಾರೀ ಸದ್ದು ಮಾಡುತ್ತಿರುವ ಪಿಎಸ್ಐ ನೇಮಕಾತಿ ಹಗರಣ ಹಾಸನ ಜಿಲ್ಲೆಗೂ ಹಬ್ಬಿದೆ. ಪಿಎಸ್ಐ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ, ಹಾಸನ, ಹೊಳೆನರಸೀಪುರ ತಾಲ್ಲೂಕಿಗೆ ಸೇರಿದ ಒಟ್ಟು ಮೂವರು ಅಭ್ಯರ್ಥಿಗಳನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೇವಲ ಅಭ್ಯರ್ಥಿಗಳು ಮಾತ್ರವಲ್ಲದೇ, ಬೆಕ್ಕ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕೇಶವಮೂರ್ತಿ ಸೇರಿದಂತೆ ಮೂವರು ಸ್ಥಳೀಯ ರಾಜಕಾರಣಿಗಳನ್ನೂ ಸಹ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಿಎಸ್ ಐ ಹಗರಣ:

ಈ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಸಿ.ಎನ್.ಬಾಲಕೃಷ್ಣ, "ಪಿಎಸ್ಐ ಹಗರಣದಲ್ಲಿ ಜೆಡಿಎಸ್ ನ ಪಕ್ಷದ ಇಬ್ಬರು ನಾಯಕರು ಭಾಗಿಯಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ನನಗೂ ಅದರ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಹಾಸನ ಜಿಲ್ಲೆಯ ಕೆಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಹೆಸರು ಕೇಳಿ ಬರುತ್ತಿದ್ದು ಮುಂದಿನ ದಿನಗಳಲ್ಲಿ ಇದು ಯಾರ ಕೊರಳಿಗೆ ಸುತ್ತಿಕೊಳ್ಳಲಿದೆ ಕಾದುನೋಡೋಣ. ಯಾವುದೇ ಪಕ್ಷ ಇಂತಹ ಕೆಲಸ ಮಾಡಿ ಅಂತ ಹೇಳಲ್ಲ, ಜನಪ್ರತಿನಿಧಿಗಳಾಗಿ ಒಳ್ಳೆಯ ಕೆಲಸ ಮಾಡಿ ಅಂತ ಹೇಳುತ್ತೆ. ಯಾರೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಲೇಬೇಕು.ಇದರಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವವರಿಗೆ ನ್ಯಾಯ ಒದಗಿಸಬೇಕು," ಎಂದರು.

Hassan: three candidates arrest in PSI recruitment scam

ಹಾಸನ ದೇವಸ್ಥಾನಗಳ ಮೈಕ್ ನಲ್ಲಿ ಮೊಳಗಿದ ರಾಮಜಪ, ಶಿವನಜಪ..!

ಆಜಾನ್ ವಿರುದ್ಧ ಶ್ರೀರಾಮಸೇನೆ ಸಂಘಟನೆ ವತಿಯಿಂದ ಹಾಸನದ ದೇವಸ್ಥಾನಗಳಲ್ಲಿ ರಾಮಜಪ, ಶಿವನಜಪ ಬೆಳಿಗ್ಗೆ ಐದು ಗಂಟೆಗೆ ಮೊಳಗಿತು. ಹಾಸನದ ಸಂಗಮೇಶ್ವರ ಬಡಾವಣೆಯಲ್ಲಿರುವ, ಸಂಗಮೇಶ್ವರ ದೇವಾಲಯದಲ್ಲಿ ಇವತ್ತಿನಿಂದ ಮೈಕ್ ಮೂಲಕ ದೇವರ ಜಪ ಮಾಡುವುದಕ್ಕೆ ಶ್ರೀರಾಮಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಜಾನಕೆರೆ ಮತ್ತು ಪ್ರಧಾನ ಕಾರ್ಯದರ್ಶಿ ಹೇಮಂತ್ ಬೇಲೂರು ಚಾಲನೆ ನೀಡಿದರು.

Hassan: three candidates arrest in PSI recruitment scam

ಇದೇ ವೇಳೆ ಮಾತನಾಡಿದ ಅವರು ಇನ್ನುಮುಂದೆ ದೇವಾಲಯಗಳಲ್ಲಿ ಪ್ರತಿದಿನ ಸುಪ್ರಭಾತ, ಭಜನೆ, ರಾಮಜಪವನ್ನು ಮೈಕ್ ನಲ್ಲಿ ಹಾಕಲಾಗುವುದು. ನಾವು ಮೈಕ್ ಮೂಲಕ ಸುಪ್ರಭಾತ, ಭಜನೆ, ಜಪ ಮಾಡಬಾರದು ಎಂದರೆ ಬೇರೆ ಧರ್ಮದವರಿಗೂ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದರು.

Recommended Video

ಪೊಲ್ಲಾರ್ಡ್ ಗೆಟ್ ಔಟ್!! ಮುಂಬೈ ಅಭಿಮಾನಿಗಳಿಂದ ಪೊಲಾರ್ಡ್ ಫುಲ್ ಟ್ರೋಲ್ | Oneindia Kannada

English summary
CID police have arrested three candidates in Hassan district in connection with the PSI recruitment scam. This includes the local JDS leader of Hassan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X