ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೊಲ್ಲಾಪುರ-ಯಶವಂತಪುರ ರೈಲು ಹಾಸನದ ತನಕ ವಿಸ್ತರಣೆ

By Gururaj
|
Google Oneindia Kannada News

ಹಾಸನ, ಜೂನ್ 14 : ಸೊಲ್ಲಾಪುರ-ಯಶವಂತಪುರ ರೈಲನ್ನು ಹಾಸನದ ತನಕ ವಿಸ್ತರಣೆ ಮಾಡಲಾಗಿದೆ. 70 ರೂ.ನಲ್ಲಿ ಹಾಸನ-ಬೆಂಗಳೂರು ನಡುವೆ ಜನರು ಪ್ರಯಾಣಿಸಬಹುದಾಗಿದೆ.

ಮಹಾರಾಷ್ಟ್ರದ ಸೊಲ್ಲಾಪುರದಿಂದ ಬೆಂಗಳೂರಿನ ಯಶವಂತಪುರದ ತನಕ ಸಂಚಾರ ನಡೆಸುವ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಹಾಸನದ ತನಕ ವಿಸ್ತರಣೆ ಮಾಡಲಾಗಿದೆ. ಹಾಸನ-ಸೊಲ್ಲಾಪುರ ನಡುವಿನ 830 ಕಿ.ಮೀ. ದೂರವನ್ನು 16 ಗಂಟೆಗಳಲ್ಲಿ ರೈಲು ಕ್ರಮಿಸಲಿದೆ.

ಹಾಸನ-ಮಂಗಳೂರು ರೈಲು ಮಾರ್ಗ ಸಂಚಾರಕ್ಕೆ ಸಿದ್ಧಹಾಸನ-ಮಂಗಳೂರು ರೈಲು ಮಾರ್ಗ ಸಂಚಾರಕ್ಕೆ ಸಿದ್ಧ

24 ಬೋಗಿಳನ್ನು ಹೊಂದಿರುವ ರೈಲು ಹಾಸನ-ಯಶವಂತಪುರ-ಯಲಹಂಕ-ದೊಡ್ಡಬಳ್ಳಾಪುರ-ಗೌರಿಬಿದನೂರು-ಹಿಂದೂಪುರ-ಧರ್ಮಾವರಂ-ಗುಂತಕಲ್-ಮಂತ್ರಾಲಯ-ರಾಯಚೂರು-ಕಲಬುರಗಿ ಮಾರ್ಗವಾಗಿ ಸೊಲ್ಲಾಪುರಕ್ಕೆ ತೆರಳಲಿದೆ.

Solapur-Yeshwantpur train service extended till Hassan

11311/ 11312 ಸಂಖ್ಯೆಯ ರೈಲು ಮಂತ್ರಾಲಯದ ಮೂಲಕ ಸಂಚಾರ ನಡೆಸಲಿದೆ. ಆದ್ದರಿಂದ, ಹಾಸನ, ಮಂಡ್ಯ, ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವ ಭಕ್ತರಿಗೆ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ವೇಳಾಪಟ್ಟಿ : ಪ್ರತಿದಿನ ಸಂಜೆ 7.20ಕ್ಕೆ ಸೊಲ್ಲಾಪುರದಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 7.10ಕ್ಕೆ ಯಶವಂತಪುರಕ್ಕೆ ಬರಲಿದೆ. 7.40ಕ್ಕೆ ಯಶವಂತಪುರದಿಂದ ಹೊರಟು 11.25ಕ್ಕೆ ಹಾಸನ ನಿಲ್ದಾಣಕ್ಕೆ ಆಗಮಿಸಲಿದೆ.

ಮಳೆ, ಗುಡ್ಡ ಕುಸಿತ : ಹಾಸನ-ಮಂಗಳೂರು ರೈಲು ಸ್ಥಗಿತ ಮಳೆ, ಗುಡ್ಡ ಕುಸಿತ : ಹಾಸನ-ಮಂಗಳೂರು ರೈಲು ಸ್ಥಗಿತ

ಚಿಕ್ಕಬಾಣಾವರ, ನೆಲಮಂಗಲ, ಸೋಲೂರು, ತಿಪ್ಪಸಂದ್ರ ಕುಣಿಗಲ್ ಮಾರ್ಗವಾಗಿ ರೈಲು ಕುಣಿಗಲ್ ತಲುಪಲಿದೆ. ಕುಣಿಗಲ್, ಯಡೆಯೂರು, ಬಿ.ಜಿ.ನಗರ, ಶ್ರವಣಬೆಳಗೊಳ ನಿಲ್ದಾಣದಲ್ಲಿ ಮಾತ್ರ ರೈಲು ನಿಲ್ಲಲಿದೆ.

ಚಿಕ್ಕಬಾಣಾವರ, ನೆಲಮಂಗಲ, ಹಿರಿಸಾವೆ, ಚನ್ನರಾಯಪಟ್ಟಣದಲ್ಲಿ ರೈಲು ನಿಲ್ಲಿವುದಿಲ್ಲ. ಹಾಸನ-ಯಶವಂತಪುರ ನಡುವಿನ ಪ್ರಯಾಣಕ್ಕೆ 70 ರೂ. ಟಿಕೆಟ್ ದರ ನಿಗದಿ ಪಡಿಸಲಾಗಿದೆ.

ಹಾಸನ-ಬೆಂಗಳೂರು ವೇಳಾಪಟ್ಟಿ : ಹಾಸನದಿಂದ ಸಂಜೆ 4.10ಕ್ಕೆ ಹೊರಡಲಿರುವ ರೈಲು ಶ್ರವಣಬೆಳಗೊಳ-ಬಿ.ಜಿ.ನಗರ-ಯಡಿಯೂರು-ಕುಣಿಗಲ್ ನಿಲ್ದಾಣಗಳಲ್ಲಿ ನಿಲ್ಲಿಸಿ, ರಾತ್ರಿ 8.10ಕ್ಕೆ ಯಶವಂತಪುರಕ್ಕೆ ತಲುಪಲಿದೆ. 8.50ಕ್ಕೆ ಹೊರಟು ಮರುದಿನ ಬೆಳಗ್ಗೆ 8.40ಕ್ಕೆ ಸೊಲ್ಲಾಪುರ ತಲುಪಲಿದೆ.

English summary
Solapur-Yeshwantpur super fast express train service extended till Hassan. Train will stop at Kunigal, Yadiyur, BG Nagar and Shravanabelagola stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X