• search
  • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂತ್ರಸ್ತರಿಗೆ ಪರಿಹಾರ ಒದಗಿಸುವ ಬಗ್ಗೆ ರೋಹಿಣಿಗೆ ಎಚ್ಡಿಡಿ ಕಿವಿಮಾತು

By Mahesh
|

ಹಾಸನ ಆಗಸ್ಟ್ 29: ಹಾಸನ ಜಿಲ್ಲೆಯ ಸಕಲೇಶಪುರ ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಬಾರಿ ಪ್ರಮಾಣದ ನಷ್ಟವನ್ನು ನಿಖರವಾಗಿ ಅಂದಾಜಿಸಿ ಹೆಚ್ಚಿನ ಪರಿಹಾರ ಒದಗಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು ಸಕಲೇಶಪುರ ಹಾಗೂ ಅರಕಲಗೂಡು ತಾಲ್ಲೂಕುಗಳಲ್ಲಿ ಮಳೆಯಿಂದ ಹೆಚ್ಚು ಹಾನಿಯಾಗಿದ್ದು ಎಲ್ಲಾ ಸಂತ್ರಸ್ತರಿಗೂ ಸೂಕ್ತ ರೀತಿಯಲ್ಲಿ ಪರಿಹಾರ ದೊರೆಯಬೇಕು ಎಂದರು.

ನೆರೆ ಪೀಡಿತ, ಭೂ ಕುಸಿತ ಪ್ರದೇಶಗಳಿಗೆ ಎಚ್ ಡಿ ರೇವಣ್ಣ ಭೇಟಿ

ಸಕಲೇಶಪುರ ತಾಲ್ಲೂಕಿನ ಯಸಳೂರು ಹಾಗೂ ಹೆತ್ತೂರು ಹೊಬಳಿಗಳಲ್ಲಿ ಅಪಾರ ಪ್ರಮಾಣದ ಭೂಮಿ, ಬೆಳೆ, ರಸ್ತೆ, ಕಟ್ಟಡಗಳು ತೀವ್ರ ಸ್ವರೂಪದಲ್ಲಿ ಹಾನಿಗೀಡಾಗಿವೆ. ತಾವೂ ಅದನ್ನು ಕಣ್ಣಾರೆ ಕಂಡಿದ್ದು ನಷ್ಟ ಅಂದಾಜಿಸುವಾಗ ಅಧಿಕಾರಿಗಳ ಮಾನವೀಯ ದೃಷ್ಟಿ ಹೊಂದಿರಬೇಕು ಎಂದರು.

ಹಾಸನದ ಸಂತ್ರಸ್ತರಿಗೆ ತಾತ್ಕಾಲಿಕ ವ್ಯವಸ್ಥೆ : ರೋಹಿಣಿ ಸಿಂಧೂರಿ

ಹಲವೆಡೆ ಭೂಕುಸಿತದಿಂದ ಜಮೀನ ಮೇಲೆ ಮಣ್ಣು ಸಂಗ್ರಹವಾಗಿದೆ, ಕೆಲವೆಡೆ ಜಮೀನೇ ಕುಸಿದು ಕೊಚ್ಚಿ ಹೋಗಿದೆ, ಮಾಲಿಕರು ಮತ್ತೆ ಮೊದಲಿನಿಂದ ಬದುಕು ಕಟ್ಟಿಕೊಳ್ಳಬೇಕಾಗಿದೆ. ಹಾಗಾಗಿ, ನಷ್ಟದ ಸಮೀಕ್ಷೆ ವೇಳೆ ಅಧಿಕಾರಿಗಳು ಎಲ್ಲಾ ರೀತಿಯ ಸಾಕಷ್ಟು ಹಾನಿಗಳನ್ನು ಅವಲೋಕಿಸಬೇಕು ಎಂದರು.

