• search
  • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಜ್ವಲ್‌ ಸಂಸ್ಕಾರ ಏನೆಂದು ಜನರ ಮುಂದೆ ಬಯಲಾಗುತ್ತಿದೆ; ಹಾಸನದಲ್ಲಿ ಪ್ರೀತಂ ಗೌಡ ಟಾಂಗ್‌

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಸೆಪ್ಟೆಂಬರ್‌, 25: ಸಂಸದ ಪ್ರಜ್ವಲ್ ಅವರು ಚುನಾವಣಾ ಕಣಕ್ಕೆ ಬರುವ ಬಗ್ಗೆ ಸವಾಲು ಸ್ವೀಕಾರ ಮಾಡಿದ್ದೀನಿ ಎಂದಿದ್ದಾರೆ. ನಾನು ಮುಂದಿನ 2023ರ ಸಮಿ ಫೈನಲ್ ಗೆಲ್ಲುತ್ತೇನೆ. ನಂತರ 2024ಕ್ಕೆ ಫೈನಲ್ ಎಂಪಿ ಚುನಾವಣೆಯಲ್ಲಿ ಒಮ್ಮೆ ಎಂಪಿ ಆದವರ ಹೆಸರು ಇರುವುದಿಲ್ಲ. ಏನಾದರೂ ಪಟ್ಟಿಯಲ್ಲಿ ಸೇರಿದ್ದರೆ ಅದು ಹಾಲಿ ಹಾಸನದವರೇ ಎಂಪಿ ಎಂಬುವುದನ್ನು ಮಾಡಿ ತೋರಿಸುತ್ತೇನೆ. ಹೀಗೆ ಏಕವಚನದಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣನವರಿಗೆ ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡರು ಬುದ್ಧಿ ಮಾತನ್ನು ಹೇಳಿದರು.

​ನಗರದ ಅರಳೇಪೇಟೆ ರಸ್ತೆಯಲ್ಲಿ ನಿವಾಸಿಗಳು ಹಾಗೂ ಅಂಗಡಿ ಮಾಲೀಕರಿಂದ ಅನ್ನದಾನ ಕಾರ್ಯಕ್ರಮ ನಡಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸಂಸದ ಪ್ರಜ್ವಲ್ ರೇವಣ್ಣನವರು ನನ್ನ ಬಗ್ಗೆ ಏಕವಚನದಲ್ಲಿ ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. "ಅವರು ನನ್ನ ವಯಸ್ಸಿಗಿಂತ ಚಿಕ್ಕವರಿದ್ದು, ನನ್ನ ಮನೆಯಲ್ಲಿ ಮತ್ತು ರಾಜಕೀಯ ಪಕ್ಷದಲ್ಲಿ ಒಂದು ಸಂಸ್ಕಾರ ಬೆಳೆಸಿಕೊಟ್ಟಿದ್ದಾರೆ. ನಾನು ಹತ್ತು ವರ್ಷ ಬಾಲಕನಿಗೂ ಕೂಡ ಏಕವಚನದಲ್ಲಿ ಕರೆಯುವುದಿಲ್ಲ. ಗೌರವ ಕೊಟ್ಟು ಗೌರವ ತೆಗೆದುಕೊಳ್ಳುತ್ತೇವೆ. ಸಂಸದರ ಮಾತುಗಳು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಆಗಾಗಿ ನಾನು ಹೆಚ್ಚು ಮಾತನಾಡುವುದಿಲ್ಲ. ಮಾನ್ಯ ಸಂಸದರಿಗೆ ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕು ಎಂಬುದನ್ನು ಕಲಿಸುತ್ತಾರೆ. ಇವೆಲ್ಲಾ ಅವರ ಹತಾಶೆ ಮನೋಭಾವನೆಯನ್ನು ತೋರಿಸುತ್ತದೆ," ಎಂದು ವಾಗ್ದಾಳಿ ನಡೆಸಿದರು.

