ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಹಾ!: ವಿಸ್ಟಾಡೋಮ್ ಕೋಚ್‌ನಲ್ಲಿ ಕುಳಿತು ನೋಡಿ ಪಶ್ಚಿಮ ಘಟ್ಟದ ಸೌಂದರ್ಯ

|
Google Oneindia Kannada News

ಸಕಲೇಶಪುರ, ಜುಲೈ 17: ಮಳೆಗಾಲದಲ್ಲಿ ಹಸಿರ ಹೊನ್ನಿನ ಪಶ್ಚಿಮ ಘಟ್ಟವನ್ನು ನೋಡಿ ಸಂಭ್ರಮಿಸುವ ಅನುಭವವೇ ರೋಮಾಂಚನ. ಜಿರ್ರೆಂದು ಜೀರುವ ಜೀರುಂಡೆ, ಭೋರ್ಗರೆಯುವ ಜಲಧಾರೆ, ಮೈ ಕೈ ಮುದುರಿಸುವಂತೆ ಬೀಸಿ ಬರುವ ತಂಗಾಳಿ, ಒಮ್ಮೆ ಜಿಟಿಜಿಟಿ, ಮಗದೊಮ್ಮೆ ರಭಸವಾಗಿ ಸುರಿಯುವ ಮಳೆ. ಅದರಾಚೆ ಬೆಟ್ಟ- ಗುಡ್ಡ, ಬಯಲು ಹೀಗೆ ಎಲ್ಲವನ್ನು ತುಂಬಿಕೊಂಡ ಹಸಿರ ರಾಶಿ. ಮನಸಾರೆ ಸವಿದು ಸಂಭ್ರಮಿಸುವುದಕ್ಕೆ ನಿಸರ್ಗ ಪ್ರೇಮಿಗಳಿಗೆ ಇದಕ್ಕಿಂತ ಹೆಚ್ಚಿನದು ಬೇರೇನು ಬೇಕು?

ಸಾಮಾನ್ಯವಾಗಿ ಪಶ್ಚಿಮ ಘಟ್ಟದ ನಿಸರ್ಗ ಸೌಂದರ್ಯವನ್ನು ಸವಿಯಲೆಂದೇ ಹೆಚ್ಚಿನವರು ಮಂಗಳೂರು- ಬೆಂಗಳೂರು ರೈಲ್ವೆ ಮಾರ್ಗವನ್ನು ಬಳಸಿಕೊಳ್ಳುತ್ತಾರೆ. ಈ ರೈಲಿನಲ್ಲಿ ಪ್ರಯಾಣಿಸಿದವರಿಗೆ ಇಲ್ಲಿನ ನಿಸರ್ಗ ಸೌಂದರ್ಯದ ನೋಟ ಕಣ್ಣಿಗೆ ಕಟ್ಟಿದಂತಿರುತ್ತದೆ. ಇನ್ನು ರಸ್ತೆ ಮಾರ್ಗವಾಗಿ ಹೋದರಂತೂ ಅದರ ಮಜಾವೇ ಬೇರೆ. ದಾರಿಯುದ್ದಕ್ಕೂ ಸಿಗುವ ನದಿ ತೊರೆಗಳು, ಜಲಪಾತಗಳು ಖುಷಿಕೊಡುತ್ತವೆ.

ಕರ್ನಾಟಕದ ಮೊದಲ ವಿಸ್ಟಾಡಾಮ್ ಕೋಚ್ ರೈಲು; ದರ ಪಟ್ಟಿಕರ್ನಾಟಕದ ಮೊದಲ ವಿಸ್ಟಾಡಾಮ್ ಕೋಚ್ ರೈಲು; ದರ ಪಟ್ಟಿ

