ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ-ಸೊಲ್ಹಾಪುರ ರೈಲು ಆರಂಭ; ವೇಳಾಪಟ್ಟಿ

|
Google Oneindia Kannada News

ಹಾಸನ, ಡಿಸೆಂಬರ್ 13: ಹಾಸನ ಮತ್ತು ಸೊಲ್ಹಾಪುರ ನಡುವೆ ಪ್ರತಿದಿನದ ರೈಲು ಸೇವೆ ಡಿಸೆಂಬರ್ 14ರಿಂದ ಆರಂಭವಾಗಲಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಈ ರೈಲು ಸಂಪರ್ಕ ಕಲ್ಪಿಸಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ರೈಲು ನಂಬರ್ 01311/01312 ಹಾಸನ ಮತ್ತು ಸೊಲ್ಹಾಪುರ ನಡುವೆ ಸಂಚಾರ ನಡೆಸಲಿದೆ. ಸೊಲ್ಹಾಪುರ-ಯಶವಂತಪುರ ನಡುವೆ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಆಗಿ, ಯಶವಂತಪುರ-ಹಾಸನ ನಡುವೆ ಎಕ್ಸ್‌ಪ್ರೆಸ್ ಆಗಿ ಈ ವಿಶೇಷ ರೈಲು ಸಂಚಾರ ನಡೆಸಲಿದೆ.

ಈ ವಿಶೇಷ ರೈಲುಗಳಲ್ಲಿ ಸೀಟು ಕಾಯ್ದಿರಿಸಲು ಭಾನುವಾರದಿಂದ ಟಿಕೆಟ್ ಬುಕ್ ಮಾಡಬಹುದಾಗಿದೆ. ಡಿಸೆಂಬರ್ 14ರಿಂದ ಸೊಲ್ಹಾಪುರದಿಂದ ಮತ್ತು ಡಿಸೆಂಬರ್ 15ರಿಂದ ಪ್ರತಿದಿನ ಹಾಸನದಿಂದ ಈ ವಿಶೇಷ ರೈಲು ಸಂಚಾರ ನಡೆಸಲಿದೆ.

Solapur And Hassan Special Train From December 14

ವೇಳಾಪಟ್ಟಿ; ರೈಲು ನಂಬರ್ 01311 ಸೊಲ್ಹಾಪುರದಿಂದ 19.20ಕ್ಕೆ ಹೊರಡಲಿದೆ. ಮರುದಿನ ಬೆಳಗ್ಗೆ 11.35ಕ್ಕೆ ಹಾಸನಕ್ಕೆ ತಲುಪಲಿದೆ. 01312 ಸಂಖ್ಯೆಯ ರೈಲು 16.00 ಗಂಟೆಗೆ ಹಾಸನದಿಂದ ಹೊರಡಲಿದ್ದು, ಮರುದಿನ 8.15ಕ್ಕೆ ಸೊಲ್ಹಾಪುರ ತಲುಪಲಿದೆ.

ನಿಲ್ದಾಣಗಳು; ಈ ರೈಲು ಕಲಬುರಗಿ, ಶಹಾಬಾದ್, ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ ರೋಡ್, ಗುಂತಕಲ್, ಅನಂತಪುರ, ಯಲಹಂಕ, ಯಶವಂತಪುರ, ಚಿಕ್ಕಬಣಾವರ (01311ಮಾತ್ರ), ಕುಣಿಗಲ್, ಬಿ. ಜಿ. ನಗರ ಮತ್ತು ಶ್ರವಣಬೆಳಗೊಳದಲ್ಲಿ ನಿಲುಗಡೆಗೊಳ್ಳಲಿದೆ.

ಕೋವಿಡ್ ಲಾಕ್ ಡೌನ್ ಘೋಷಣೆ ಬಳಿಕ ಈ ರೈಲನ್ನು ಸ್ಥಗಿತಗೊಳಿಸಲಾಗಿತ್ತು. ರೈಲು ಸಂಚಾರವನ್ನು ಆರಂಭಿಸಬೇಕು ಎಂದು ಗುಲ್ಬರ್ಗ ಸಂಸದ ಉಮೇಶ್ ಜಾಧವ್ ಕೇಂದ್ರ ರೈಲ್ವೆ ಸಚಿವರಿಗೆ ಮನವಿಯನ್ನು ಮಾಡಿದ್ದರು.

English summary
Solapur and Hassan special train will run from December 14, 2020. Train will connect Bengaluru, Kalaburagi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X