ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನಾಂಬೆ ದರ್ಶನ: ಅಧಿಕಾರಿಗಳಿಗೆ ರೋಹಿಣಿ ಸಿಂಧೂರಿ ಕ್ಲಾಸ್‌

|
Google Oneindia Kannada News

Recommended Video

Hasanamba Temple, Hassan : ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ರೋಹಿಣಿ ಸಿಂಧೂರಿ | Oneindia Kannada

ಹಾಸನ, ಅಕ್ಟೋಬರ್ 29: ಹಾಸನದ ಐತಿಹಾಸಿಕ ಹಾಸನಾಂಬೆ ದೇವಾಲಯ ನವೆಂಬರ್ 1 ರಿಂದ ಬಾಗಿಲು ತೆರೆಯುತ್ತಿದ್ದು, ಜಿಲ್ಲಾಡಳಿತದ ವತಿಯಿಂದ ಯಾವುದೇ ಕೊರತೆ ಆಗದಂತೆ ವ್ಯವಸ್ಥೆ ಮಾಡಲು ಇಂದು ಜಿಲ್ಲಾಧಿಕಾರಿ ರೋಹಿಣಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಲಾಯಿತು.

ನವೆಂಬರ್ 1 ರಿಂದ ಹಾಸನಾಂಬೆಯ ದರ್ಶನ ಪಡೆಯಿರಿನವೆಂಬರ್ 1 ರಿಂದ ಹಾಸನಾಂಬೆಯ ದರ್ಶನ ಪಡೆಯಿರಿ

ಜಾತ್ರಾಮಹೋತ್ಸವ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿದ್ದ ಜಿಲ್ಲಾಧಿಕಾರಿ ರೋಹಿಣಿ ಅವರು, ದೇವಿ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಸಮಸ್ಯೆ ಆಗಲಾರದಂತೆ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಹಾಸನಾಂಬೆಗೆ ಕೋಟಿಗಟ್ಟಲೆ ಧನ, ಕನಕ ಅರ್ಪಣೆ ಹಾಸನಾಂಬೆಗೆ ಕೋಟಿಗಟ್ಟಲೆ ಧನ, ಕನಕ ಅರ್ಪಣೆ

ಪ್ರತಿಯೊಂದು ಇಲಾಖೆಗೂ ಕರ್ತವ್ಯಗಳ ಹಂಚಿಕೆ ಮಾಡಿದ ಜಿಲ್ಲಾಧಿಕಾರಿ ರೋಹಿಣಿ. ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದ ಮೂಲಕ ಕಾರ್ಯಕ್ರಮ ಯಶಸ್ವಿಯಾಗುವಂತೆ ಮಾಡಬೇಕು ಎಂದು ಹೇಳಿದರು.

ಹಾಸನ : 10 ವರ್ಷದ ರೈಲ್ವೆ ಮೇಲ್ಸೇತುವೆ ಬೇಡಿಕೆ ಈಗ ಈಡೇರಿತು ಹಾಸನ : 10 ವರ್ಷದ ರೈಲ್ವೆ ಮೇಲ್ಸೇತುವೆ ಬೇಡಿಕೆ ಈಗ ಈಡೇರಿತು

Rohini Sindhuri organized special meeting about Hasanamba temple

ಬಾಗಿಲು ತೆರೆದಿರುವಷ್ಟು ದಿನವೂ ಹೆಚ್ಚಿನ ಸಮಯ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. ಭಕ್ತಾಧಿಗಳ ನಿಯಂತ್ರಣ ಹಾಗೂ ಇನ್ನಿತರೆ ಕಾರ್ಯಗಳಿಗೆ ಸ್ಥಳೀಯ ಸಂಘ-ಸಂಸ್ಥೆಗಳು, ಸ್ಕೌಟ್, ಗೈಡ್ಸ್‌ ಸದಸ್ಯರನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.

'ಹಾಸನದ ಕೆರೆಗಳಿಗೆ ನೀರು ತುಂಬಲು 330 ಕೋಟಿ ರು ಯೋಜನೆ''ಹಾಸನದ ಕೆರೆಗಳಿಗೆ ನೀರು ತುಂಬಲು 330 ಕೋಟಿ ರು ಯೋಜನೆ'

ಹೆಲಿ ಟೂರಿಸಂ (ಹೆಲಿಕಾಪ್ಟರ್‌ನಲ್ಲಿ ಹಾಸನದ ದರ್ಶನ) ಈ ಬಾರಿಯ ವಿಶೇಷವಾಗಿದ್ದು, ಅದರ ಯಶಸ್ಸಿಗೆ ಶ್ರಮಿಸಬೇಕು. ಸ್ವಚ್ಛತೆಯ ಕಡೆ ಹೆಚ್ಚಿನ ಮಹತ್ವ ಕೊಡಬೇಕು ಎಂದರು. ಹಾಸನಾಂಬೆ ದೇವಸ್ಥಾನವು ನವೆಂಬರ್ 1 ರಿಂದ 9 ರವರೆಗೆ ತೆಗೆದಿರುತ್ತದೆ.

English summary
Hassan DC Rohini Sindhuri organized special meeting regarding Hasanamba temple opening. Hasanambe temple only open for 7-9 days in a year and lakhs of devotes came to visit Hasanamba in that time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X