ಸದಾ ಪಟ್ಟಣದ ಗೌಜು ಗದ್ದಲಗಳು, ದುಡಿಮೆಯ ಒತ್ತಡಗಳು ಎಲ್ಲವನ್ನು ತಕ್ಷಣವೇ ಮೆರೆತು ಒಂದಷ್ಟು ಹೊತ್ತು ಎಲ್ಲವನ್ನೂ ಮರೆಯಿಸಿ ನಿಶ್ಚಿಂತೆಯಿಂದ ಇರುವಂತೆ ಮಾಡುವ ಶಕ್ತಿ ಇರುವುದು ಬರೀ ಪ್ರಕೃತಿಗೆ ಮಾತ್ರ. ಅದರಲ್ಲೂ ಪಶ್ಚಿಮ ಘಟ್ಟದ ಸೌಂದರ್ಯಕ್ಕೆ ಎಲ್ಲರ ನೋವನ್ನು ಮರೆಸುವ ಶಕ್ತಿಯಿದೆ ಎಂದರೆ ತಪ್ಪಾಗಲಾರದು.

ವಿಸ್ಟಾಡೋಮ್ ಕೋಚ್‌ನಲ್ಲಿ ನಿಸರ್ಗ ವೀಕ್ಷಣೆ

ವಿಸ್ಟಾಡೋಮ್ ಕೋಚ್‌ನಲ್ಲಿ ನಿಸರ್ಗ ವೀಕ್ಷಣೆ

ಇದೀಗ ಪಶ್ಚಿಮ ಘಟ್ಟದ ಸೌಂದರ್ಯವನ್ನು ರೈಲಿನಲ್ಲಿ ಕುಳಿತು ಸವಿಯಲು ನಿಸರ್ಗ ಪ್ರೇಮಿಗಳಿಗೆ, ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗಿದೆ. ಸದ್ಯ ಮಂಗಳೂರು- ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ವಿಸ್ಟಾ ಡೋಮ್ ಕೋಚ್‌ನಲ್ಲಿ ಕುಳಿತು ಪಶ್ಚಿಮ ಘಟ್ಟದ ಸುಂದರ ರಮಣೀಯ ಚೆಲುವನ್ನು ಮನದಣಿಯೇ ಸವಿಯಬಹುದಾಗಿದೆ.

ಮೂರು ರೈಲುಗಳಲ್ಲಿ ವಿಸ್ಟಾಡೋಮ್ ಕೋಚ್

ಮೂರು ರೈಲುಗಳಲ್ಲಿ ವಿಸ್ಟಾಡೋಮ್ ಕೋಚ್

ನೈಋತ್ಯ ರೈಲ್ವೆ ಈ ಮಾರ್ಗದಲ್ಲಿ ಸಂಚರಿಸುವ ಮೂರು ರೈಲುಗಳಲ್ಲಿ ತಲಾ ಎರಡು ವಿಸ್ಟಾಡೋಮ್ ಕೋಚ್ ಅಳವಡಿಸಿದ್ದು, ಪ್ರವಾಸಿಗರು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ವಿಸ್ಟಾಡೋಮ್ ಕೋಚ್‌ನಲ್ಲಿ ಕುಳಿತದ್ದೇ ಆದರೆ, ಪ್ರವಾಸಿಗರಿಗೆ ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ ವೀಕ್ಷಿಸಲು ಸಾಧ್ಯವಾಗುತ್ತದೆ. ಗಿಡಮರ, ಬೆಟ್ಟಗುಡ್ಡ, ತೊರೆ, ಜಲಪಾತ ಮರ, ಕಾಡು ಹೀಗೆ ಒಂದೇ ಎರಡೇ, ನೂರಾರು ಸುಂದರ ದೃಶ್ಯಗಳು ಕುಳಿತಲ್ಲೇ ಕಣ್ಣು ಮುಂದೆ ಹಾದು ಹೋಗಲಿದೆ.