ಹಾಸನ: ಲೂಟಿ ಸರ್ಕಾರವನ್ನು ತೊಲಗಿಸಿ, ಜನಪರ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ, ಹೆಚ್‌ಡಿಕೆ ಕಿಡಿಹಾಸನ: ಲೂಟಿ ಸರ್ಕಾರವನ್ನು ತೊಲಗಿಸಿ, ಜನಪರ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ, ಹೆಚ್‌ಡಿಕೆ ಕಿಡಿ

ತಂದೆ, ಮಗನ ವಿರುದ್ಧ ಪ್ರೀತಂ ಗುಡುಗಿದ್ದೇಕೆ?

"ಸಾರ್ವಜನಿಕವಾಗಿ ಮತ್ತು ಅವರ ಕಾರ್ಯಕರ್ತರನ್ನು ಯಾವ ರೀತಿ ಮಾತನಾಡಿಸಬೇಕು ಎಂಬುದರ ಬಗ್ಗೆ ಒಂದು ಕ್ಲಾಸನ್ನು ತೆಗೆದುಕೊಂಡರೇ ಒಳ್ಳೆಯದು. ಅವರ ತಂದೆಯವರು ಕಾರ್ಯಕರ್ತರನ್ನು ಕುಡುಕರು, ರೌಡಿ ಶೀಟರ್ ಎನ್ನುತ್ತಾರೆ. ಅವರ ಮಗ ಅವರಿಂಗಿಂತ ಮುಂಚೆ ಚುನಾಯಿತರಾದ ಪ್ರತಿನಿಧಿಗೆ ಏಕವಚನದಲ್ಲಿ ಮಾತನಾಡಿಸುತ್ತಾರೆ. ಅವರು ನನಗಿಂತ ಆರೇಳು ವರ್ಷ ಚಿಕ್ಕವರಿದ್ದಾರೆ. ಇವೆಲ್ಲಾ ಅವರ ಸಂಸ್ಕಾರವನ್ನು ತೋರಿಸಿಕೊಡುತ್ತದೆ. ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕಾಗಿರುವುದು ಅವರ ವಯಕ್ತಿಕ ವಿಚಾರ ಆಗಿರುವುದರಿಂದ ನಾನು ಏಕೆ ಹೆಚ್ಚು ಗಮನ ಕೊಡಲಿ," ಎಂದರು.

"ತಾತನ ಹೆಸರಿನಲ್ಲಿ ಪ್ರಜ್ವಲ್‌ ರೇವಣ್ಣ ರಾಜಕೀಯ"

​ನಾನು ಚುನಾವಣೆಗೆ ನಿಲ್ಲುತ್ತಿರುವುದು ಹಾಸನ ವಿಧಾನಸಭಾ ಕ್ಷೇತ್ರ ಎಂಬುದು ಅವರಿಗೆ ಮಾಹಿತಿ ಇಲ್ಲ ಪಾಪ. "ತಾತನ ಹೆಸರು ಹೇಳಿಕೊಂಡು ರಾಜಕಾರಣ ಮಾಡಿದರೆ ಹೀಗೆ ಆಗುವುದು. ಜಿಲ್ಲೆಯ ಜನರು ನನಗೆ ಮತ ಹಾಕುವುದಿಲ್ಲ. ಹಾಸನದ ವಿಧಾನಸಭಾ ಕ್ಷೇತ್ರದ ಜನರು ನನಗೆ ಮತ ಹಾಕವುದು. ನಾನು ನಿಂತಿರುವುದು ಎಂಎಲ್ಎ ಚುನಾವಣೆಗೆ. ಜಿಲ್ಲೆಯವರು ಎಂಪಿಗೆ ಮತಗಳನ್ನು ಹಾಕುತ್ತಾರೆ. ಇಲ್ಲಿ ನನಗೆ ಕ್ಷೇತ್ರದ ಜನ ಮತ ಹಾಕುತ್ತಾರೆ. ಪ್ರೀತಂ ಗೌಡರನ್ನು ಸೋಲಿಸಬಹುದು ಎಂದು ಆ ಕುಟುಂಬ ತೀರ್ಮಾನ ಮಾಡಿರಬಹುದು. ಆದರೆ ಹಾಸನ ವಿಧಾನಸಭಾ ಕ್ಷೇತ್ರದ ಜನ ಎಂದರೇ ನನ್ನ ಕುಟುಂಬ, ಪ್ರೀತಂ ಗೌಡ ಶಾಸಕನಾಗಬೇಕೆಂದು ಅವರು ತೀರ್ಮಾನ ಮಾಡಿದ್ದಾರೆ," ಎಂದು ಟೀಕಿಸಿದರು.

