• search
  • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಾಸನ ಭೀಕರ ರಸ್ತೆ ಅಪಘಾತ; 4 ಸಾವು, 14 ಜನರಿಗೆ ಗಾಯ

|

ಹಾಸನ, ಫೆಬ್ರವರಿ 21; ಹಾಸನ ನಗರದ ಹೊರವಲಯದಲ್ಲಿ ಮುಂಜಾನೆ ಭೀಕರ ರಸ್ತೆ ಅಪಘಾತ ನಡೆದಿದೆ. ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, 14 ಜನರು ಗಾಯಗೊಂಡಿದ್ದಾರೆ.

ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಶಾಂತಿಗ್ರಾಮದ ಸಮೀಪದ ಕೆಂಚಟ್ಟಳ್ಳಿ ಬಳಿಯ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಈ ಅಘಫಾತ ನಡೆದಿದೆ. ಟಾಟಾ ಸುಮೋಗೆ ಹಿಂದಿನಿಂದ ಬಂದು ಕ್ವಾಲೀಸ್ ಡಿಕ್ಕಿ ಹೊಡೆದಿದೆ.

ಶ್ರೀರಂಗಪಟ್ಟಣ-ಕುಶಾಲನಗರ ನಡುವೆ ಚತುಷ್ಪಥ ರಸ್ತೆ ಶ್ರೀರಂಗಪಟ್ಟಣ-ಕುಶಾಲನಗರ ನಡುವೆ ಚತುಷ್ಪಥ ರಸ್ತೆ

ಡಿಕ್ಕಿಯ ರಭಸಕ್ಕೆ ಕ್ವಾಲೀಸ್ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಪ್ರದೀಪ್ ಕುಮಾರ್, ಚಂದ್ರಶೇಖರ್, ನವೀನ್ ಕುಮಾರ್, ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ. ಎಲ್ಲರೂ ಕೆಜಿಎಫ್ ಮೂಲದವರಾಗಿದ್ದು, ಉಡುಪಿಗೆ ಮದುವೆಗೆಂದು ಹೊರಟಿದ್ದರು.

ಬಜೆಟ್‌; ಹಾಸನ-ಬೇಲೂರು-ಚಿಕ್ಕಮಗಳೂರು ಮಾರ್ಗಕ್ಕೆ ಅನುದಾನ ಬಜೆಟ್‌; ಹಾಸನ-ಬೇಲೂರು-ಚಿಕ್ಕಮಗಳೂರು ಮಾರ್ಗಕ್ಕೆ ಅನುದಾನ

ಅಪಘಾತದ ತೀವ್ರತೆಗೆ ಟಾಟಾ ಸುಮೋ ಪಲ್ಟಿಯಾಗಿದೆ. ಅದರಲ್ಲಿದ್ದ 10 ಮಂದಿ ಗಾಯಗೊಂಡಿದ್ದಾರೆ. ರೋಡ್ ಹಂಪ್ ಬಳಿ ಟಾಟಾ ಸುಮೋ ನಿಧಾನವಾದಾಗ ಹಿಂದಿನಿಂದ ವೇಗವಾಗಿ ಬಂದ ಕ್ವಾಲೀಸ್ ಡಿಕ್ಕಿ ಹೊಡೆದಿದೆ. ಟಾಟಾ ಸುಮೋದಲ್ಲಿದ್ದವರು ಧರ್ಮಸ್ಥಳಕ್ಕೆ ಪ್ರವಾಸ ಕೈಗೊಂಡಿದ್ದರು.

 ಹಾಸನ: 200 ಕೋಟಿ ವೆಚ್ಚದಲ್ಲಿ14 ಎಕರೆಯಲ್ಲಿ ಐಟಿ ಪಾರ್ಕ್ ಸ್ಥಾಪನೆ ಹಾಸನ: 200 ಕೋಟಿ ವೆಚ್ಚದಲ್ಲಿ14 ಎಕರೆಯಲ್ಲಿ ಐಟಿ ಪಾರ್ಕ್ ಸ್ಥಾಪನೆ

ಗಾಯಗೊಂಡವರನ್ನು ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು.

English summary
Four dead and 14 injured in road accident at Bengaluru-Mangaluru road Hassan. Around 4 am Toyota Qualis vehicle rammed into Tata sumo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X