ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನ ವಿರುದ್ಧ ಚುನಾವಣೆಗೆ ನಿಲ್ಲಿ; ರೇವಣ್ಣ ಕುಟುಂಬಕ್ಕೆ ಪ್ರೀತಂ ಗೌಡ ಸವಾಲು!

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಜನವರಿ 30; "ರೇವಣ್ಣ ಇಲ್ಲಾ ಭವಾನಿ ಅಕ್ಕ ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲಿ, ಕಾಂಗ್ರೆಸ್ ಸೇರ್ಪಡೆ ಗೆ ನಾನು ಅರ್ಜಿ ಹಾಕಿದ್ದರೆ ಸಂಬಳವಿಲ್ಲದೆ ವಾಚ್ ಮೆನ್ ಕೆಲಸ ಮಾಡುತ್ತೇನೆ" ಎಂದು ಎಚ್. ಡಿ. ರೇವಣ್ಣ ಕುಟುಂಬಕ್ಕೆ ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ಸವಾಲು ಹಾಕಿದರು.

"ಮುಂದಿನ ಚುನಾವಣೆಯಲ್ಲಿ ‌ಹಾಸನ ವಿಧಾನಸಭಾ ಕ್ಷೇತ್ರದಿಂದ ರೇವಣ್ಣ ಇಲ್ಲಾ ಭವಾನಿ ಅಕ್ಕ ನನ್ನ ವಿರುದ್ಧ ಸ್ಪರ್ಧಿಸಲಿ. ಈಗಲೇ ಯಾರೆಂದು ಹೆಸರು ಘೋಷಣೆ ಮಾಡಲಿ" ಎಂದು ಮಾಜಿ ಸಚಿವ ಎಚ್. ಡಿ. ರೇವಣ್ಣ ಕುಟುಂಬಕ್ಕೆ ಪಂಥಾಹ್ವಾನ ನೀಡಿದ್ದಾರೆ.

ಬೀದಿ ನಾಯಿಗಳ ಹಾವಳಿ; ರೇವಣ್ಣ ಕೊಟ್ಟ ಸಲಹೆ ನೋಡಿ! ಬೀದಿ ನಾಯಿಗಳ ಹಾವಳಿ; ರೇವಣ್ಣ ಕೊಟ್ಟ ಸಲಹೆ ನೋಡಿ!

ಹಾಸನ ಕ್ಷೇತ್ರದಿಂದ ರೇವಣ್ಣ ಕುಟುಂಬಕ್ಕೆ ಟಿಕೆಟ್ ಎಂಬ ವಿಚಾರದ ಚರ್ಚೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಹಾಸನ ಜನರಿಗೆ ಪ್ರೀತಂ ಗೌಡ್ರ ಯೋಚನೆ, ಯೋಜನೆ ಒಪ್ಪಿದೆಯೋ. ರೇವಣ್ಣ ಅವರ ಅಭಿವೃದ್ಧಿ ಶೈಲಿ ಇಷ್ಟವಾಗಿಯೇ ಎಂಬ ಬಗ್ಗೆ ಒಂದು ಚರ್ಚೆ ನಡೆಯಲಿ. ನೀವೇ ಹಾಸನದಿಂದ ಸ್ಪರ್ಧೆ ಮಾಡಿ, ಪ್ರೀತಂ ಗೌಡ ಗೆಲ್ಲಬೇಕೋ , ರೇವಣ್ಣ ಗೆಲ್ಲಬೇಕೋ ತೀರ್ಮಾನವಾಗಲಿ" ಎಂದರು.

ಕೊನೆ ಉಸಿರಿರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ: ಶಾಸಕ ಪ್ರೀತಂಕೊನೆ ಉಸಿರಿರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ: ಶಾಸಕ ಪ್ರೀತಂ

preetam gowda

"ಪ್ರೀತಂ ಗೌಡಗೆ ಇವರ ಒಬ್ಬ ಮಗ ಎಂಎಲ್‌ಸಿ, ಒಬ್ಬ ಮಗ ಎಂಪಿ, ಇವರು ಹೊಳೆನರಸೀಪುರದ ಶಾಸಕರು, ಅವರ ಕುಟುಂಬದಿಂದಲೇ ಹಾಸನದಿಂದ ಸ್ಪರ್ಧೆ ಮಾಡ್ತಾರೆ ಅನ್ನೋ ಮಾಹಿತಿ ಇದೆ. ನಾನು ಖಂಡಿತವಾಗಿ ಸ್ವಾಗತ ಮಾಡ್ತೀನಿ. ರೇವಣ್ಣ ಬಂದ್ರೂ ಸಂತೋಷ, ಭವಾನಿ ಅಕ್ಕ ಬಂದ್ರೂ ಸಂತೋಷ. ಭವಾನಿ ಅಕ್ಕ ಅಭ್ಯರ್ಥಿ ಅನ್ನುವುದಾದರೆ ನಾಳೆಯೇ ಘೋಷಣೆ ಮಾಡಲಿ, ನಾನು ಚುನಾವಣೆ ಎದುರಿಸಲು ಸಿದ್ದನಿದ್ದೇನೆ" ಎಂದು ಆಹ್ವಾನ ನೀಡಿದರು.

