ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇ.ಡಿ. ವಿಚಾರಣೆ ನೆಪದಲ್ಲಿ ರಾಹುಲ್ ಗಾಂಧಿಗೆ ಕಿರುಕುಳ: ಎಚ್‌.ಡಿ ಕುಮಾರಸ್ವಾಮಿ ಕಿಡಿ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಜೂನ್ 22: ಇ.ಡಿ ವಿಚಾರಣೆಯ ಹೆಸರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಹುಲ್ ಗಾಂಧಿ ವಿಚಾರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಮಾತನಾಡಲ್ಲ. ಆದರೆ ನಾನು ಹೇಳುವುದೇನೆಂದರೆ, " ಇ.ಡಿ. ಸಂಸ್ಥೆಗಳು ಏಕೆ ರಾಹುಲ್‌ ಗಾಂಧಿಯನ್ನು ಏಕೆ ಸತತ 5 ದಿನಗಳಿಂದ ವಿಚಾರಣೆಗೆ ಕರೆಯುತ್ತಿದ್ದಾರೆ. ಕಂಪನಿಗಳು ಯಾವಾಗ ಆರಂಭವಾಗಿದೆ, ಹಣ ಎಲ್ಲಿಂದ ಬಂತು ಎನ್ನುವ ಸಂಪೂರ್ಣವಾಗಿ ದಾಖಲೆಗಳು ಅವರ ಬಳಿಯೇ ಇವೆ. ಆದರೂ ಸತತ ದಿನಗಳಿಂದ ಕಚೇರಿಯಲ್ಲಿ ಕೂರಿಸಿಕೊಂಡು 10 ಗಂಟೆಗಳ ಕಾಲ ಅವರನ್ನು ಏನು ವಿಚಾರಣೆ ಮಾಡುತ್ತಿದ್ದೀರಾ,? ಇಲ್ಲಿಯವರೆಗೆ ವಿಚಾರಣೆಯಿಂದ ಎಷ್ಟು ವಿಷಯಗಳನ್ನು ಸಂಗ್ರಹ ಮಾಡಿದ್ದೀರಿ? ಮಾಹಿತಿಗಾಗಿ ಅರ್ಧ ಗಂಟೆ ಅಥವಾ ಒಂದು ಗಂಟೆ ನಡೆಸಬೇಕಾದ ವಿಚಾರಣೆಯನ್ನು ಇಷ್ಟು ದಿನ ತಳ್ಳುತ್ತೀದ್ದೀರಿ ಎಂದು ಕಿಡಿಕಾರಿದ್ದಾರೆ.

ವಿಚಾರಣೆ ಮುಂದೂಡುವಂತೆ ಇಡಿಗೆ ಸೋನಿಯಾ ಗಾಂಧಿ ಮನವಿವಿಚಾರಣೆ ಮುಂದೂಡುವಂತೆ ಇಡಿಗೆ ಸೋನಿಯಾ ಗಾಂಧಿ ಮನವಿ

ಈ ವಿಚಾರಣೆ ನೆಪದಲ್ಲಿ ದೇಶದ ಜನತೆಯ ಮನದಲ್ಲಿ ರಾಹುಲ್ ಗಾಂಧಿ ಬಗ್ಗೆ ಅನುಮಾನ ಮೂಡಿಸುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಅವರು ಏನಾದರೂ ತಪ್ಪು ಮಾಡಿದ್ದರೆ, ಕ್ರಮ ತೆಗೆದುಕೊಳ್ಳಿ , ಅದನ್ನು ಬಿಟ್ಟು ಪ್ರತಿದಿನ ಹೀಗೆ ಕಿರುಕುಳ ನೀಡುತ್ತಿರುವುದು ಸರಿಯಲ್ಲ ಎಂದು ಅಸಮಧಾನ ಹೊರಹಾಕಿದ್ದಾರೆ.

