ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನದಲ್ಲಿ ಗೋಲಿಬಾರ್ ಆದರೆ ಜಿಲ್ಲಾಧಿಕಾರಿ ಹೊಣೆ ಎಂದ ರೇವಣ್ಣ

|
Google Oneindia Kannada News

Recommended Video

ಅವರ ಅಧಿಕಾರದಲ್ಲಿ 3 ಜನ ಮುಖ್ಯಮಂತ್ರಿ ಆದ್ರು, 6 ಜನ ಸಚಿವರು ಜೈಲಿಗೆ ಹೋದ್ರು..? | Oneindia Kannada

ಬೆಂಗಳೂರು, ಮೇ 8: ಹಾಸನದಲ್ಲಿ ಬರ ನಿರ್ವಹಣೆ ಕುರಿತು ಗರಂ ಆಗಿರುವ ಸಚಿವ ರೇವಣ್ಣ ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದ್ದಾರೆ.

ಹಾಸನದಲ್ಲಿ ಬುಧವಾರ ಮಾತನಾಡಿದ ಅವರು, ಬರ ನಿರ್ವಹಣೆ ಕುರಿತಂತೆ ಗೋಲಿಬಾರ್ ನಡೆದರೆ ಅಕ್ಕೆ ಜಿಲ್ಲಾಧಿಕಾರಿಯೇ ಹೊಣೆಯಾಗುತ್ತಾರೆ ಎಂದು ಗರಂ ಆಗಿಯೇ ನುಡಿದಿದ್ದಾರೆ.

17 ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ಸರ್ಕಾರದ ಒಪ್ಪಿಗೆ17 ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ಸರ್ಕಾರದ ಒಪ್ಪಿಗೆ

ಬರಗಾಲವನ್ನು ನಿಭಾಯಿಸಲು ಎಂಟು ಕೋಟಿ ರೂ ನೀಡಲಾಗಿದೆ ಆದರೆ ಒಂದೇ ಒಂದು ಪೈಸೆಯಲ್ಲೂ ಖರ್ಚು ಮಾಡಿಲ್ಲ. ಈಗ ನೋಡಿದರೆ ಹಣವೇ ಬಂದಿಲ್ಲ ಎಂದು ಹೇಳುತ್ತಿದ್ದಾರೆ ಎಂದರು.

Revanna warns dc for golibar against farmers

ಇದೇ ಸಂದರ್ಭದಲ್ಲಿ ಬಿ.ಎಸ್​.ಯಡಿಯೂರಪ್ಪ ಮತ್ತು ಜಗದೀಶ್​ ಶೆಟ್ಟರ್​ ವಿರುದ್ಧ ಹರಿಹಾಯ್ದ ರೇವಣ್ಣ, ಬರಗಾಲ ನಿಭಾಯಿಸಬೇಕು ಎನ್ನುತ್ತಾರೆ. ಮತ್ತೊಂದು ಕಡೆ ಕೆಲಸವಾಗಬಾರದು ಎಂದು ಚುನಾವಣಾ ಆಯೋಗಕ್ಕೆ ನೀತಿ ಸಂಹಿತೆ ಎಂದು ಅರ್ಜಿ ಸಲ್ಲಿಸುತ್ತಿದ್ದಾರೆ. ಬರ ನಿಭಾಯಿಸುವುದು ಹೇಗೆ ಎಂದು ಮುಖ್ಯ ಚುನಾವಣಾ ಆಯುಕ್ತರೇ ಹೇಳಬೇಕು. ಮತ್ತು ಮುಖ್ಯ ಕಾರ್ಯದರ್ಶಿ ಗಮನಹರಿಸಬೇಕು ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಮೇರಿ ಫ್ರಾನ್ಸಿಸ್, ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದೇವೆ ಅನುದಾನವೂ ಸರಿಯಾಗಿಯೇ ಬಿಡುಗಡೆಯಾಗುತ್ತಿದೆ ಎಂದಿದ್ದಾರೆ.

ಬರ : ಕರ್ನಾಟಕದ 1,112 ಹಳ್ಳಿಗೆ ಟ್ಯಾಂಕರ್ ನೀರು ಆಧಾರಬರ : ಕರ್ನಾಟಕದ 1,112 ಹಳ್ಳಿಗೆ ಟ್ಯಾಂಕರ್ ನೀರು ಆಧಾರ

ಟ್ಯಾಂಕರ್​ಗಳಿಂದಲೂ ನೀರು ಪೂರೈಸುವ ಕಾರ್ಯ ನಡೆಯತ್ತಿದೆ. ಬರ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸುತ್ತಿದ್ದು, ಬಹುಗ್ರಾಮ ಕುಡಿಯುವ ನೀರಿನ‌ ಯೋಜನೆ ಮುಕ್ತಾಯದ ಹಂತದಲ್ಲಿದೆ.

ಅರಸೀಕೆರೆಯಲ್ಲಿ ಬಾಡಿಗೆ ನೀಡಿ ಕೊಳವೆ ಬಾವಿಗಳಿಂದ ನೀರು ಖರೀದಿಸಿ ಜನತೆಗೆ ಒದಗಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

English summary
Minister HD revanna warns district collector of Hassan that if golibar happens in the district she will be responsible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X