ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಟ್ ಕಾಯಿನ್ ಕಾಂಗ್ರೆಸ್ ಸರ್ಕಾರದ ಕೂಸು; ಬಿಜೆಪಿ ಸಚಿವರ ಪಾತ್ರವಿಲ್ಲ; ಸಚಿವ ಗೋಪಾಲಯ್ಯ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ನವೆಂಬರ್ 17: "ಬಿಟ್ ಕಾಯಿನ್ ವಿಚಾರ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆದಿದ್ದು, ಈ ಬಿಟ್ ಕಾಯಿನ್ ಕಾಂಗ್ರೆಸ್ ಸರ್ಕಾರದ ಕೂಸು. ಇದರಲ್ಲಿ ಬಿಜೆಪಿಯ ಯಾವುದೇ ಸಚಿವರು ಭಾಗಿಯಾಗಿಲ್ಲ, ಕಾಂಗ್ರೆಸ್​ನವರು ಸುಮ್ಮನೆ ಇಬ್ಬರು ಸಚಿವರು ಇದ್ದಾರೆ ಅಂತಿದ್ದಾರೆ, ಆ ಇಬ್ಬರ ಹೆಸರು ಬಹಿರಂಗಪಡಿಸಲಿ," ಎಂದು ಹಾಸನದಲ್ಲಿ ಅಬಕಾರಿ ಸಚಿವ ಕೆ. ಗೋಪಾಲಯ್ಯ ಸವಾಲು ಹಾಕಿದರು.

ಮಂಗಳವಾರ ಹಾಸನದಲ್ಲಿ ಮಾತಾನಾಡಿದ ಅವರು, "ಕಾಂಗ್ರೆಸ್‌ನವರು ಬಿಟ್ ಕಾಯಿನ್ ವಿಚಾರದಲ್ಲಿ ಸುಮ್ಮನೇ ಹೆದರಿಸುವುದು ಬಿಟ್ಟು, ಹೆಸರು ಬಹಿರಂಗ ಮಾಡಿ ಎಂದು ಸವಾಲು ಹಾಕಿದ್ದಾರೆ. ಪ್ರತಿನಿತ್ಯ ಮಾಧ್ಯಮದ ಮುಂದೆ ಹೋಗಿ ಮಾತಾಡುವುದನ್ನು ಬಿಟ್ಟು ಜನರ ಕಷ್ಟಕ್ಕೆ ನೆರವಾಗಲಿ. ಈಗಾಗಲೆ ಸಿಎಂ ಬಸವರಾಜ ಬೊಮ್ಮಾಯಿ ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಇಡಿಯವರ ಗಮನಕ್ಕೂ ತಂದಿದ್ದಾರೆ ಎಂದು ವಿವರಣೆ ನೀಡಿದ್ದಾರೆ. ಸಮಯ ಬಂದಾಗ ಬಿಜೆಪಿ ಅಧ್ಯಕ್ಷರು ಮೌನ ಮುರಿಯುತ್ತಾರೆ," ಎಂದರು.

ಇನ್ನು ಇದೇ ವೇಳೆ ವಿಧಾನ ಪರಿಷತ್ ಚುನಾವಣೆ ಬಗ್ಗೆ ಮಾತಾನಾಡಿದ ಅವರು, "ಕರ್ನಾಟಕ ರಾಜ್ಯದಲ್ಲಿ ನಾಲ್ಕು ತಂಡಗಳಾಗಿ ಬಿಜೆಪಿ ನಾಯಕರು ಪ್ರವಾಸ ಮಾಡಲಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ, ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಪ್ರವಾಸ ಮಾಡಲಾಗುತ್ತದೆ," ಎಂದು ಮಾಹಿತಿ ನೀಡಿದರು.

Hassan: The Bitcoin Scam Occurred When the Congress Government Was in Power Says Minister K Gopalaiah

"ನಾಲ್ಕು ತಂಡಗಳಿಂದ ಪ್ರವಾಸ ಮಾಡಲು ತೀರ್ಮಾನ ಮಾಡಲಾಗಿದೆ. ಹಾಸನ ವಿಧಾನ ಪರಿಷತ್ ಸ್ಥಾನಕ್ಕೆ ನಾಲ್ಕೈದು ಜನರ ಹೆಸರು ಸೂಚಿಸಲಾಗಿದೆ. ಬಿಜೆಪಿ ಕೋರ್ ಕಮಿಟಿಯಲ್ಲಿ ಹೆಸರು ಇಂದು ಅಥವಾ ನಾಳೆ ಅಂತಿಮ ಆಗಲಿದೆ. ಯಾರಿಗೇ ಟಿಕೆಟ್ ಕೊಟ್ಟರೂ ಗೆಲ್ಲಿಸಲು ಕೆಲಸ ಮಾಡುತ್ತೇವೆ," ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ.

