ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತ್ರಿವಳಿ ಕೆರೆಗಳ ಸೌಂದರ್ಯಾಭಿವೃದ್ದಿಗೆ ಕ್ರಮ: ರೋಹಿಣಿ ಸಿಂಧೂರಿ

By Mahesh
|
Google Oneindia Kannada News

ಹಾಸನ, ಆಗಸ್ಟ್ 23: ನಗರದ ಸತ್ಯಮಂಗಲ, ಚನ್ನಪಟ್ಟಣ ಹಾಗೂ ಹುಣಸಿನಕೆರೆಗಳ ಅಭಿವೃದ್ಧಿ ಕುರಿತಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಲಭ್ಯವಿರುವ ಅನುದಾನ ಬಳಸಿ ಮೂರು ಕೆರೆಗಳಿಗೆ ನೀರು ತುಂಬಿಸಲು ಇರುವ ಯೊಜನೆ, ಹಣಕಾಸು ಜಲಮೂಲಗಳ ಹಾಗೂ ಮಳೆ ನೀರು ಸಂಗ್ರಹಕ್ಕಿರುವ ಅಡೆತಡೆಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಹೇಮಾವತಿ ನದಿಯಿಂದ ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ನೀರಿನ ಪೈಪ್ ಲೈನ್‍ಗೆ ಸ್ವಲ್ಪ ಹೆಚ್ಚುವರಿ ವೆಚ್ಚಬರಿಸಿ ಒಂದು ಭಾರಿ ಚನ್ನಪಟ್ಟಣ ಕೆರೆಗೆ ನೀರು ತುಂಬಿಸಬಹುದಾಗಿದೆ. ಹಾಗಾಗಿ ಆದಷ್ಟು ಶೀಘ್ರವಾಗಿ ಈ ಕಾರ್ಯ ನಡೆಯಬೇಕಿದೆ ಎಂದು ಜಿಲ್ಲಾಧಿಕಾರಿಗಳು ನೀರಾವರಿ ಇಲಾಖೆಯ ಅಭಿಯಂತರರುಗಳಿಗೆ ಸೂಚನೆ ನೀಡಿದರು.

ಹಾಸನದ ಸಂತ್ರಸ್ತರಿಗೆ ತಾತ್ಕಾಲಿಕ ವ್ಯವಸ್ಥೆ : ರೋಹಿಣಿ ಸಿಂಧೂರಿಹಾಸನದ ಸಂತ್ರಸ್ತರಿಗೆ ತಾತ್ಕಾಲಿಕ ವ್ಯವಸ್ಥೆ : ರೋಹಿಣಿ ಸಿಂಧೂರಿ

ಈಗಾಗಲೇ 36 ಕೋಟಿ ರೂಪಾಯಿ ಅನುದಾನ ಲಭ್ಯವಿದ್ದು, ಸದರಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಚನ್ನಪಟ್ಟಣ ಕೆರೆಗಳಿಗೆ ನೀರು ತುಂಬಿಸಿ ಸೌಂದರ್ಯವೃದ್ಧಿ ಮಾಡಬೇಕಿದೆ. ಚನ್ನಪಟ್ಟಣ ಕೆರೆಯ ಹೂಳು ತೆಗೆಯುವ ಕಾರ್ಯದ ಜವಾಬ್ದಾರಿಯನ್ನು ಬೃಹತ್ ನೀರಾವರಿ ಇಲಾಖೆ ವಹಿಸಿಕೊಂಡಿದೆ. ಆದಷ್ಟು ಬೇಗ ಅದನ್ನು ಪೂರ್ಣಗೊಳಿಸಿ ಹೇಮಾವತಿ ನದಿಯಿಂದ ನೀರು ತುಂಬಿಸುವ ಕೆಲಸ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

ಸತ್ಯಮಂಗಲ ಮತ್ತು ಹುಣಸಿನಕೆರೆಗಳಿಗೆ ನೀರು ತುಂಬಿಸುವ ಹಾಗೂ ಅಭಿವೃದ್ಧಿಪಡಿಸುವ ಕೆಲಸವನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುವುದು. ಆದರೆ, ಲಭ್ಯವಿರುವ ಅನುದಾನದಲ್ಲಿ ಎಲ್ಲಾ ಅಭಿವೃದ್ಧಿ ಏಕಕಾಲದಲ್ಲಿ ಸಾಧ್ಯವಿಲ್ಲದ ಕಾರಣ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.

