ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನದಲ್ಲಿ ಮೆಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ

By Lekhaka
|
Google Oneindia Kannada News

ಹಾಸನ, ಅಕ್ಟೋಬರ್ 23: ಹಾಸನ ಜಿಲ್ಲೆಯ ಆಲೂರು ತಾಲೂಕು ಪಾಳ್ಯ ಸಮೀಪದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮೆಥೆನಾಲ್ ತುಂಬಿದ್ದ ಟ್ಯಾಂಕರ್ ಒಂದು ಪಲ್ಟಿಯಾಗಿ ಬಿದ್ದು, 16 ಸಾವಿರ ಲೀಟರ್​ ಮೆಥೆನಾಲ್ ವ್ಯರ್ಥವಾಗಿದೆ. ಆದರೆ ಅಪಾಯವನ್ನು ಮನಗಾಣದೆ ಜನ ಮೆಥೆನಾಲ್ ತುಂಬಿಕೊಳ್ಳಲು ಮುಗಿಬಿದ್ದ ದೃಶ್ಯವೂ ಕಂಡುಬಂತು.

ಮಂಗಳೂರಿನಿಂದ ಹಾಸನಕ್ಕೆ ಮೆಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಶುಕ್ರವಾರ ಬೆಳಗ್ಗೆ ರಸ್ತೆಗೆ ಉರುಳಿತ್ತು. ಈ ವೇಳೆ ಟ್ಯಾಂಕರ್​ ಮುಚ್ಚಳ ತೆಗೆದುಕೊಂಡು ಮೆಥೆನಾಲ್ ರಸ್ತೆ ಮೇಲೆ ಹರಿಯಲು ಆರಂಭಿಸಿತು.

ಕುಮಟಾದಲ್ಲಿ ಪಲ್ಟಿಯಾದ ಗ್ಯಾಸ್ ಟ್ಯಾಂಕರ್; ಅನಿಲ ಸೋರಿಕೆಕುಮಟಾದಲ್ಲಿ ಪಲ್ಟಿಯಾದ ಗ್ಯಾಸ್ ಟ್ಯಾಂಕರ್; ಅನಿಲ ಸೋರಿಕೆ

ಟ್ಯಾಂಕ್​ನಿಂದ ಸೋರಿಕೆಯಾದ ಮೆಥೆನಾಲ್ ತುಂಬಿಸಿಕೊಳ್ಳಲು ಸ್ಥಳೀಯರು ಬಕೆಟ್​ ಹಿಡಿದು ಬಂದ ಸಂಗತಿಯೂ ನಡೆಯಿತು. ಬೆಂಕಿ ಅವಘಡದ ಸಾಧ್ಯತೆಯಿದೆ ಎಂದು ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಜನ ಟ್ಯಾಂಕರ್ ನಿಂದ ದೂರ ಸರಿದರು. ಹೀಗಾಗಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಗುದ್ದಲಿ ಸಹಾಯದಿಂದ ಮೆಥೆನಾಲ್ ಅನ್ನು ಚರಂಡಿಗೆ ಹರಿಯುವಂತೆ ಮಾಡಲಾಯಿತು.

Hassan: Tanker Carrying Methanol Topples And 16 Thousand Litre Methanol Wasted

ಆಲೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಅಗ್ನಿ ಅವಘಡ ಸಂಭವಿಸದಂತೆ ಎಚ್ಚರ ವಹಿಸಿದರು. ಕೆಲ ಕಾಲ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು.

English summary
Tanker which was carrying methanol topples on road in hassan and 16 thousand litre of methanol wasted on road,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X