ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ: ದೇವಸ್ಥಾನಗಳಲ್ಲಿ ಪೂಜೆ

|
Google Oneindia Kannada News

Recommended Video

ಇಂದು ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ.

ಹಾಸನ, ಮಾರ್ಚ್ 22: ಲೋಕಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸಚಿವ ಎಚ್ ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಹಾಸನ ಜಿಲ್ಲಾಧಿಕಾರಿ ಕಚೇರಿಗೆ ಬೆಳಿಗ್ಗೆ ಬೆಂಬಲಿಗರೊಂದಿಗೆ ತೆರಳಿ ಅವರು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಹಾಸನದಲ್ಲಿ ದೇವೇಗೌಡರ ಕುಟುಂಬಕ್ಕೆ ಎದುರಾಗಿ ಸ್ಪೀಡ್ ಬ್ರೇಕರ್ ಮಂಜು ಹಾಸನದಲ್ಲಿ ದೇವೇಗೌಡರ ಕುಟುಂಬಕ್ಕೆ ಎದುರಾಗಿ ಸ್ಪೀಡ್ ಬ್ರೇಕರ್ ಮಂಜು

ಅದಕ್ಕೂ ಮೊದಲು ಅವರು ದೇವರುಗಳ ಮೊರೆ ಹೋದರು. ತಂದೆ ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣ ಬೆಳಿಗ್ಗೆ 5.30ರಿಂದಲೇ ಹೊಳೆ ನರಸೀಪುರದ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಲಕ್ಷ್ಮಿ ನರಸಿಂಹ ದೇವರ ಸಮ್ಮುಖದಲ್ಲಿ ನಾಮಪತ್ರ ಇರಿಸಿ ಅದಕ್ಕೆ ಅವರು ಪೂಜೆ ಸಲ್ಲಿಸಿದರು.

Prajwal Revanna will files nomination in hassan on friday performed pooja with his parents

ಹರದನಹಳ್ಳಿ ಕುಲದೇವರು ದೇವೇಶ್ವರ ಮತ್ತು ಮಾವಿನಕೆರೆಯ ರಂಗನಾಥಸ್ವಾಮಿ ದೇವಸ್ಥಾನಗಳಿಗೂ ತೆರಳಿ ಅವರು ಪೂಜೆ ಸಲ್ಲಿಸಲಿದ್ದಾರೆ.

ಚುನಾವಣೆಗೆ ದೇವೇಗೌಡರ ಸ್ಪರ್ಧೆ : ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು? ಚುನಾವಣೆಗೆ ದೇವೇಗೌಡರ ಸ್ಪರ್ಧೆ : ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?

ನಂತರ ಹಾಸನದ ಹೇಮಾವತಿ ಪ್ರತಿಮೆ ಬಳಿಯಿಂದ ಬೃಹತ್ ಮೆರವಣಿಗೆಯಲ್ಲಿ ಹೊರಟು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಮಗ ಪ್ರಜ್ವಲ್ ಉಮೇದುವಾರಿಕೆ ಸಲ್ಲಿಕೆಗೆ ಶುಭ ಮುಹೂರ್ತ ಗೊತ್ತು ಮಾಡಿರುವ ರೇವಣ್ಣ, ಮಧ್ಯಾಹ್ನ 12.05ರಿಂದ 1 ಗಂಟೆಯೊಳಗೆ ನಾಮಪತ್ರ ಸಲ್ಲಿಸಲಿದ್ದಾರೆ.

ಎ.ಮಂಜು ಹೋರಾಟ ಕುಟುಂಬ ರಾಜಕಾರಣದ ವಿರುದ್ಧವಂತೆ..!ಎ.ಮಂಜು ಹೋರಾಟ ಕುಟುಂಬ ರಾಜಕಾರಣದ ವಿರುದ್ಧವಂತೆ..!

ಪ್ರಜ್ವಲ್‌ಗೆ ಕಾಂಗ್ರೆಸ್ ಬೆಂಬಲ ಪಡೆದುಕೊಳ್ಳುವ ಸಂಬಂಧ ರೇವಣ್ಣ ಅವರು ಗುರುವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಆನಂದ್ ಮತ್ತು ಹುಡಾ ಮಾಜಿ ಅ್ಯಕ್ಷ ಬಿ.ಕೆ. ರಂಗಸ್ವಾಮಿ ಅವರ ಮನೆಗೆ ತೆರಳಿ ಸಹಕಾರ ನೀಡುವಂತೆ ಮನವಿ ಮಾಡಿದ್ದರು. ನಾಮಪತ್ರ ಸಲ್ಲಿಕೆ ವೇಳೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸಹ ಭಾಗವಹಿಸುವ ನಿರೀಕ್ಷೆಯಿದೆ.

English summary
Lok Sabha elections 2019: JDS Hassan candidate Prajwal Revanna performed pooja at temples of Friday with his father HD Revanna and mother Bhavani Revanna. He will files his nomination after 12 PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X