ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏ.10ರಿಂದ ಮತದಾನ ಜಾಗೃತಿ ಮೂಡಿಸಲಿದ್ದಾರೆ ಚಂದನ್ ಶೆಟ್ಟಿ

|
Google Oneindia Kannada News

ಹಾಸನ, ಏಪ್ರಿಲ್ 03 : ಬಿಗ್‌ಬಾಸ್ ಕಾರ್ಯಕ್ರಮದ ವಿಜೇತ ಚಂದನ್ ಶೆಟ್ಟಿ ಅವರು ಏ.10ರಿಂದ ಮೂರು ದಿನಗಳ ಕಾಲ ಹಾಸನ ಜಿಲ್ಲೆಯಲ್ಲಿ ಮತದಾರರ ಜಾಗೃತಿ ಚಟುವಟಿಕೆಗಳನ್ನು ನಡೆಸಲಿದ್ದಾರೆ. ಏಪ್ರಿಲ್ 18ರಂದು ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ.

ಹಾಸನ ಲೋಕಸಭಾ ಕ್ಷೇತ್ರಕ್ಕೆ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯ ರಾಯಭಾರಿಯಾಗಿ ಚಂದನ್ ಶೆಟ್ಟಿ ನೇಮಕವಾಗಿದ್ದಾರೆ. ಹಾಸನ ನಗರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ.

ಹಾಸನ, ಮಂಡ್ಯ ಕಾಂಗ್ರೆಸ್‌ ನಾಯಕರಿಗೆ ಸಿದ್ದರಾಮಯ್ಯ ಟ್ರೀಟ್‌ಮೆಂಟ್?ಹಾಸನ, ಮಂಡ್ಯ ಕಾಂಗ್ರೆಸ್‌ ನಾಯಕರಿಗೆ ಸಿದ್ದರಾಮಯ್ಯ ಟ್ರೀಟ್‌ಮೆಂಟ್?

ಜಿಲ್ಲಾ ಪಂಚಾಯಿತಿ ಸಿಇಓ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಡಾ.ಕೆ.ಎನ್ ವಿಜಯ್ ಪ್ರಕಾಶ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಸ್ವೀಪ್ ಚಟುವಟಿಕೆಗಳ ಸಂಘಟನೆ ಕುರಿತು ಮಾಹಿತಿ ನೀಡಿದ ಅವರು, ಚಂದನ್ ಶೆಟ್ಟಿಯವರ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು.

ಹಾಸನದಲ್ಲಿ ತೆನೆ ನಾಯಕರ ವಿರುದ್ಧ ತಿರುಗಿ ಬಿದ್ದ ಕೈ ಕಾರ್ಯಕರ್ತರುಹಾಸನದಲ್ಲಿ ತೆನೆ ನಾಯಕರ ವಿರುದ್ಧ ತಿರುಗಿ ಬಿದ್ದ ಕೈ ಕಾರ್ಯಕರ್ತರು

Chandan Shetty

ಚಂದನ್‍ಶೆಟ್ಟಿ ಅವರು ತಮ್ಮ ಬಿಡುವಿಲ್ಲದ ಕಾರ್ಯಕ್ರಮದ ನಡುವೆಯೂ ಮತದಾರರ ಜಾಗೃತಿಗಾಗಿ ಮೂರು ದಿನಗಳನ್ನು ಮೀಸಲಾಗಿಟ್ಟಿದ್ದಾರೆ. ಅದಕ್ಕೆ ಅನುಗುಣವಾಗಿ ಎಲ್ಲಾ ರೀತಿಯ ಮತದಾರರ ಮೇಲೂ ಪ್ರಭಾವ ಬೀರುವಂತಹ ಕಾರ್ಯಕ್ರಮಗಳನ್ನು ಸಂಘಟಿಸಬೇಕಿದೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಾಸನ ಕ್ಷೇತ್ರದ ಚುನಾವಣಾ ಪುಟ

ಈ ಬಾರಿ ಶೇ.100 ರಷ್ಟು ಮತದಾನವಾಗಬೇಕು ಎಂಬುದು ಸ್ವೀಪ್ ಸಮಿತಿಯ ಗುರಿ. ಅದಕ್ಕೆ ಎಲ್ಲಾ ವರ್ಗದ ಜನರಲ್ಲಿ ಮತದಾನದ ಮಹತ್ವದ ಬಗ್ಗೆ ತಿಳಿಸಿ ನೈತಿಕ ಮತದಾನಕ್ಕೆ ಪ್ರೆರೆಪಿಸಬೇಕಿದೆ ಎಂದು ಕರೆ ನೀಡಿದರು.

English summary
Bigg Boss Kannada season 5 winner and Rapper Chandan Shetty to create awareness for voting in Hassan district. Chandan Shetty hails from Shanthigrama of Hassan district. He will tour district from April 10. Elections will be held on April 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X