ಸವಿದಷ್ಟೂ ತೀರದ ನಿಸರ್ಗ ನೋಟಗಳು

ಸವಿದಷ್ಟೂ ತೀರದ ನಿಸರ್ಗ ನೋಟಗಳು

ಬೆಂಗಳೂರು- ಮಂಗಳೂರು ರೈಲ್ವೇ ಮಾರ್ಗದ ಸುಬ್ರಹ್ಮಣ್ಯ ಮತ್ತು ಸಕಲೇಶಪುರ ನಡುವೆ ಸಿಗುವ ಪಶ್ಚಿಮ ಘಟ್ಟ ಪ್ರದೇಶದ 55 ಕಿ.ಮೀ ವ್ಯಾಪ್ತಿ ಹಸಿರುಮಯ ಅರಣ್ಯ ಪ್ರದೇಶ ನಿಜಕ್ಕೂ ಹಸಿರ ಸ್ವರ್ಗವಾಗಿದೆ. ಇಲ್ಲಿ ಸವಿದಷ್ಟೂ ತೀರದ ನಿಸರ್ಗ ನೋಟಗಳು ಜಲಪಾತದಂತೆ ಕಣ್ಣ ಮುಂದೆ ಧುಮ್ಮಿಕ್ಕುತ್ತಲೇ ಇರುತ್ತದೆ. ಇದು ನೋಡುವ ಕಣ್ಣುಗಳಿಗೆ ಹಬ್ಬವಾದರೆ ಮೈಮನಗಳಿಗೆ ಒಂಥರಾ ಪುಳಕ.

Recommended Video

ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಮೇಕ್ ಇನ್ ಇಂಡಿಯಾ ಕಲರವ | Make in India at Olympics | Oneindia Kannada
180 ಡಿಗ್ರಿ ಕೋನದಲ್ಲಿ ಸುತ್ತುವ ಸುಖಾಸನಗಳು

180 ಡಿಗ್ರಿ ಕೋನದಲ್ಲಿ ಸುತ್ತುವ ಸುಖಾಸನಗಳು

ಇನ್ನು ಈ ವಿಸ್ಟಾಡೋಮ್ ಕೋಚ್ ಬಗ್ಗೆ ಹೇಳುವುದಾದರೆ ಇದರಲ್ಲಿ ಒಳಗಿನಿಂದ ಕುಳಿತು ಹೊರಗೆ ನೋಡಲು ಅನುಕೂಲವಾಗುವಂತೆ ದೊಡ್ಡದಾದ ಗಾಜಿನ ಕಿಟಿಕಿಯನ್ನು ಅಳವಡಿಸಲಾಗಿದೆ. ಅಲ್ಲದೆ ಇಲ್ಲಿ 180 ಡಿಗ್ರಿ ಕೋನದಲ್ಲಿ ಸುತ್ತುವ ಸುಖಾಸನಗಳಿವೆ. ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆ. ಮೈಕ್ರೋ ಮೊಬೈಲ್, ಪುಟ್ಟ ರೆಫ್ರಿಜೇಟರ್‌ಗಳು ಸೇರಿದಂತೆ ಹಲವು ರೀತಿಯ ಆಧುನಿಕ ಸೌಲಭ್ಯಗಳಿಂದ ಕೂಡಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಠಿಯಿಂದ ರೈಲ್ವೆ ಇಲಾಖೆಯು ಈ ಐಷಾರಾಮಿ ಸೇವೆಯನ್ನು ನೀಡಿದೆ.

ಒಟ್ಟಾರೆ ಪಶ್ಚಿಮ ಘಟ್ಟದ ಸುಂದರ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳಬೇಕೆಂದು ಬಯಸುವ ಪ್ರಕೃತಿ ಪ್ರೇಮಿಗಳಿಗೆ ವಿಸ್ಟಾಡೋಮ್ ಕೋಚ್ ಸೇವೆ ವರದಾನವಾಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಮುಗಿಬೀಳುವುದಂತು ಖಚಿತ.

English summary
Travelers traveling by train on the Mangaluru- Bangaluru route can sit in the Vista Dome coach and see the beautiful scenery of the Western Ghats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X