 40 ಪರ್ಸಂಟ್‌ ಸರಕಾರ

40 ಪರ್ಸಂಟ್‌ ಸರಕಾರ

ಸುಬ್ರಹ್ಮಣ್ಯ ಸ್ವಾಮಿ ಅರ್ಜಿ ಕೊಟ್ಟ ಕೂಡಲೇ ರಾಹುಲ್‌ ಗಾಂಧಿ ವಿಚಾರಣೆ ಮಾಡುತ್ತಿದ್ದೀರಶ. ಆದರೆ ಗುತ್ತಿಗೆದಾರ ಸಂಘದ ಕೆಂಪಣ್ಣ ಕರ್ನಾಟಕದಲ್ಲಿ 40% ಸರಕಾರ ನಡೆಯುತ್ತಿದೆ ಎಂದು ಪ್ರಧಾನ ಮಂತ್ರಿಗೆ ಜ ಪತ್ರ ಬರೆದರಲ್ಲ, ಅದರ ಬಗ್ಗೆ ಯಾಕೆ ತನಿಖೆ ಮಾಡಿಲ್ಲ. ಪಿಎಂ ಕಚೇರಿಇದಕ್ಕೆ ಏಕೆ ಉತ್ತರ ನೀಡಲಿಲ್ಲ, ಸುಬ್ರಹ್ಮಣ್ಯಸ್ವಾಮಿ ಅರ್ಜಿ ಕೊಟ್ಟ ಕೂಡಲೇ ತನಿಖೆ ನಡೆಸುತ್ತಾರೆ, ಕೆಂಪಣ್ಣನ ಅರ್ಜಿಗೆ ಏಕೆ ಮುಚ್ಚಿಕೊಂಡಿದ್ದೀರಾ? ಇಡೀ ರಾಜ್ಯದ ಜನ ಸರಕಾರದ ಪರ್ಸೆಂಟೇಜ್ ಬಗ್ಗೆ ಜನ ಮಾತನಾಡುತ್ತಿದ್ದಾರೆ, ಆದರೆ ಇಲ್ಲಿಗೆ ಬಂದಿದ್ದ ಪ್ರಧಾನ ಮಂತ್ರಿ ಇದರ ಬಗ್ಗೆ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನೆಸಿದರು.

 ಅಗ್ನಿಪಥ ಜಾರಿ ಯಾವ ಉದ್ದೇಶಕ್ಕಾಗಿ?

ಅಗ್ನಿಪಥ ಜಾರಿ ಯಾವ ಉದ್ದೇಶಕ್ಕಾಗಿ?

ಅಗ್ನಿಪಥ್ ಯೋಜನೆ ಬಗ್ಗೆ ಮಾತನಾಡಿ ಹಿಂದೆ ದೇಶದಲ್ಲಿದ್ದ ವ್ಯವಸ್ಥೆಯಲ್ಲಿ ಇಲ್ಲಿಯವರೆಗೂ ದೇಶದ ರಕ್ಷಣೆ ಮಾಡುತ್ತಿರಲಿಲ್ವಾ? ಅಗ್ನಿಪಥ್ ಯೋಜನೆ ಯಾರು ತರಲು ಇವರಿಗೆ ಹೇಳಿದ್ದಾರೆ, ಯಾವ ಉದ್ದೇಶದಿಂದ ತರಲಾಗುತ್ತಿದೆ. ಯಾರನ್ನು ಕೇಳಿ ಜಾರಿ ಮಾಡಲಾಗುತ್ತಿದೆ. ರಕ್ಷಣೆಗೆ ಸಂಬಂಧಿಸಿದ ಸಂಸದೀಯ ಸಮಿತಿ ಶಿಫಾರಸ್ಸು ಮಾಡಿತ್ತಾ? ಅಥವಾ ಸೇನಾ ಅಧಿಕಾರಿಗಳು ಏನಾದರೂ ಈ ಯೋಜನೆ ಜಾರಿಗೆ ತನ್ನಿ ಎಂದು ಶಿಫಾರಸ್ಸು ಮಾಡಿದ್ದಾರೆಯೇ? ಈ ಕುರಿತು ದೇಶದ ಜನತೆಗೆ ಸರಕಾರ ಸಮರ್ಪಕ ಉತ್ತರ ನೀಡಬೇಕಿದೆ ಎಂದು ಒತ್ತಾಯಿಸಿದರು.

ಅಗ್ನಿಪಥ್ ಮೂಲಕ ಬಿಜೆಪಿಗೆ ಸಶಸ್ತ್ರ ಕಾರ್ಯಕರ್ತರ ಪಡೆ: ಮಮತಾ ಬ್ಯಾನರ್ಜಿಅಗ್ನಿಪಥ್ ಮೂಲಕ ಬಿಜೆಪಿಗೆ ಸಶಸ್ತ್ರ ಕಾರ್ಯಕರ್ತರ ಪಡೆ: ಮಮತಾ ಬ್ಯಾನರ್ಜಿ

 ಕ್ಷೌರಿಕನಾಗಲು ಅಗ್ನಿಪಥ್ ಸರ್ಟಿಫಿಕೇಟ್ ಬೇಕೆ?

ಕ್ಷೌರಿಕನಾಗಲು ಅಗ್ನಿಪಥ್ ಸರ್ಟಿಫಿಕೇಟ್ ಬೇಕೆ?

