ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲ್ವೆ ಸಾಧನೆ; ಹಾಸನದಿಂದ ಹೌರಾಕ್ಕೆ 17 ಟನ್ ಶುಂಠಿ ಸಾಗಣೆ

|
Google Oneindia Kannada News

ಹಾಸನ, ಸೆಪ್ಟೆಂಬರ್ 04: ಕೃಷಿ ಉತ್ಪನ್ನಗಳನ್ನು ಸಾಗಣೆ ಮಾಡಲು ಭಾರತೀಯ ರೈಲ್ವೆ ಕೆಲವು ದಿನಗಳ ಹಿಂದೆ 'ಕಿಸಾನ್ ರೈಲು' ಓಡಿಸಿದೆ. ಕರ್ನಾಟಕದ ಹಾಸನದಿಂದ ಹೌರಾಕ್ಕೆ ಈ ಯೋಜನೆ ಅನ್ವಯ 17 ಟನ್ ಶುಂಠಿ ಸಾಗಣೆ ಮಾಡಲಾಗಿದೆ.

Recommended Video

ಇದ್ದಕ್ಕಿದ್ದಂತೆ ಮತ್ತೆ ಆಸ್ಪತ್ರೆಗೆ ದಾಖಲಾದ DK ಶಿವಕುಮಾರ್ | Oneindia Kannada

ನೈಋತ್ಯ ರೈಲ್ವೆ 'ಕಿಸಾನ್ ರೈಲು' ಯೋಜನೆಯಡಿ 17 ಟನ್ ಕೃಷಿ ಉತ್ಪನ್ನಗಳನ್ನು ಸಾಗಿಸಬಲ್ಲ ರೆಫ್ರಿಜಿರೇಟರ್ ಬೋಗಿಯನ್ನು ಪಡೆದಿದೆ. ಇದನ್ನು ಸರಕು ಅಥವ ಎಕ್ಸ್‌ಪ್ರೆಸ್ ರೈಲಿಗೆ ಜೋಡಿಸುವ ಮೂಲಕ ಉತ್ಪನ್ನಗಳನ್ನು ಸಾಗಣೆ ಮಾಡಲಾಗುತ್ತದೆ.

ಸೆ.4ರಿಂದ ಕಾರವಾರ-ಬೆಂಗಳೂರು ರೈಲು ಸಂಚಾರ ಸೆ.4ರಿಂದ ಕಾರವಾರ-ಬೆಂಗಳೂರು ರೈಲು ಸಂಚಾರ

ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಹಾಸನದ ಎಪಿಎಂಸಿ ಜೊತೆ ಚರ್ಚೆ ಮಾಡಿ ಶುಂಠಿಯನ್ನು ಸಾಗಣೆ ಮಾಡಿದೆ. 17 ಟನ್ ಶುಂಠಿ 48 ಗಂಟೆಯಲ್ಲಿ ಹಾಸನದಿಂದ ಹೌರಾಗೆ ಸಾಗಣೆಯಾಗಿದೆ. ರಸ್ತೆ ಮಾರ್ಗದಲ್ಲಿ ಸಾಗಣೆ ಮಾಡಿದ್ದರೆ 6 ರಿಂದ 8 ದಿನ ಬೇಕಾಗುತ್ತಿತ್ತು.

15 ಗಂಟೆಯಲ್ಲಿ ಗುರಿ ತಲುಪಿದ ನೈಋತ್ಯ ರೈಲ್ವೆ ಮೊದಲ ರೋ ರೋ ರೈಲು 15 ಗಂಟೆಯಲ್ಲಿ ಗುರಿ ತಲುಪಿದ ನೈಋತ್ಯ ರೈಲ್ವೆ ಮೊದಲ ರೋ ರೋ ರೈಲು

Railway Transported 17 Tonnes Of Ginger Hassan To Howrah

ಹಳೆ ಮೈಸೂರು ಭಾಗದಲ್ಲಿ ಬೆಳೆಯುವ ಹಣ್ಣು, ತರಕಾರಿಗಳ ಸಾಗಣೆಗೆ ರಸ್ತೆ ಮಾರ್ಗವನ್ನು ಅವಲಂಬಿಸಲಾಗಿದೆ. ಆದರೆ, ರೈಲಿನ ಮೂಲಕ ಸಾಗಣೆ ಮಾಡುವುದರಿಂದ ವೆಚ್ಚವೂ ಕಡಿಮೆಯಾಗಲಿದೆ ಮತ್ತು ತಾಜಾವಾಗಿಯೂ ಸರಬರಾಜು ಆಗಲಿದೆ.

ದೇಶದಲ್ಲೇ ಮೊದಲು: ಮೈಸೂರಲ್ಲಿ ತಯಾರಾದ ಹೈಸ್ಪೀಡ್ ರೈಲು ಚಕ್ರ ದೇಶದಲ್ಲೇ ಮೊದಲು: ಮೈಸೂರಲ್ಲಿ ತಯಾರಾದ ಹೈಸ್ಪೀಡ್ ರೈಲು ಚಕ್ರ

ಮೈಸೂರು ರೈಲ್ವೆ ವಿಭಾಗ ವಿವಿಧ ಜಿಲ್ಲೆಗಳ ಎಪಿಎಂಸಿಗಳ ಜೊತೆ ಮಾತುಕತೆ ನಡೆಸಿದ್ದು, ರೆಫ್ರಿಜಿರೇಟರ್ ಬೋಗಿಯನ್ನು ಹೊಂದಿರುವ ರೈಲಿನಲ್ಲಿ ಹಣ್ಣು, ತರಕಾರಿ ಸಾಗಣೆ ಮಾಡಲು ಚರ್ಚೆ ನಡೆಸಿದೆ. ದೇಶದ ಬೇರೆ ಬೇರೆ ನಗರಗಳಿಗೆ ಸಾಗಣೆ ಮಾಡಬಹುದಾಗಿದೆ.

Railway Transported 17 Tonnes Of Ginger Hassan To Howrah

ರೈತರು ಈ ರೆಫ್ರಿಜಿರೇಟರ್ ಬೋಗಿಯ ಉಪಯೋಗವನ್ನು ಪಡೆದುಕೊಳ್ಳಲು ಎಪಿಎಂಸಿಗಳು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದೆ. ಕಡಿಮೆ ಅವಧಿಯಲ್ಲಿ ತಾಜಾ ಉತ್ಪನ್ನಗಳನ್ನು ಸಾಗಿಸಲು ಇದು ಸಹಾಯಕವಾಗಿದೆ.

English summary
South Western railway transported 17 tonnes of Ginger from Karnataka's Hassan to Howrah in a refrigerated parcel van. It is a new way to transport agricultural goods.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X