ಜನರ ಆಸೆಯಂತೆ ಕ್ಷೇತ್ರದ ಅಭಿವೃದ್ಧಿ

ಸಾಮಾನ್ಯ ಜನರ ಆಸೆಯಂತೆ ಕ್ಷೇತ್ರದ ಅಭಿವೃದ್ಧಿಯನ್ನು ಮಾಡುತ್ತೇವೆ. "ಐದಾರು ಜನ ವೈಟ್ ಪ್ಯಾಂಟ್, ವೈಟ್ ಶರ್ಟ್ ಹಾಕುವವರನ್ನು ಇಟ್ಟುಕೊಂಡು ಚುನಾವಣೆಯ ಗೆಲ್ಲುತ್ತೇನೆ ಎನ್ನುವ ಭ್ರಮೆಯಲಿದ್ದಾರೆ. ನನ್ನ ಜೊತೆ ಇರುವವರೆಲ್ಲಾ ಸಾಮಾನ್ಯ ಜನರು ಎಂಬುದಕ್ಕೆ ಸಾಕ್ಷಿ ತಿಳಿದಿದೆ. ಚುನಾವಣಾ ರಣರಂಗಕ್ಕೆ ಬರುವುದಾಗಿ ಸವಾಲು ಸ್ವೀಕಾರ ಮಾಡಿದ್ದೀನಿ ಎಂದಿದ್ದಾರೆ. 2023ರ ಸಮಿ ಫೈನಲ್ ಗೆಲ್ಲುತ್ತೇನೆ. 2024ಕ್ಕೆ ಫೈನಲ್ ಎಂಪಿ ಚುನಾವಣೆ ಒಮ್ಮೆ ಎಂಪಿ ಆದವರೆಂದು ಹೆಸರು ಏನಾದರೂ ಪಟ್ಟಿಯಲ್ಲಿ ಸೇರಿಸಿದ್ದರೆ, ಅದು ಹಾಲಿ ಹಾಸನದ ಎಂಪಿ ಎಂಬುವುದನ್ನು ಮಾಡಿ ತೋರಿಸುತ್ತೇನೆ. ಶಿರಾ ಕ್ಷೇತ್ರದ ಚುನಾವಣೆಯಲ್ಲಿ ಗುಂಪು ಕಟ್ಟಿಕೊಂಡು ಬಂದ ಎಂಪಿಯವರು, ಅಲ್ಲೂ ಕೂಡ ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಮಂಡ್ಯದಲ್ಲೂ ಕೂಡ ಸೋಲು ಅನುಭವಿಸಿದ್ದರು," ಎಂದು ಕುಟುಕಿದರು.