ಪ್ರಧಾನಿಯವರಿಗೆ ಪತ್ರ ಬರೆದು ಮನವಿ

ಪ್ರಧಾನಿಯವರಿಗೆ ಪತ್ರ ಬರೆದು ಮನವಿ

ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯಡಿ ಅತೀ ಕಡಿಮೆ ಪ್ರಮಾಣದಲ್ಲಿ ಪರಿಹಾರ ಸಿಗುತ್ತದೆ. ಇದರ ಮಾರ್ಗಸೂಚಿ ದರಗಳನ್ನು ಬದಲಾಯಿಸಬೇಕಿದೆ. ಈ ಬಗ್ಗೆ ತಾವೂ ಕೂಡ ಪ್ರಧಾನಿಯವರಿಗೆ ಪತ್ರ ಬರೆದು ಮನವಿ ಮಾಡುವುದಾಗಿ ದೇವೇಗೌಡರು ಹೇಳಿದರು.

ಸಕಲೇಶಪುರ ತಾಲ್ಲೂಕಿನಲ್ಲಿ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ, ಈ ಬಾರಿಯ ಬೆಳೆದು ನಿಂತಿದ್ದ ಫಸಲು ಹಾನಿ ಮಾತ್ರವಲ್ಲ. ಮೆಣಸು ಬೆಳ್ಳೆಗಳೆ ಕೊಳೆತು ನಾಶವಾಗಿದೆ. ಇದು ಸುದೀರ್ಘಕಾಲದವರೆಗೆ ರೈತರ ಅರ್ಥಿಕತೆ ಮೇಲೆ ಪರಿಹಾರ ಬೀರುತ್ತದೆ. ಇದೇ ರೀತಿ ಶುಂಠಿ, ಜೋಳ, ಭತ್ತ, ರಾಗಿ ಬೆಳೆಗಳು ನಾಶವಾಗಿದ್ದು ಮಾರುಕಟ್ಟೆ ದರದನ್ವಯ ಪರಿಹಾರ ದೊರೆಯುವಂತಾಗಬೇಕು ಎಂದು ಮಾಜಿ ಪ್ರಧಾನಿ ಅಭಿಪ್ರಾಯ ಪಟ್ಟರು.

ಶಿರಾಡಿ ಘಾಟ್ ಬಂದ್: ಕೈಕೊಟ್ಟ ಸಚಿವ ರೇವಣ್ಣನವರ ವಾಸ್ತುಶಾಸ್ರ!

ರೈತರಿಗೆ ಸೂಕ್ತ ಪರಿಹಾರ ದೊರೆಯಬೇಕು

ರೈತರಿಗೆ ಸೂಕ್ತ ಪರಿಹಾರ ದೊರೆಯಬೇಕು

ಸಕಲೇಶಪುರ ತಾಲ್ಲೂಕಿನ ಹಿಜ್ಜನಹಳ್ಳಿಯಲ್ಲಿ ಸಂಭವಿಸಿದ ಭೂಕುಸಿತದಿಂದ ಭೂಮಿ ಕಳೆದು ಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ದೊರೆಯಬೇಕು ಮುಖ್ಯಮಂತ್ರಿಯವರೊಂದಿಗೂ ಈ ಬಗ್ಗೆ ಚರ್ಚಿಸಿರುವುದಾಗಿ ಅವರು ಹೇಳಿದರು.

ಆಯಾವಿಭಾಗಗಳ ಶಾಸಕರು ಸಮಸ್ಯಾತ್ಮಕ ಪ್ರದೇಶಗಳಿಗೆ ಹೆಚ್ಚು ಭೇಟಿ ನೀಡಿ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು ಸಂತ್ರಸ್ತರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದು ದೇವೇಗೌಡರು ತಿಳಿಸಿದರು.

ಮಲೆನಾಡು ಭಾಗದಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡುವಾಗ ಭೂ ಕುಸಿತದ ಅಪಾಯಗಳಿಗೆ ಮುಂಜಾಗ್ರತಾ ಕ್ರಮವಹಿಸರಬೇಕು. ಅದರಿಂದ ಅದಷ್ಟೋ ಮಟ್ಟಿಗೆ ಅನಾಹುತಗಳು ಕಡಿಮೆಯಾಗುತ್ತದೆ ಎಂದ ಮಾಜಿ ಪ್ರಧಾನಿ ದೇವೇಗೌಡರು.