ಚುನಾವಣೆ ಇನ್ನೂ ಒಂದೂವರೆ ವರ್ಷ ಇರುವಾಗಲೇ ಹಾಸನದಲ್ಲಿ ಚುನಾವಣೆಯ ಕಾವು ಏರುತ್ತಿದೆ. ಇತ್ತ ಹಾಸನ ಕ್ಷೇತ್ರದಿಂದ ಮಾಜಿ ಸಚಿವ ಎಚ್. ಡಿ. ರೇವಣ್ಣ ಅಥವಾ ಭವಾನಿ ರೇವಣ್ಣ ಅಥವಾ ಅವರ ಮಕ್ಕಳಲ್ಲಿ ಯಾರಾದರೂ ನಿಲ್ಲುತ್ತಾರೆ ಅನ್ನೋ ಚರ್ಚೆ ಆಗುತ್ತಿರುವುದಂತೂ ಸುಳ್ಳಲ್ಲ. ಪ್ರೀತಂಗೌಡ ಆಹ್ವಾನಕ್ಕೆ ಮಾಜಿ ಸಚಿವ ರೇವಣ್ಣ ಯಾವ ಪತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.

ಹಾಸನ ರಾಜಕೀಯ; ಎ. ಮಂಜುಗೆ ಪ್ರೀತಂ ಗೌಡ ಟಾಂಗ್!ಹಾಸನ ರಾಜಕೀಯ; ಎ. ಮಂಜುಗೆ ಪ್ರೀತಂ ಗೌಡ ಟಾಂಗ್!

ಬಿಜೆಪಿ ಬಿಟ್ಟು ಹೋಗುವೆ; ಕಾಂಗ್ರೆಸ್ ಸೇರ್ಪಡೆಯಾಗಲು ಪ್ರೀತಂ ಗೌಡ ಹೆಸರಿನಿಂದ ಕೆಪಿಸಿಸಿಗೆ ಅರ್ಜಿ ಬಂದಿದೆ ಎಂಬ ಕಾಂಗ್ರೆಸ್ ಮುಖಂಡ ಎಚ್. ಕೆ. ಮಹೇಶ್ ಹೇಳಿಕೆಗೆ ಪ್ರತಿಕ್ರಿಯಿಸದ ಪ್ರೀತಂ ಗೌಡ, "ನಾನು ಬಿಜೆಪಿ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗುತ್ತೀನಿ ಅಂಥಾ ಯೋಚನೆ ಮಾಡಿದರೆ ಅಂದೇ ನನ್ನ ರಾಜಕಾರಣದ ಅಂತಿಮ ದಿನ ಆಗಿರುತ್ತದೆ. ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗಲ್ಲ ಅಂಥಾ ಮಹೇಶ್ ಹೇಳಲಿ ನಾನು ಅವರಿಗೆ ಕ್ಷಮೆ ಕೇಳುತ್ತೇನೆ, ಜೆಡಿಎಸ್ ಪಕ್ಷದ ಏಜೆಂಟ್ ಆಗಿ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರೆ ಹೇಳುತ್ತಿದ್ದಾರೆ" ಎಂದರು.

"ನಾನು ಕಾಂಗ್ರೆಸ್‌ಗೆ ಅರ್ಜಿ ಹಾಕಿರುವುದನ್ನು ತೋರಿಸಿದರೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಆಗುತ್ತೇನೆ. ನಾನು ಪ್ರಮಾಣಿಕವಾಗಿ ಅವರ ಮನೆಯಲ್ಲಿ, ಅವರು ಕೆಲಸ ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ, ಮಹೇಶ್ ಅವರು ಕೆಲಸ ಕೊಡದಿದ್ದರು ಅವರ ಮನೆಯಲ್ಲಿ ವಾಚ್‌ಮೆನ್ ಆಗಿ ಕೆಲಸ ಮಾಡುತ್ತೇನೆ" ಎಂದು ಹೇಳಿದರು.

"ಹೊಳೆನರಸೀಪುರದವರು ನೀಡುವ ಸಲಹೆ ಪ್ರಕಾರ ಕಾಂಗ್ರೆಸ್‌ನಲ್ಲಿರುವ ಒಬ್ಬ ಜೆಡಿಎಸ್ ಏಜೆಂಟ್‌ನ ರೀತಿ ನಡೆದುಕೊಳ್ಳುತ್ತಾರೆ. ಅವರ ಬಗ್ಗೆ ಹೆಚ್ಚು ಮಾತನಾಡಲು ಹೋಗಲ್ಲ. ಕಾಂಗ್ರೆಸ್ ಮುಖಂಡರು ಜೆಡಿಎಸ್‌ಗೆ ಅರ್ಜಿ ಹಾಕಿಕೊಂಡಿರಬಹುದು" ಎಂದು ಅನುಮಾನ ವ್ಯಕ್ತಪಡಿಸಿದ್ದರು.

"ನಾನು ಯಾವ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಯಾಗದೆ ಸಾಮಾನ್ಯ ಜನರ ವಿಶ್ವಾಸಗಳಿಸಿ ಶಾಸಕನಾದೆ, ಕೆಲವರು 25 ವರ್ಷದಿಂದ ಕಂಬ ಸುತ್ತುತ್ತಲೇ ಇದ್ದಾರೆ. ಈ ಥರಾ ಸುಳ್ಳು ಹೇಳುತ್ತಾರೆ ಅಂಥಾ ಅವರಿಗೆ ನಗರಸಭೆ ಸದಸ್ಯನಿಂದ ಮುಂದೆ ಹೋಗಲ್ಲ ಜನ ಬಿಟ್ಟಿಲ್ಲ"' ಎಂದು ವ್ಯಂಗ್ಯ ವಾಡಿದರು.

English summary
Hassan BJP MLA Preetham J. Gowda challenged H. D. Revanna family to contest against him in 2023 Karnataka assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X