ಈಗ ಯಾವ ಉದ್ದೇಶದಿಂದ ಏಕಾಏಕಿ ಹತ್ತು ಲಕ್ಷ ಜನ ಯುವಕರಿಗೆ ಕೆಲಸ ಕೊಡುತ್ತೀವಿ ಎಂದು ಹೇಳುತ್ತಿದ್ದೀರಾ? ಆದರೆ ನಿಮ್ಮ ಬಿಜೆಪಿ ನಾಯಕರೇ ಯುವಕರನ್ನು ಕ್ಷೌರದ ಶಾಪ್ ತೆರೆಯಲು ತರಬೇತಿ ನೀಡಲು ಮಿಲಿಟರಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಆದರೆ ಕ್ಷೌರದ ಅಂಗಡಿ ಇಟ್ಟುಕೊಳ್ಳಲು ಅಲ್ಲಿಗೆ ಕರೆದುಕೊಂಡು ಹೋಗಿ ಟ್ರೈನಿಂಗ್ ಕೊಡಬೇಕಾ?, ಮೊನ್ನೆ ಬಿಜೆಪಿಯವರೇ ಹೇಳಿದ್ದಾರೆ. ಇದಕ್ಕೆ ಅಗ್ನಿವೀರರ ಸರ್ಟಿಫಿಕೇಟ್ ಬೇಕಾ? ಎಂದು ಪ್ರಶ್ನಿಸಿದ್ದಾರೆ.
ಈ ಅಗ್ನಿಪಥ್ ಎಂಬುದು ಆರ್‌ಎಸ್‌ಎಸ್‌ ಯೋಜನೆ, ಅಗ್ನಿಪಥ ಎಂಬ ಹೆಸರಿನಲ್ಲಿ ಕೆಲಸ ಮಾಡುವವರಿಂದ ಸಂಘದ ಚಟುವಟಿಕೆಗಳನ್ನು ಸೇನೆಯೊಳಗೆ ಮತ್ತು ದೇಶದೆಲ್ಲಡೆ ಪಸರಿಸಲು ಸರಕಾರ ಹೊರಟಿದೆ. ನನ್ನ ಅಭಿಪ್ರಾಯದಲ್ಲಿ ಇದು ಹಿಂದೆ ಹಿಟ್ಲರ್ ಕಾಲದಲ್ಲಿ ಇದ್ದಂತಹ ನಾಝಿ ಪಡೆಯನ್ನು ಕಟ್ಟಿ, ಆ ವಾತಾವರಣವನ್ನು ನಮ್ಮ ದೇಶದಲ್ಲಿ ತರುವಂತಹ ಒಂದು ಪ್ರಾಯೋಗಿಕವಾದ ಕಾರ್ಯಕ್ರಮ ಎಂದು ತಿಳಿಸಿದ್ದಾರೆ.

 ಮನು ಸಂಸ್ಕೃತಿ ನಿರ್ಮಾಣ

ಮನು ಸಂಸ್ಕೃತಿ ನಿರ್ಮಾಣ

ಬಸವರಾಜ ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ, ಅದರ ಕೀ ಇರೋ ಬೇರೆ ಕಡೆ. ಪಾಪ ಅವರೇನು ಮಾಡುತ್ತಾರೆ? ಅವರ ಬಗ್ಗೆ ನನಗೆ ಕನಿಕರ ಇದೆ. ಸ್ವತಂತ್ರವಾಗಿ ಅವರಿಗೆ ಯಾವುದೇ ಅಧಿಕಾರ ನಡೆಸಲು ಸಾಧ್ಯವಾಗುತ್ತಿಲ್ಲ. ಎಲ್ಲವೂ ಕೂಡ ಕೇಶವ ಕೃಪಾದಿಂದ ಬರಬೇಕು, ಅಲ್ಲಿಂದ ಬರೋದೆ ಅಂತಿಮ ನಿರ್ಧಾರ. ಹಂತ ಹಂತವಾಗಿ ದೇಶದಲ್ಲಿ ಕೃತಿ ವಾತಾವರಣ ನಿರ್ಮಿಸಲು ಹೊರಟಿದ್ದಾರೆ, ಈ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು. ವಿರೋಧ ಪಕ್ಷಗಳು ಜನರಿಗೆ ಇದರ ಬಗ್ಗೆ ಜಾಗೃತಿ ಮೂಡಿಸಬೇಕು.

English summary
Directorate of Enforcement team harassing congress leader alleged national herald money laundering case, former CM kumaraswamy told in Hassan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X