ರಾಮನಾಥಪುರದಲ್ಲಿ ಕಾವೇರಿ ನದಿ ನೀರಿನ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಬದಲಿ ನಿವೇಶನ ಒದಗಿಸಿ ಮನೆಗಳನ್ನು ಕಟ್ಟಿಕೊಡಬೇಕು ಹಾಗೂ ಜಲಾವೃತಗೊಳ್ಳುವ ಪ್ರದೇಶಗಳಲ್ಲಿ ಮನೆಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.

ಹಾಸನದ ಸಂತ್ರಸ್ತರಿಗೆ ತಾತ್ಕಾಲಿಕ ವ್ಯವಸ್ಥೆ : ರೋಹಿಣಿ ಸಿಂಧೂರಿ

ಪ್ರಧಾನಿಯವರಿಗೆ ಪತ್ರ ಬರೆದು ಮನವಿ

ಪ್ರಧಾನಿಯವರಿಗೆ ಪತ್ರ ಬರೆದು ಮನವಿ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಮಾತನಾಡಿ ಜಿಲ್ಲೆಯ ಸಕಲೇಶಪುರ, ಅರಕಲಗೂಡು, ಬೇಲೂರು ಮತ್ತು ಆಲೂರು ತಾಲ್ಲೂಕುಗಳಲ್ಲಿ 307ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಕೃಷಿ, ತೋಟಗಾರಿಕ, ಲೋಕೋಪಯೋಗಿ, ಸಣ್ಣ ನೀರಾವರಿ, ವಿವಿಧ ಇಲಾಖೆಗಳು ನಷ್ಟವನ್ನು ಅಂದಾಜಿಸಿವೆ. ತುರ್ತು ಪರಿಹಾರಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 1044 ಮನೆಗಳು ಹಾನಿಗೀಡಾಗಿದೆ ಅದರಲ್ಲಿ 98 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು 41 ಮನೆಗಳು ಶೇ 60ಕ್ಕೂ ಹೆಚ್ಚು ಭಾಗ ಹಾನಿಗೊಂಡಿವೆ. ಎನ್.ಡಿ.ಆರ್.ಎಫ್ ಮಾರ್ಗಸೂಚಿ ದರದನ್ವಯ 282.2 ಲಕ್ಷ ರೂಪಾಯಿ ಮನೆ ಹಾನಿಗೆ ಪರಿಹಾರ ನೀಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದೇ ರೀತಿ 655510 ವಿವಿಧ ಪ್ರದೇಶಗಳಲ್ಲಿ ಕಾಫಿ/ಮೆಣಸು, 127 ಎಕರೆ ,ಏಲಕ್ಕಿ 24655 ಎಕರೆ, ಭತ್ತ 972 ಎಕರೆ, ಅಡಿಕೆ 120 ಎಕರೆ, ಶುಂಠಿ 3535 ಎಕರೆ, ಆಲೂಗೆಡ್ಡೆ 765ಎಕರೆ, ರಾಗಿ 2401 ಎಕರೆ ಮುಸುಕುಜೋಳ ಬೆಳೆ ಹಾನಿಗೀಡಾಗಿದ್ದು 6899.2 ಲಕ್ಷ ರೂಪಾಯಿ ಬೆಳೆ ಪರಿಹಾರ ನೀಡಬೇಕಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.

