ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಣಸೂರಿನಿಂದ ಹರೀಶ್ ಗೌಡ ಸ್ಪರ್ಧೆ: ಪ್ರಜ್ವಲ್ ರೇವಣ್ಣ ಏನಂದ್ರು?

|
Google Oneindia Kannada News

Recommended Video

ಹುಣಸೂರಿನಿಂದ ಹರೀಶ್ ಗೌಡ ಸ್ಪರ್ಧೆ: ಪ್ರಜ್ವಲ್ ರೇವಣ್ಣ ಏನಂದ್ರು? | Oneindia Kannada

ಹಾಸನ, ಸೆಪ್ಟೆಂಬರ್ 26: ಕಾಂಗ್ರೆಸ್-ಜೆಡಿಎಸ್ ಅನರ್ಹ ಶಾಸಕರಿಂದ ತೆರವಾಗುವ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಎಲ್ಲರೂ ತಮ್ಮ ತಮ್ಮ ಕಸರತ್ತು ಆರಂಭಿಸಿದ್ದಾರೆ.

ಜಿಟಿ ದೇವೇಗೌಡ ಅವರ ಪುತ್ರ ಹರೀಶ್ ಗೌಡ ಹುಣಸೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾದರೆ ಸಂತೋಷ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ಹುಣಸೂರು ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಪ್ರಜ್ವಲ್ ದಿಟ್ಟ ನಿರ್ಧಾರಹುಣಸೂರು ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಪ್ರಜ್ವಲ್ ದಿಟ್ಟ ನಿರ್ಧಾರ

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸ್ಪರ್ಧೆಗೆ ಅಧಿಕಾರವಿದೆ, ಯಾರೇ ಸ್ಪರ್ಧೆ ಮಾಡಿದರೂ ಅಭ್ಯಂತರವಿಲ್ಲ, ಉಪಚುನಾವಣೆಯಲ್ಲಿ ನಾಲ್ಕು ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ ಎಂದರು. ಉಪ ಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ. ಪಿತೃ ಪಕ್ಷ ಮುಗಿದ ಬಳಿಕ ಚುನಾವಣಾ ಪ್ರಚಾರ ಆರಂಭಿಸುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Prajwal Revanna Statement Over Harish Gowda

ಹುಣಸೂರು ಕ್ಷೇತ್ರಕ್ಕೆ ಟಿಕೆಟ್​ ಆಕಾಂಕ್ಷಿಗಳು ಅರ್ಜಿ ಹಾಕಲು ಸೂಚಿಸಲಾಗಿದೆ. ಜಿ.ಟಿ. ದೇವೇಗೌಡರ ಪುತ್ರ ಹರೀಶ್ ಗೌಡ ಹುಣಸೂರಿನಿಂದ ಸ್ಪರ್ಧಿಸಿದರೆ ಒಳ್ಳೆಯದು. ನನಗೆ ಹೈಕೋರ್ಟ್ ನಿಂದ ನೋಟೀಸ್ ಬಂದಿದೆ ಹೈಕೋರ್ಟ್ ಗೆ ವಿಚಾರಣೆಗೆ ನಾನು ಹಾಜರಾಗುತ್ತೇನೆ ಆದರೆ ನಾನು ಹೆದರಿಕೊಂಡಿಲ್ಲ, ಮೂರು ತಿಂಗಳಿನಿಂದ ಕೆಲಸ ಮಾಡುತ್ತಿದ್ದೇನೆ. ನಾನು ಧೈರ್ಯವಾಗಿ ವಿಚಾರಣೆಗೆ ಹೋಗುತ್ತೇನೆ ಹೆದರುವ ಅಗತ್ಯತೆ ಇಲ್ಲ ಎಂದು ಅವರು ಹೇಳಿದರು.

ಮುಂಬರುವ ಉಪ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ. ಹುಣಸೂರಿನಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಬಂದಿರುವ ಸುದ್ದಿ ಸುಳ್ಳು. ನಾನು ಟಿಕೆಟ್ ಆಕಾಂಕ್ಷಿಯೂ ಅಲ್ಲ. ಸ್ಥಳೀಯ ಮುಖಂಡರಿಗೆ ಆದ್ಯತೆ ನೀಡಲಾಗುತ್ತದೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡರು ನಿರ್ಧಾರ ಕೈಗೊಳ್ಳಲಿದ್ದಾರೆ.

English summary
MP Prajwal Revanna said that If GT Devegowda son becomes Hunsur JDS candidate I will welcome.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X