ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾಮಸ್ತಕಾಭಿಷೇಕ, ಶ್ರವಣಬೆಳಗೊಳದ ಬಗ್ಗೆ ವಿಶೇಷ ರಸಪ್ರಶ್ನೆ

By Prasad
|
Google Oneindia Kannada News

ಶ್ರವಣಬೆಳಗೊಳ, ಸೆಪ್ಟೆಂಬರ್ 07 : ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿರುವ ಬಾಹುಬಲಿಯ ವಿಗ್ರಹದ ನಿಖರವಾದ ಎತ್ತರ ಎಷ್ಟು? ಆದಿ ಪುರಾಣವನ್ನು ರಚಿಸಿದವರಾರು? ಬಾಹುಬಲಿಯ ಮೂರ್ತಿಯನ್ನು ಯಾವ ಶಿಲೆಯಲ್ಲಿ ಕೆತ್ತಲಾಗಿದೆ?

ಶ್ರವಣಬೆಳಗೊಳ, ಬಾಹುಬಲಿ, ಜೈನ ಧರ್ಮ, ಆದಿ ಪುರಾಣ ಇತ್ಯಾದಿಗಳ ಬಗ್ಗೆ ನಿಮಗೆಷ್ಟು ಗೊತ್ತು? 2018ರ ಫೆಬ್ರವರಿಯಲ್ಲಿ ಮಹಾಮಸ್ತಕಾಭಿಷೇಕ ಜರುಗುತ್ತಿರುವ ಹೊತ್ತಿನಲ್ಲಿ ಇಂತಹ ಆಸಕ್ತಿ ಕೆರಳಿಸುವಂಥ ಪ್ರಶ್ನೆಗಳಿರುವ ರಸಪ್ರಶ್ನೆ ಕಾರ್ಯಕ್ರಮವನ್ನು ಶ್ರವಣಬೆಳಗೊಳದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.

Quiz competition on Mahamastakabhisheka, Shravanabelagola

ಮೂರ್ತಿ ನಿರ್ಮಾಣವಾದ 10ನೇ ಶತಮಾನದಿಂದಲೂ 58.8 ಅಡಿ ಎತ್ತರದ ಬಾಹುಬಲಿಗೆ ಕಾಲಕಾಲಕ್ಕೆ ಮಹಾಮಸ್ತಕಾಭಿಷೇಕಗಳು ನೆರವೇರುತ್ತಾ ಬಂದಿದೆ. ಮಹಾಮಸ್ತಕಾಭಿಷೇಕದೊಡನೆ ಅಂದಂದಿನ ಜನಜೀವನ, ವ್ಯವಸ್ಥೆ, ಅಭಿವೃದ್ಧಿಗಳನ್ನು ಗುರುತಿಸಬಹುದು ಎಂದು ಮಹಾಮಸ್ತಕಾಭಿಷೇಕ ಮಹೋತ್ಸವದ ಆಹಾರ ಉಪಸಮಿತಿ ಅಧ್ಯಕ್ಷ ವಿನೋದ್‌ಕುಮಾರ್ ಬಾಕ್ಲಿವಾಲ್ ಹೇಳಿದರು.

ಶ್ರವಣಬೆಳಗೊಳ : ಮಸ್ತಕಾಭಿಷೇಕ ಪ್ರಚಾರಕ್ಕೆ ತಂತ್ರಜ್ಞಾನಗಳ ಬಳಕೆಶ್ರವಣಬೆಳಗೊಳ : ಮಸ್ತಕಾಭಿಷೇಕ ಪ್ರಚಾರಕ್ಕೆ ತಂತ್ರಜ್ಞಾನಗಳ ಬಳಕೆ

ಅವರು ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ ಕ್ಷೇತ್ರದ ಪೀಠಾಧಿಪತಿಗಳಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ದಶಲಕ್ಷಣ ಪರ್ವದ ಅಂಗವಾಗಿ ಮಹಾಮಸ್ತಕಾಭಿಷೇಕ ಮತ್ತು ಶ್ರವಣಬೆಳಗೊಳದ ಬಗ್ಗೆ ನಡೆದ ವಿಶೇಷ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Quiz competition on Mahamastakabhisheka, Shravanabelagola

ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಜನರಲ್ಲಿ ಸೃಜನಶೀಲತೆ ಉಂಟಾಗಿ ಇತಿಹಾಸ, ಸಾಹಿತ್ಯ, ಧಾರ್ಮಿಕ, ಶಿಲ್ಪಕಲೆ ಮುಂತಾದ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಬಹುದು, ಪ್ರಸಕ್ತ ವಿದ್ಯಮಾನಗಳ ಬಗ್ಗೆ ತಿಳಿದುಕೊಂಡು ವ್ಯಕ್ತಿತ್ವ ವಿಕಾಸವಾಗಲು ಸಹಾಯವಾಗುತ್ತದೆ ಎಂದು ಹೇಳಿದರು.

ರಸಪ್ರಶ್ನೆ ಕಾರ್ಯಕ್ರಮವನ್ನು ಗೊಮ್ಮಟವಾಣಿ ಸಂಪಾದಕರಾದ ಎಸ್.ಎನ್.ಅಶೋಕ್ ಕುಮಾರ್ ನಡೆಸಿಕೊಟ್ಟರು. ಚಂದ್ರನಾಥ್ (ಪ್ರಥಮ), ಪವನ್ (ದ್ವೀತಿಯ), ನಿರ್ಮಲಮ್ಮ (ತೃತೀಯ) ಬಹುಮಾನವನ್ನು ಪಡೆದುಕೊಂಡರು. ಬಹುಮಾನದ ಪ್ರಾಯೋಜಕತ್ವವನ್ನು ಕಲ್ಕತ್ತಾದ ಕಸ್ತೂರಿ ಬಾಯಿ ಅವರು ವಹಿಸಿಕೊಂಡಿದ್ದರು.

ಶ್ರವಣಬೆಳಗೊಳ : ಮಸ್ತಕಾಭಿಷೇಕದಲ್ಲಿ ಪ್ರವಾಸಿಗರಿಗೆ ಎಳನೀರು ಭಾಗ್ಯಶ್ರವಣಬೆಳಗೊಳ : ಮಸ್ತಕಾಭಿಷೇಕದಲ್ಲಿ ಪ್ರವಾಸಿಗರಿಗೆ ಎಳನೀರು ಭಾಗ್ಯ

ದಶಲಕ್ಷಣ ಪರ್ವದ 10 ದಿನಗಳಲ್ಲೂ ಸಹ ಶ್ರವಣಗೆಳಗೊಳದ ಇತಿಹಾಸ, ಧರ್ಮ, ಸಾಹಿತ್ಯ, ಶಿಲ್ಪಕಲೆಯ ಬಗ್ಗೆ ಧಾರ್ಮಿಕ ಪ್ರಶ್ನೋತ್ತರ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ತೀರ್ಥಕ್ಷೇತ್ರ ಕಮಿಟಿ ಕರ್ನಾಟಕ ವಲಯದ ಅಧ್ಯಕ್ಷ ಅಶೋಕ್ ಸೇಠಿ, ಖಂಡೇಲ್‌ವಾಲ್ ಸಮಾಜದ ಅಧ್ಯಕ್ಷ ನಿಹಾಲ್‌ಚಂದ್ ಉಪಸ್ಥಿತರಿದ್ದರು. ನಂತರ ಸಾಂಗ್ಲಿಯ ಕುಬೇರ್ ಚೌಗುಲೆಯವರ ಸಂಗೀತ ಕಾರ್ಯಕ್ರಮದೊಂದಿಗೆ ಆರತಿ ಕಾರ್ಯಕ್ರಮ ನಡೆಯಿತು.

ನಮ್ಮದೂ ಒಂದು ಪ್ರಶ್ನೆ : ಕರ್ನಾಟಕದಲ್ಲಿ ಬಾಹುಬಲಿಯ ಎಷ್ಟು ಏಕಶಿಲಾ ಮೂರ್ತಿಗಳಿವೆ ಮತ್ತು ಎಲ್ಲೆಲ್ಲಿವೆ?

English summary
Quiz competition on Mahamastakabhisheka, Shravanabelagola by organizing committee. Mahamastakabhisheka will be held in February 2018 under the guidance of Charukeerthi Bhattaraka swamiji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X