ಕೆರೆ ಅಭಿವೃದ್ಧಿಗೆ 1 ಕೋಟಿ ರು ಬಿಡುಗಡೆ

ಕೆರೆ ಅಭಿವೃದ್ಧಿಗೆ 1 ಕೋಟಿ ರು ಬಿಡುಗಡೆ

ಹಸಿರು ಭೂಮಿ ಪ್ರತಿಷ್ಟಾನದ ಪ್ರಮುಖರಾದ ಆರ್.ಪಿ ವೆಂಕಟೇಶ್ ಮೂರ್ತಿಯವರು ಮಾತನಾಡಿ ನಗರದ ಅಂತರ್ಜಲವೃದ್ಧಿಗೆ ಚನ್ನಪಟ್ಟಣ ಕೆರೆ ಜೊತೆಗೆ ಸತ್ಯಮಂಗಲ ಹುಣಸಿನಕೆರೆಗಳು ತುಂಬಬೇಕಿದೆ. ಯಗಚಿ ಜಲಾಶಯದಿಂದ ಹುಣಸಿನಕೆರೆ ಮೂಲಕ ಸತ್ಯಮಂಗಲ ಕೆರೆಯನ್ನು ತುಂಬಿಸಬಹುದು. ಇದೇ ರೀತಿ ನಗರ ಸಭೆಯ ಜಲಮೂಲದ ಮೂಲಕ ಹುಣಸಿನಕೆರೆ ತುಂಬಿಸಬೇಕು ಎಂದರು.

ಹುಣಸಿನಕೆರೆಗೆ ಕೊಳಚೆ ನೀರು ಸೇರ್ಪಡೆ ತಡೆ ಹಾಗೂ ಇತರೆ ಅಭಿವೃದ್ಧಿಗೆ 1 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು ಸಣ್ಣ ನೀರಾವರಿ ಇಲಾಖೆ ಕಾಮಗಾರಿ ಕೈಗೊಳ್ಳಲಿದೆ ಎಂದರು.

ಮಳೆ ನೀರು ಹರಿವಿನ ಮಾರ್ಗ ಪಥ

ಮಳೆ ನೀರು ಹರಿವಿನ ಮಾರ್ಗ ಪಥ

ಚನ್ನಪಟ್ಟಣ ಕೆರೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರದೇಶದ ಜೊತೆಗೆ ಪಕ್ಕದಲ್ಲಿ ಇರುವ 160 ಎಕರೆ ಖಾಲಿಜಾಗದ ವ್ಯಪ್ತಿಯೊಳಗಿರುವ ಮತ್ತು ಕೆರೆಯಲ್ಲಿ ನೀರು ತುಂಬುವ ಸುತ್ತ ಮುತ್ತಲ ಪ್ರದೇಶವನ್ನು ಸೌಂದರ್ಯಭಿವೃದ್ಧಿಗೊಳಿಸಬೇಕು ಎಂದು ಮನವಿ ಮಾಡಿದರು.

ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರೋ. ಯೊಗೇಂದ್ರ ಅವರು ನಗರದ ಮಳೆ ನೀರು ಹರಿವಿನ ಮಾರ್ಗ ಪಥ ಸರಿಪಡಿಸುವ ಮೂಲಕ ಹೇಗೆ ಸತ್ಯಮಂಗಲ ಕೆರೆಗೆ ನೈಸರ್ಗಿಕವಾಗಿ ನೀರು ತುಂಬಿಸಲು ಸಾಧ್ಯ ಎಂಬುದನ್ನು ವಿವರಿಸಿದರು.

