ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಾಡಿಘಾಟ್‌: ದುರಸ್ತಿ ಅಪೂರ್ಣ, ಭಾರಿ ವಾಹನಗಳಿಗೆ ನಿರ್ಬಂಧ

By Nayana
|
Google Oneindia Kannada News

ಸಕಲೇಶಪುರ, ಜು.20: ಸಕಲೇಶಪುರ ಸುತ್ತಮುತ್ತಲು ಭಾರಿ ಮಳೆಯಿಂದಾಗಿ ಶಿರಾಡಿಘಾಟ್‌ನ ಕೆಲವು ಕಡೆ ಮಣ್ಣು ಕುಸಿದಿತ್ತು, ಹೀಗಾಗಿ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ, ಆದರೂ ವಾಹನಗಳು ಸಂಚರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಸುರಕ್ಷತೆ ಕಾಮಗಾರಿ ಮುಗಿಸದೆ ತರಾತುರಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿದ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಎಷ್ಟು ಸುರಕ್ಷಿತ ಎನ್ನುವ ಗೊಂದಲ ಈಗ ಕಾಡತೊಡಗಿದೆ. ಪ್ರತಿ ಮಳೆಗಾಲದ ಸಂದರ್ಭದಲ್ಲೂ ಪ್ರಯಾಣಿಕರಿಗೆ ಭಾರೀ ಸಮಸ್ಯೆ ಕೊಡುತ್ತಿದ್ದ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ಮಾಡುವ ಕೊನೆಯ ಹಂತಕ್ಕೆ ತಲುಪಿದೆ. ಶಿರಾಡಿಘಾಟ್ ನ 26 ಕಿಲೋಮೀಟರ್ ರಸ್ತೆಗೆ ಕಾಂಕ್ರೀಟ್ ಕಾಮಗಾರಿಗಾಗಿ ಕೇಂದ್ರ ಸರಕಾರ ಸುಮಾರು 183 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಹಮ್ಮಿಕೊಂಡಿತ್ತು.

ಶಿರಾಡಿ ಘಾಟ್ ಭಾನುವಾರ ಸಂಚಾರಕ್ಕೆ ಮುಕ್ತ, ಮೈಮರೆತರೆ ಪ್ರಪಾತಕ್ಕೆ ಖಚಿತ ಶಿರಾಡಿ ಘಾಟ್ ಭಾನುವಾರ ಸಂಚಾರಕ್ಕೆ ಮುಕ್ತ, ಮೈಮರೆತರೆ ಪ್ರಪಾತಕ್ಕೆ ಖಚಿತ

ಆದರೆ, ಈ ಹಂತದಲ್ಲಿ ರಸ್ತೆಯ ಹಲವಾರು ತಿರುವುಗಳಲ್ಲಿ ತಡೆಗೋಡೆಗಳು ಇನ್ನಷ್ಟೇ ನಿರ್ಮಾಣ ಆಗಬೇಕಿದೆ. ಇನ್ನು ಕೆಲವು ಕಡೆಗಳಲ್ಲಿ ಕಟ್ಟಿದ ತಡೆಗೋಡೆ ಕುಸಿದು ಬಿದ್ದಿದೆ. ಅಲ್ಲದೆ ಮೂರು ಪದರದಲ್ಲಿ ಕಾಂಕ್ರೀಟ್ ಹಾಕಿರುವ ಕಾರಣ ರಸ್ತೆಯು ನೆಲದ ಮಟ್ಟದಿಂದ 1 ಅಡಿಯಷ್ಟು ಎತ್ತರದಲ್ಲಿದೆ.

Shiradi Ghat opens, but buses must wait for 15 days

ಅದನ್ನು ಸಮತಟ್ಟಾಗಿಸಲು ಇಕ್ಕೆಲಗಳಲ್ಲೂ ಮಣ್ಣನ್ನು ತುಂಬುವ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಕೆಲವು ಕಡೆ ವಾಹನ ಚಾಲಕರು ಕೊಂಚ ಆಯ ತಪ್ಪಿದರೂ ಪಾತಾಳಕ್ಕೆ ಉರುಳಿ ಬೀಳುವ ಅಪಾಯವಿದೆ.

ಹಾಗಾಗಿ ದುರಸ್ತಿ ಕಾರ್ಯವನ್ನು ಮುಂದುವರೆಸಲಾಗಿದೆ. ಭಾರಿ ವಾಹನಗಳ ಬರದಂತೆ ನಿರ್ಬಂಧ ಹೇರಲಾಗಿದ್ದು, ಜನರು ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ, ಆದರೆ ಭಾರಿ ವಾಹನಗಳು ಸಂಚರಿಸುವುದರಿಂದ ಅಪಾಯವಿದೆ, ಹಾಗಾಗಿ ಈ ರಸ್ತೆ ಮೂಲಕ ಬರಬೇಡಿ ಎಂದು ಜಿಲ್ಲಾಡಳಿತ ಮನವಿ ಕೂಡ ಮಾಡಿದೆ.

English summary
The ordeal of road users travelling between the coastal districts and Bengaluru did not end even after the opening of Shiradi Ghat road on Sunday, as the district administration has decided to bar heavy vehicles, including buses, on the stretch for next 15 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X