ಮನೆ ಸಂಪೂರ್ಣ ಹಾನಿಗೆ 95000 ರುಪಾಯಿ

ಮನೆ ಸಂಪೂರ್ಣ ಹಾನಿಗೆ 95000 ರುಪಾಯಿ

ಎನ್.ಡಿ.ಆರ್.ಎಫ್ ಮಾರ್ಗಸೂಚಿದರದನ್ವಯ ನಷ್ಟ ಪರಿಹಾರ ವಿತರಣೆ ಮಾಡಬೇಕಾಗಿದೆ ಇದರಲ್ಲಿ ಮನೆ ಸಂಪೂರ್ಣ ಹಾನಿಗೆ 95000 ರು, ಭೂ ಕುಸಿತ, ಮಣ್ಣು ಶೇಖರಣೆಗೆ ಎಕರೆಗೆ 37500, ಕಾಫಿ ಮೆಣಸು ಅಡಿಕೆ ಹಾನಿಗೆ ಎಕರೆಗೆ 7000 ಭತ್ತ, ರಾಗಿ ಬೆಳೆ ಹಾನಿಗೆ ಎಕರೆ 2700ರೂ ಪರಿಹಾರ ನೀಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ಉಪ ವಿಭಾಗಾಧಿಕಾರಿ ಲಕ್ಷಿಕಾಂತ್ ರೆಡಿಯವರು ಮಾತನಾಡಿ, ತಮ್ಮ ಉಪ ವಿಭಾಗ ವ್ಯಾಪ್ತಿಯ ನಾಲ್ಕು ತಾಲ್ಲೂಕುಗಳಲ್ಲಿ ಒಟ್ಟಾರೆ 307 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಸಕಲೇಶಪುರ ತಾಲ್ಲೂಕಿನಲ್ಲಿ 247 ಕೋಟಿ ರೂಪಾಯಿ ನಷ್ಟ ಅಂದಾಜಿಸಲಾಗಿದೆ ಆಲೂರು ತಾಲ್ಲೂಕಿನಲ್ಲಿ 877.95 ಲಕ್ಷ ರೂಪಾಯಿ, ಬೇಲೂರು ತಾಲ್ಲೂಕಿನಲ್ಲಿ 1324 ಲಕ್ಷ ರೂಪಾಯಿ, ಅರಕಲಗೂಡು ತಾಲ್ಲೂಕಿನಲ್ಲಿ 3849 ಲಕ್ಷ ರೂಪಾಯಿ ಹಾನಿ ಸಂಭವಿಸಿದೆ ಎಂದು ವಿವರ ನೀಡಿದರು.

ರೈತರ ಸಂಕಷ್ಟಗಳನ್ನು ವಿವರಿಸಿದರು

ರೈತರ ಸಂಕಷ್ಟಗಳನ್ನು ವಿವರಿಸಿದರು

ಶಾಸಕರಾದ ಎಚ್.ಕೆ. ಕುಮಾರಸ್ವಾಮಿಯವರು ಸಕಲೇಶಪುರ ತಾಲ್ಲೂಕಿನಲ್ಲಿ ಅತಿವೃಷ್ಟಿಯ ಗಂಭೀರತೆ, ರೈತರ ಸಂಕಷ್ಟಗಳನ್ನು ವಿವರಿಸಿದರು.

ಸಕಲೇಶಪುರ ವ್ಯಾಪ್ತಿಯಲ್ಲಿ ಭೂಕುಸಿತದಿಂದ ಟ್ಯಾಂಕರ್ ಮಗುಚಿ ಪ್ರಾಣ ಕಳೆದುಕೊಂಡ ಚಾಲಕ ಹಾಗೂ ಕ್ಲಿನರ್ ರಿಗೂ ಪ್ರಕೃತಿ ವಿಕೋಪ ನಿಧಯ ಅನುದಾನದಿಂದ ಪರಿಹಾರ ಒದಗಿಸಬೇಕು ಎಂದು ಹೇಳಿದರು.

ಶಾಸಕರಾದ ಲಿಂಗೇಶ್ ಅವರು ಬೇಲೂರು ತಾಲ್ಲೂಕಿನಲ್ಲಿ ಅತಿವೃಷ್ಟಿ, ಅನಾವೃಷ್ಟಿ ಎಡೆಗೂ ಹಾನಿ ಉಂಟು ಮಾಡಿವೆ ಒಂದೆಡೆ ಮಳೆ ಹಾನಿ ಮತ್ತೊಂದೆಡೆ ಬರ ಬೇಲೂರು ತಾಲ್ಲೂಕನ್ನು ಕಾಡಿದೆ ಎಂದರು.

ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು ವಿವರ ಒದಗಿಸಿದರು.