ಚನ್ನಪಟ್ಟಣ ಹಾಗೂ ಹುಣಸಿನಕೆರೆಗಳಿಗೆ ನೀರು

ಚನ್ನಪಟ್ಟಣ ಹಾಗೂ ಹುಣಸಿನಕೆರೆಗಳಿಗೆ ನೀರು

ನಗರ ಸಭೆ ಆಯುಕ್ತರಾದ ಬಿ.ಎ. ಪರಮೇಶ್ ಅವರು, ಹಾಲಿ ನಗರದ ನೀರು ಪೂರೈಕೆಗೆ ಅನುಷ್ಠಾನಗೊಳ್ಳುತ್ತಿರುವ ಅವೃತ ಯೋಜನೆಯಲ್ಲಿ ಸಣ್ಣ ಮಾರ್ಪಾಡು ಮಾಡುವ ಮೂಲಕ ಚನ್ನಪಟ್ಟಣ ಹಾಗೂ ಹುಣಸಿನಕೆರೆಗಳಿಗೆ ನೀರು ತುಂಬಿಸಬಹುದಾಗಿದೆ. ಹೆಚ್ಚುವರಿ ವೆಚ್ಚವನ್ನು ನಗರಸಭೆ ಅಥವಾ ಇನ್ನಾವುದಾದರು ಲಭ್ಯ ಅರ್ಥಿಕ ಮೂಲದಿಂದ ಭರಿಸಬಹುದಾಗಿದೆ ಎಂದು ಅಬಿಪ್ರಾಯ ಪಟ್ಟರು.

ನಗರದ ಅಂರ್ತಜಲ ವೃದ್ದಿಗೆ ಪ್ರಯತ್ನಿಸಲಾಗುವುದು

ನಗರದ ಅಂರ್ತಜಲ ವೃದ್ದಿಗೆ ಪ್ರಯತ್ನಿಸಲಾಗುವುದು

ಎಲ್ಲರ ಅನಿಸಿಕೆ ಆಲಿಸಿದ ಜಿಲ್ಲಾಧಿಕಾರಿಯವರು, ತ್ರಿವಳಿ ಕೆರೆಗಳ ಅಭಿವೃದ್ದಿ ನಗರದ ಜನತೆಯ ಬಹುದಿನಗಳ ಬೇಡಿಕೆ. ಈಗ 20 ಲಕ್ಷ ರೂಪಾಯಿ ಕೆರೆಗಳ ಅಭಿವೃದ್ದಿಗೆ ಹಣ ಒದಗಿಸಲಾಗಿದೆ. ಅಲ್ಲದೆ ಚನ್ನಪಟ್ಟಣ ಕೆರೆ ಸೌಂದರ್ಯಭಿವೃದ್ದಿಗೆ ಪ್ರತ್ಯೇಕ ಆವಕಾಶಗಳಿವೆ ಎಲ್ಲವನ್ನು ಬಳಸಿ ಆದಷ್ಟು ನಗರದ ಅಂರ್ತಜಲ ವೃದ್ದಿಗೆ ಪ್ರಯತ್ನಿಸಲಾಗುವುದು ಎಂದರು. ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕಾರ್ಯಪ್ರವೃತರಾಗಬೇಕು ಎಂದು ಅವರು ಹೇಳಿದರು.

ಹಂದಿನ ಕೆರೆಗೆ ನೀರು

ಹಂದಿನ ಕೆರೆಗೆ ನೀರು

ಹಂದಿನ ಕೆರೆಗೆ ನೀರು :ಯಗಚಿ ಜಲಾಶಯದ ನಾಲೆಗಳ ದುರಸ್ಥಿ ಕಾರ್ಯ ನಡೆಯುತ್ತಿದೆ ಅದು ಮುಗಿದ ಕೂಡಲೆ ಹಂದಿನ ಕೆರೆಗೆ ನೀರು ಪೂರೈಕೆಯಾಗಲಿದೆ. ಆ ಮೂಲಕ ಹಾಲುವಾಗಿಲು ಸತ್ಯಮಂಗಲ ಕೆರೆಗಳಿಗೆ ನೀರು ಪೂರೈಕೆಯಾಗಲಿದೆ. ಈ ಬಗ್ಗೆ ಯಗಚಿ ಜಲಾಶಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಹುಣಸಿನಕೆರೆಗೆ ಭೇಟಿ: ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿಯವರು ಅಧಿಕಾರಿಗಳೊಂದಿಗೆ ಇಂದು ಹುಣಸಿನಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರಸಭೆ ಆಯುಕ್ರರಾದ ಬಿ.ಎ. ಪರಮೇಶ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕೃಷ್ಣ ಮೂರ್ತಿ ಮತ್ತಿತರರು ಹಾಜರಿದ್ದರು.

English summary
Rejuvenation and beautification of Satyamangala, Hunasina and Channapatna lake is underway said DC Rohini Sindhuri after inspecting the work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X