ಪ್ರಜ್ವಲ್‌ ರೇವಣ್ಣ ವಿರುದ್ಧ ತಿರುಗಿಬಿದ್ದ ಪ್ರೀತಂ

ಜನಸಾಮನ್ಯರು ಎದ್ದರೆ ನಾವು ರಾಜರು ಮತ್ತು ಯುವರಾಜರು ಅಂದುಕೊಂಡವರೆಲ್ಲಾ ಮನೆ ಸೇರುತ್ತಾರೆ. ಅವರು "ಸಿದ್ದರಾಮಯ್ಯವರ ಕಾಲಿಡಿದು ಎಂಪಿ ಆಗಿದ್ದಾರೆ. 2024ಕ್ಕೆ ನಡೆಯುವ ಎಂಪಿ ಚುನಾವಣೆಯಲ್ಲಿ ಅಂತಹ ಪರಿಸ್ಥಿತಿ ಇರುವುದಿಲ್ಲ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷದಲ್ಲೂ ಸ್ಪರ್ಧೆಗೆ ಇರುತ್ತಾರೆ. ಪರದೆ ಮೇಲೆ ಚಿತ್ರವನ್ನು ತೋರಿಸುತ್ತೇನೆ ಎಂದು ಟಾಂಗ್ ನೀಡಿದರು. ಜೆಡಿಎಸ್ ಪಕ್ಷದವರಿಗೆ ಹಾಸನದಲ್ಲಿ ಎಲ್ಲೆಲ್ಲಿ ಗಣಪತಿ ಇವೆ ಮತ್ತು ಎಲ್ಲೆಲ್ಲಿ ರಸ್ತೆಗಳು ಇವೆ ಎಂಬುದು ಗೊತ್ತಿಲ್ಲ. ನಾನು ಬಂದ ಮೇಲೆ ಹಾಸನ ಎಲ್ಲಿದೆ ಎಂಬುದನ್ನು ತೋರಿಸಿಕೊಡಲಾಗಿದೆ. ಇಲ್ಲಿನ ಗಣಪತಿ ನೋಡಿದ್ದಾರೆ ಅಷ್ಟೆ ಅವರು. ಪ್ರೀತಂ ಗೌಡ ಏನು ಕೆಲಸ ಮಾಡಿದ್ದಾನೆ ಎಂದು ಹಳ್ಳಿ ಕಡೆ ಹೋದರೆ ಗೊತ್ತಾಗುತ್ತದೆ. ಜನರು ಅಭಿವೃದ್ಧಿ ನೋಡಿ ಮತ ಹಾಕುತ್ತಾರೆ. ಗಣಪತಿ ಬಳಿ ಹೋಗಿ ಜನರನ್ನು ನೋಡಿ ವೋಟು ನಮಗೆ ಹಾಕುತ್ತಾರೆ ಎನ್ನುವ ಭ್ರಮೆಯಲ್ಲಿದ್ದಾರೆ. ನಾವೆ ಗೆಲ್ಲುತ್ತೇವೆ ಎಂದು ಚಾಲೆಂಜ್ ಬೇರೆ ಮಾಡಿದ್ದಾರೆ. ಅದಕ್ಕೆ ಮೊದಲು ಅಭ್ಯರ್ಥಿ ಯಾರೆಂದು ಘೋಷಣೆ ಮಾಡಲಿ. ಘೋಷಣೆ ಮಾಡಿದ ದಿನ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ," ಎಂದು ಸವಾಲು ಹಾಕಿದರು.

ಪ್ರಜ್ವಲ್ ಅವರು ಸಂಸದರಾದ ಮೇಲೆ ಒಂದು ಬಾರಿಯೂ ಹಳ್ಳಿಗಳಿಗೆ ಹೋಗಲಿಲ್ಲ. ಈಗ ಅವರ ತಾಯಿಯನ್ನು ಇಲ್ಲಿ ಕಣಕ್ಕೆ ತರಲು ಮುಂದಾಗಿದ್ದಾರೆ. ಆದ್ದರಿಂದ ಗ್ರಾಮಗಳನ್ನು ನೋಡಿಕೊಂಡು ಬರಲಿ ಎಂದು ಸಲಹೆ ನೀಡಿದರು. ನೀವು ನನ್ನನ್ನು ಯಾವನೋ ಎಂದು ಕರೆದಿರುವುದು ಹಾಸನ ವಿಧಾನಸಭಾ ಕ್ಷೇತ್ರದ ಜನರಿಗೆ ಅವಮಾನ ಮಾಡಿದಂತೆ. ಆ ಹುದ್ದೆಗೆ ಗೌರವ ಕೊಡುವುದನ್ನು ಮೊದಲು ಕಲಿಯಲಿ. ಅವರು ಕೂಡ ಇಂಜಿನಿಯರ್ ಇದ್ದು, ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.

​ಈ ಸಂದರ್ಭದಲ್ಲಿ ನಗರಸಭೆ ನಾಮನಿರ್ದೇಶನ ಸದಸ್ಯ ಅರುಣ್ ಕುಮಾರ್, ಚನ್ನಕೇಶವ, ವೆಂಕಟೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

English summary
BJP leader Preetham J Gowda expressed anger against Prajwal Revanna, a son of HD Revanna. People of Hassan is witnessing the true behaviour of Prajwal, BJP MLA taunts. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X