ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಾಡಿ ಘಾಟ್: ಜೂನ್‌ಗೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ

|
Google Oneindia Kannada News

ಸಕಲೇಶಪುರ, ಮಾರ್ಚ್ 31: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರಾಡಿ ಘಾಟ್ ರಸ್ತೆಯ 2 ನೇ ಹಂತದ ಕಾಂಕ್ರೀಟ್ ರಸ್ತೆ ಕಾಮಗಾರಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಮೇ ಅಂತ್ಯದೊಳಗೆ ಪೂರ್ಣಗೊಂಡು ಜೂನ್ ಆರಂಭದಲ್ಲಿ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ರಾಷ್ಟ್ರೀಯ ಹೆದ್ದಾರಿ ಕೆಂಪುಹೊಳೆಯಿಂದ ಅಡ್ಡಹೊಳೆ ವರೆಗೆ 13 ಕಿ.ಮೀ ಕಾಂಕ್ರೀಟ್ ರಸ್ತೆ 2 ನೇ ಹಂತದ ಕಾಮಗಾರಿಗೆ 74 ಕೋಟಿ ರೂ. ಮಂಜೂರಾಗಿದ್ದು, ಜರ್ಮನಿಯಿಂದ ತರಿಸಲಾದ ಹೊಸ ಯಂತ್ರ ಬಳಸಿ, ಆಧುನಿಕ ತಂತ್ರಜ್ಞಾನದಲ್ಲಿ ಕಾಮಗಾರಿ ಅತಿ ವೇಗದಲ್ಲಿ ಸಾಗುತ್ತಿದೆ. 77 ಮೋರಿಗಳ ಪೈಕಿ 74 ಮೋರಿಗಳ ಸೇತುವೆ ವಿಸ್ತರಣೆ ಕಾಮಗಾರಿಯೂ ನಡೆಯುತ್ತಿದೆ.

ಶಿರಾಡಿ ಘಾಟ್ ಬಂದ್: ವಾಹನ ಸಂಚಾರ ನಿರ್ಬಂಧ ಶಿರಾಡಿ ಘಾಟ್ ಬಂದ್: ವಾಹನ ಸಂಚಾರ ನಿರ್ಬಂಧ

ವಿಶೇಷ ತಂತ್ರಜ್ಞಾನ: ಶಿರಾಡಿ ಘಾಟ್ ಪ್ರದೇಶದಲ್ಲಿ ವರ್ಷದ 6 ತಿಂಗಳು ನಿರಂತರ ಮಳೆ ಸುರಿಯುತ್ತಿರುತ್ತದೆ. ಆದರೂ ಬಂಡೆ ಕಲ್ಲುಗಳ ಮಧ್ಯದಿಂದ ಸದಾ ನೀರು ಜಿನುಗುತ್ತಿರುವುದು ಮತ್ತು ನೀರಿನ ಒರತೆಯಿಂದಾಗಿ ಮಣ್ಣು ಮೃದುವಾಗಿರುತ್ತದೆ. ಆದ್ದರಿಂದ ವಿಶೇಷ ತಂತ್ರಜ್ಞಾನದಿಂದ ರಸ್ತೆ ನಿರ್ಮಿಸಲಾಗುತ್ತಿದೆ. ಕಾಮಗಾರಿ ಅತಿ ವೇಗದಿಂದ ನಡೆಯುತ್ತಿದೆ.

Shiradi ghat highway may open in June

ಆದುನಿಕ ಜರ್ಮನಿ ಯಂತ್ರ: ಜರ್ಮನಿಯಿಂದ 10 ಕೋಟಿ ರೂ. ಮೌಲ್ಯದ ವಿರ್ಟ್ ಜನ್ ಕಂಪನಿಯ ಟಿಸಿಎಂ-180 ಸೆನ್ಸರ್ ಪೇವರ್ ಯಂತ್ರ ತರಿಸಲಾಗಿದ್ದು, ಈ ಮೂಲಕ ಜಿಎಸ್ ಬಿ ಮತ್ತು ಡಿಎಲ್ ಸಿಹಾಗೂ ಪಿಕ್ಯೂಸಿ 3 ಹಂತದಲ್ಲಿ 600 ಎಂಎಂ ದಪ್ಪದಲ್ಲಿ ಪ್ರತಿದಿನ 2ರಿಂದ 3 ಕಿ.ಮೀ ಉದ್ದಕ್ಕೆ ಕಾಂಕ್ರೀಟೀಕರಣ ನಡೆಯುತ್ತಿದೆ.

English summary
Secon phase of concrete road construction in Bengaluru-Mngaluru national highway work in Shiradi ghat may complete soon and expected that the road will reopen in the month of June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X