ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ; ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ಕಡ್ಡಾಯ ಕೋವಿಡ್ ಪರೀಕ್ಷೆಗೆ ಸೂಚನೆ

By Lekhaka
|
Google Oneindia Kannada News

ಹಾಸನ, ನವೆಂಬರ್ 18: ರಾಜ್ಯಾದ್ಯಂತ ನವೆಂಬರ್ 17ರಿಂದ ಪದವಿ ಕಾಲೇಜುಗಳು ಪ್ರಾರಂಭವಾಗಿವೆ. ಹಾಸನ ಜಿಲ್ಲೆಯಲ್ಲೂ ಬಹುಪಾಲು ಕಾಲೇಜುಗಳು ತೆರೆದಿದ್ದು, ಎಲ್ಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಆರ್ ಟಿಪಿಸಿಆರ್ ಗಂಟಲು ದ್ರವ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಲು ತಾಲೂಕು ಆರೋಗ್ಯಾಧಿಕಾರಿ ಡಾ. ವಿಜಯ್ ಸೂಚನೆ ನೀಡಿದ್ದಾರೆ.

ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಿಂದ ಆಕಾಶವಾಣಿ ಹಿಂಭಾಗದಲ್ಲಿನ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ, ಹೊಸ ಬಸ್ ನಿಲ್ದಾಣ, ನಗರಸಭೆ ಆವರಣ, ಆರ್ ಟಿಒ ಕಚೇರಿ ಆವರಣ, ಎಂ.ಕೃಷ್ಣ ಆಸ್ಪತ್ರೆ ನಗರ ಆರೋಗ್ಯ ಕೇಂದ್ರ, ಬೀರನಹಳ್ಳಿ ನಗರ ಆರೋಗ್ಯ ಕೇಂದ್ರ, ಹೊಯ್ಸಳ ನಗರ, ಪೆನ್ ಶನ್ ಮೊಹಲ್ಲಾ ನಗರ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದೆ.

ಕಾಲೇಜುಗಳು ಪುನರಾರಂಭ: ಬೆಂಗಳೂರಿನ 450 ಕಡೆ ಗಂಟಲು ದ್ರವ ಮಾದರಿ ಸಂಗ್ರಹ ತಂಡ ನಿಯೋಜನೆಕಾಲೇಜುಗಳು ಪುನರಾರಂಭ: ಬೆಂಗಳೂರಿನ 450 ಕಡೆ ಗಂಟಲು ದ್ರವ ಮಾದರಿ ಸಂಗ್ರಹ ತಂಡ ನಿಯೋಜನೆ

ಹಾಸನ ತಾಲೂಕಿನ ಎಲ್ಲಾ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಪರೀಕ್ಷೆ ನಡೆಸುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಯೋಗಪಡಿಸಿಕೊಳ್ಳಬೇಕೆಂದು ವಿಜಯ್ ತಿಳಿಸಿದ್ದಾರೆ.

Hassan: RTPCR Test Compulsory For College Students And Lecturers

ಹಾಸನ ಜಿಲ್ಲೆಯಲ್ಲಿ ನವೆಂಬರ್ 17ರ ವರದಿಯಂತೆ ಒಟ್ಟು 26,474 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, 25486 ಮಂದಿ ಗುಣಮುಖರಾಗಿದ್ದಾರೆ. ಸದ್ಯ 606 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ ಕೊರೊನಾ ಸೋಂಕಿನಿಂದ 382 ಮಂದಿ ಸಾವನ್ನಪ್ಪಿದ್ದಾರೆ.

Recommended Video

ಒಬಾಮ ಹೆಂಡತಿ ಬೇಸರ ಆಗಿರೋದು ಇದೆ ಕಾರಣಕ್ಕೆ !! | Oneindia Kannada

English summary
Most colleges in the Hassan district are opened on nov 17. Health officer vijay instructed to conduct RTPCR test for college students and lecturers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X