ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಾಡಿಘಾಟ್: ಮೇ ಅಂತ್ಯದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ

|
Google Oneindia Kannada News

ಸಕಲೇಶಪುರ, ಏಪ್ರಿಲ್ 19: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರಾಡಿ ಘಾಟ್ ರಸ್ತೆಯ 2 ನೇ ಹಂತದ ಕಾಂಕ್ರೀಟ್ ರಸ್ತೆ ಕಾಮಗಾರಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಮೇ ಅಂತ್ಯದೊಳಗೆ ಪೂರ್ಣಗೊಂಡು ಹೆದ್ದಾರಿ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.

ಶಿರಾಡಿ ಘಾಟ್ ಬಂದ್: ವಾಹನ ಸಂಚಾರ ನಿರ್ಬಂಧ ಶಿರಾಡಿ ಘಾಟ್ ಬಂದ್: ವಾಹನ ಸಂಚಾರ ನಿರ್ಬಂಧ

ಸಮರೋಪಾದಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ 9.5ಕಿ.ಮೀ ರಸ್ತೆ ಕಾಮಗಾರಿ ಮುಗಿದಿದೆ. ಇನ್ನುಳಿದ ಕಾಮಗಾರಿ ಪ್ರಗತಿಯಲ್ಲಿದೆ. ಮಳೆಗಾಲ ಪ್ರಾರಂಭವಾಗುವುದರೊಳಗಾಗಿ ಕಾಮಗಾರಿ ಮುಗಿಸುವ ಉದ್ದೇಶವಿಟ್ಟುಕೊಂಡು ಕೆಲಸ ಪ್ರಾರಂಭಿಸಿದ ಮಂಗಳೂರಿನ ಓಷಿಯನ್ ಕನ್‌ಸ್ಟ್ರಕ್ಷನ್ ಕಂಪನಿ, ನಿಗದಿತ ಗುರಿಗಿಂತ 2 ತಿಂಗಳು ಮೊದಲೇ ಕಾಮಗಾರಿ ಮುಗಿಸುವ ಉತ್ಸಾಹದಲ್ಲಿದೆ, ಕಳೆದ ವರ್ಷ ಕಾಮಗಾರಿ ಮಾಡಿರುವ ಅನುಭವ ಮತ್ತು ಆಗಿಂದಾಗ್ಗೆ ಮಳೆ ಸಮಸ್ಯೆ ಇಲ್ಲದ ಕಾರಣ ಅವಧಿಗಿಂತ ಬೇಗನೆ ಕಾಮಗಾರಿ ಮುಗಿಯಲಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

13ಕಿಮೀ 78 ಕೋಟಿ ರೂ.ವೆಚ್ಚ: ಕೆಂಪು ಹೊಳೆಯಿಂದ ಗುಂಡ್ಯ ತನಕ 13ಕಿ.ಮೀ ರಸ್ತೆ ನಿರ್ಮಾಣಕ್ಕೆ 78 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ 3 ಸೇತುವೆಗಳ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಒಂದು ಹೊಸ ಸೇತುವೆ ನಿರ್ಮಾಣವಾಗಲಿದೆ. 74 ಕಡೆಗಳಲ್ಲಿ ಚರಂಡಿ ಕೆಲಸವನ್ನು ಈಗಾಗಲೇ ಮುಗಿಸಲಾಗಿದೆ. ಹೊಳೆ ಬದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿ ಮಾತ್ರ ನಡೆಯುತ್ತಿದೆ.

Shiradi ghat may reopen by May end

ಸುರಂಗ ಯೋಜನೆ ಕನಸು: ಜಪಾನ್ ತಾಂತ್ರಿಕತೆ ಮತ್ತು ನೆರವು ಬಳಸಿಕೊಂಡು ಸುರಂಗ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಸಕಲೇಶಪುರ ಭಾಗದಿಂದ ಗುಂಡ್ಯ ತನಕ ಹಲವು ಗುಡ್ಡಗಳನ್ನು ಆಯ್ದು ಹೋಗುವ ಈ ಸುರಂಗ ಮಾರ್ಗದ ಉದ್ದ 18 ಕಿ.ಮೀ ಇರಲಿದೆ.

ಎರಡು ವಾಹನಗಳು ಚಲಿಸಲು ಅನುಕೂಲವಾಗುವಂತೆ ದ್ವಿಪಥ ಹೊಂದಿರುವ ಸುರಂಗ ನಿರ್ಮಾಣ 100.ಕಿ.ಮೀ ವೇಗದಲ್ಲಿ ವಾಹನಗಳು ಚಲಿಸಲು ಅನುಕೂಲವಾಗುವಂತೆ ಮಾಡಲು ಉದ್ದೇಶಿಸಲಾಗಿದೆ.

English summary
Most awaited concrete road construction work in bengaluru- Mangaluru national highway at Shiradi ghat completed soon and the highway will be reopen by end of May, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X