• search
 • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಾಸನ; ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಆತ್ಮಹತ್ಯೆ

|

ಹಾಸನ, ನವೆಂಬರ್ 25 : ಆಲೂರು ತಾಲೂಕಿನ ಕಾರ್ಜುವಳ್ಳಿಯ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2006ರಿಂದ ಶ್ರೀಗಳು ಬಾಳೆಹೊನ್ನೂರಿನ ಶಾಖಾ ಮಠದ ಜವಾಬ್ದಾರಿ ವಹಿಸಿಕೊಂಡಿದ್ದರು.

ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿ ಆಲೂರು ಪೊಲೀಸರು ಪರಿಶೀಲನೆ ನಡೆಸಿದರು. ಡೆತ್ ನೋಟ್ ಪತ್ತೆಯಾಗಿದ್ದು, "ನನ್ನ ಸಾವಿಗೆ ನಾನೇ ಕಾರಣ ಇಂತಿ ನಿಮ್ಮ ಶ್ರೀ ಗುರು" ಎಂಬ ಬರಹ ಪತ್ತೆಯಾಗಿದೆ.

ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿದಾರ ಆತ್ಮಹತ್ಯೆ

ಕೋವಿಡ್ ಸೋಂಕು ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಮಠಕ್ಕೆ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಸ್ವಾಮೀಜಿಗಳು ಸಹ ಸದಾ ಏಕಾಂತದಲ್ಲಿಇರುತ್ತಿದ್ದರು. ಆತ್ಮಹತ್ಯೆ ಮಾಡಿಕೊಳ್ಳಲು ನಿಖರವಾದ ಕಾರಣ ತಿಳಿದುಬಂದಿಲ್ಲ.

3 ಮಕ್ಕಳನ್ನು ಕೊಂದು ಸೆಕ್ಯುರಿಟಿ ಗಾರ್ಡ್ ತಾನೂ ಆತ್ಮಹತ್ಯೆ !

2006ರಿಂದ ಜವಾಬ್ದಾರಿ : ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಪೂರ್ವಶ್ರಮದ ಹೆಸರು ಸತೀಶ್ ದೇವರು. ಸನ್ಯಾಸ ಸ್ವೀಕರಿಸಿದ ಬಳಿಕ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿಯಾಗಿದ್ದರು. 2006ರಿಂದ ಕಾರ್ಜುವಳ್ಳಿಯ ಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಸ್ವಾಮೀಜಿಗಳು ಮೂಲತಃ ಕಾರವಾರ ಮೂಲದವರು.

ತಾಯಿಯಿಂದ ವಂಚನೆ: ಮಗಳು ಆತ್ಮಹತ್ಯೆ ಗೆ ಯತ್ನ

   ರಾಜ್ಯ ರಾಜಕಾರಣ ಅಲ್ಲೋಲ ಕಲ್ಲೋಲವಾಗಲಿದೆ ಎಂದ ಕೋಡಿ ಮಠದ ಶ್ರೀಗಳು | Oneindia Kannada

   ಆಲೂರು ಪೊಲೀಸರು ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆತ್ಮಹತ್ಯೆ ಪ್ರಕರಣವನ್ನು ದಾಖಲು ಮಾಡಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

   English summary
   Hassan district Alur taluk Karjuvalli mutt Shambulnga Shivacharya swamiji found dead. Death note found by police swamiji committed suicide.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X