ಮಳೆ ಹಾನಿ ವಿವರಳ ಒಟ್ಟು ಅಂದಾಜು ನಷ್ಟ 30768.18 ಲಕ್ಷ ಇದನ್ನು ಬೆ¼, ಮನೆ ಹಾನಿ ಭೂಕುಸಿತ 7347.28 (ಸಕಲೇಶಪುರ 6609.60ಕ್ಕೆ ಅಮದಾಜು 16.65 ಲಕ್ಷ ಬೇಲೂರು ರೂ 28.15 ಲಕ್ಷ, ಅರಕಲಗೂಡು 692.88 ಲಕ್ಷ ರೂಪಾಯಿ).

ಮಳೆ ಹಾನಿ ವಿವರಗಳ ಒಟ್ಟು ಅಂದಾಜು ನಷ್ಟ

ಮಳೆ ಹಾನಿ ವಿವರಗಳ ಒಟ್ಟು ಅಂದಾಜು ನಷ್ಟ

ಮಳೆ ಹಾನಿ ವಿವರಗಳ ಒಟ್ಟು ಅಂದಾಜು ನಷ್ಟ 30768.18 ಲಕ್ಷ ಇದನ್ನು ಬೆಳೆ, ಮನೆ ಹಾನಿ ಭೂಕುಸಿತ 7347.28 ( ಸಕಲೇಶಪುರ 6609.60ಕ್ಕೆ ಅಂದಾಜು 16.65 ಲಕ್ಷ ಬೇಲೂರು ರೂ 28.15 ಲಕ್ಷ, ಅರಕಲಗೂಡು 692.88 ಲಕ್ಷ ರೂಪಾಯಿ).

ಲೋಕೋಪಯೋಗಿ ಇಲಾಖೆ ರಸ್ತೆ ಕಟ್ಟಡದ ಒಟ್ಟು ಹಾನಿ 16624.24 ಲಕ್ಷ ರೂಪಾಯಿ, (ಸಕಲೇಶಪುರ ಆಲೂರು 15055 ಲಕ್ಷ, ಬೇಲೂರು 344.24 ಲಕ್ಷ ರೂಪಯಿ, ಅರಕಲಗೂಡು 1225 ಲಕ್ಷ ರೂಪಾಯಿ) ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆಗೆ ಗ್ರಾಮೀಣ ರಸೆ, ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಗಳ ಒಟ್ಟು ಹಾನಿ 6338.70 (ಸಕಲೇಶಪುರ 2919.50 ಲಕ್ಷ, ಆಲೂರು 790.30ಲಕ್ಷ ರೂಪಾಯಿ,ಬೇಲೂರು 818.60ಲಕ್ಷ ರೂಪಾಯಿ, ಅರಕಲಗೂಡು 1810.30ಲಕ್ಷ ರೂಪಾಯಿ ಚೆಸ್ಕಾಂ ವಿದ್ಯುತ್ ಕಂಬಗಳು, ತಂತಿ ಮತ್ತು ಭ್ರಾನ್ಸ್ ಫಾರಂಗಳು ಸಕಲೇಶಪುರ 131.22 ಲಕ್ಷ ಆಲೂರು 57.50ಲಕ್ಷ ಬೇಲೂರು 118.40 ಲಕ್ಷ ಅರಕಲಗೂಡು 114.84 ಲಕ್ಷ ರೂಪಾಯಿ ಒಟ್ಟು 421.96 ಲಕ್ಷ ರೂಪಾಯಿ.

ಸಣ್ಣ ನೀರಾವರಿ ಇಲಾಖೆ ಸಕಲೇಶಪುರ 1.50 ಲಕ್ಷ ರೂಪಾಯಿ, ಆಲೂರು 13.50 ಲಕ್ಷ ರೂಪಾಯಿ, ಬೇಲೂರು 15ಲಕ್ಷ ರೂಪಾಯಿ, ಅರಕಲಗೂಡು 6 ಲಕ್ಷ ರೂಪಾಯಿ ಒಟ್ಟು 36 ಲಕ್ಷ ರೂಪಾಯಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hassan district Sakaleshpur's flood hit areas need more donations and attention, district administration should work on priority and see that work is done said former PM, MP, JDS supremo HD Deve gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more