"ಹಾಸನ ಜಿಲ್ಲೆಯಲ್ಲಿ ಬಿಜೆಪಿಯ 1300ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಸ್ಥಾನ ಗೆದ್ದಿದ್ದೇವೆ. ಹಾಗಾಗಿ ನಮಗೆ ಗೆಲುವಿಗೆ ಅವಕಾಶ ಇದೆ. ನಮಗೆ ಹಾಸನ ಜಿಲ್ಲೆಯಲ್ಲಿ ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಈಗ ಪಕ್ಷ ಗಟ್ಟಿಯಾಗಿದೆ. ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಹೋರಾಟ ಮಾಡುತ್ತೇವೆ. ರಾಜ್ಯ ಪ್ರವಾಸದ ಬಳಿಕ ಚುನಾವಣೆ ಗೆಲುವಿಗೆ ರಣತಂತ್ರ ಮಾಡುತ್ತೇವೆ," ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶ್ರೀಕಿಯನ್ನು ಪ್ರಿಯಾಂಕ್ ಖರ್ಗೆ ಭೇಟಿ ಮಾಡಿದ್ದಾರೆ; ಗಣೇಶ್ ಕಾರ್ಣಿಕ್
"2016ನೇ ಇಸವಿಯಿಂದ ಬಿಟ್ ಕಾಯಿನ್ ದಂಧೆ ಇತ್ತು ಎಂದು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರಾಮಾಣಿಕ ಹೇಳಿಕೆ ಕೊಟ್ಟಿದ್ದಾರೆ. ಆಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇತ್ತು, ಯಾಕೆ ವಿಚಾರಣೆ ಮಾಡಲಿಲ್ಲ?,'' ಎಂದು ಬಿಜೆಪಿ ಮುಖ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಶ್ನಿಸಿದ್ದಾರೆ.

Hassan: The Bitcoin Scam Occurred When the Congress Government Was in Power Says Minister K Gopalaiah

ಬೆಂಗಳೂರು ನಗರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಬಿಜೆಪಿ ಮುಖ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, "ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೂ ಪ್ರಚಾರದ ಹಪಾಹಪಿ ಇದೆ,'' ಎಂದು ವಾಗ್ದಾಳಿ ನಡೆಸಿದರು.

"ಪ್ರಿಯಾಂಕ್ ಖರ್ಗೆ ಬಳಿ 50 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಇದೆಯಂತೆ. ಪ್ರಿಯಾಂಕ್ ಖರ್ಗೆ ಐಟಿ- ಬಿಟಿ ಸಚಿವರಾಗಿದ್ದಾಗ ಬಿಟ್ ಕಾಯಿನ್ ಹಗರಣದಿಂದ ಅವರೂ ಕಪ್ಪು ಹಣ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ,'' ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆರೋಪಿಸಿದ್ದಾರೆ.

"ಪ್ರಿಯಾಂಕ್ ಖರ್ಗೆ ತಮ್ಮ ಕಪ್ಪು ಹಣವನ್ನು ಬಿಟ್ ಕಾಯಿನ್​ನಲ್ಲಿ ತೊಡಗಿಸಿದ್ದಾರೆ ಎಂಬ ಆರೋಪ ಇದೆ. ಶ್ರೀಕೃಷ್ಣನನ್ನು ಪ್ರಿಯಾಂಕ್ ಖರ್ಗೆ ಭೇಟಿ ಮಾಡಿದ್ದರು. ಪ್ರಿಯಾಂಕ್ ಖರ್ಗೆ ಐಟಿ- ಬಿಟಿ ಸಚಿವರಾಗಿದ್ದಾಗ ಶ್ರೀಕಿ ಭೇಟಿ ಮಾಡಿದ್ದಾರೆ. ಶ್ರೀಕಿ ಕರೆಸಿ ಬಿಟ್ ಕಾಯಿನ್ ಬಗ್ಗೆ ಚರ್ಚೆ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಶ್ರೀಕಿ ಭೇಟಿ ಮಾಡಿಲ್ಲ ಅಂತ ಹೇಳಲಿ ನೋಡೋಣ,'' ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸವಾಲೆಸಿದಿದ್ದಾರೆ.

Recommended Video

ಡೇಟಾ ಸುರಕ್ಷತೆ ಮಸೂದೆಗೆ ಶಿಘ್ರ ಅಂಗೀಕಾರ ಅಗತ್ಯ ಎಂದ Bipin Rawat | Oneindia Kannada

English summary
The Bitcoin issue was held when the Congress government was in power and none of the BJP ministers were involved in it, Excise Minister K Gopalaiah Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X