ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಣ್ಣೀರ 'ಹೊಳೆ' ಹರಿಸಿ, ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದ ದೇವೇಗೌಡ್ರು

|
Google Oneindia Kannada News

Recommended Video

Lok Sabha Elections 2019 : ಹಾಸನದ ಜೆಡಿಎಸ್ ಅಭ್ಯರ್ಥಿಯ ಇವರೇ ಎಂದು ಅಧಿಕೃತವಾಗಿ ಘೋಷಿಸಿದ ಎಚ್ ಡಿ ದೇವೇಗೌಡ

ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್ ರೇವಣ್ಣ ಜೆಡಿಎಸ್ ನ ಅಧಿಕೃತ ಅಭ್ಯರ್ಥಿ ಎಂದು ಕಣ್ಣೀರ 'ಹೊಳೆ' ಹರಿಸಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಇಂದು ಹೊಳೆನರಸೀಪುರದಲ್ಲಿ ಘೋಷಿಸಿದರು.

ಕೊಟ್ಟ ಮಾತಿನಂತೆ ನನ್ನ ಮೊಮ್ಮಗನಿಗಾಗಿ ಕ್ಷೇತ್ರ ಬಿಟ್ಟು ಕೊಟ್ಟಿದ್ದೇನೆ. ಇನ್ನು ನಿಮ್ಮ ಮಡಿಲಿಗೆ ಪ್ರಜ್ವಲ್​ನನ್ನು ಹಾಕಿದ್ದೇನೆ. ನಿಮ್ಮ ಅನುಮತಿ ಪಡೆದೆ ನಾನು ಪ್ರಜ್ವಲ್​ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದೇನೆ. ನಿಮ್ಮ ಆಶೀರ್ವಾದ ಪ್ರಜ್ವಲ್​ಮೇಲೆ ಇರಲಿ ಎಂದು ದೇವೇಗೌಡರು ಕಣ್ಣೀರಿಟ್ಟರು. ದೇವೇಗೌಡರು ಕಣ್ಣೀರು ಸುರಿಸಿದ್ದು ನೋಡಿ, ಅವರ ಪುತ್ರ ರೇವಣ್ಣ ಅವರು ಕಣ್ಣು ಒರೆಸಿಕೊಂಡರು, ವೇದಿಕೆಯಲ್ಲಿದ್ದ ಮೊಮ್ಮಗ ಪ್ರಜ್ವಲ್ ಅವರ ಕಣ್ಣಾಲಿಗಳು ತುಂಬಿ ಬಂದವು. ಒಟ್ಟಾರೆ, ಕಣ್ಣೀರು ಸಾಂಕ್ರಾಮಿಕವಾಗಿತ್ತು.

ಜೆಡಿಎಸ್ ನಲ್ಲಿ ಅಸಮಾಧಾನ; ದೇವೇಗೌಡರದು ಬೆಂಗಳೂರು 'ಉತ್ತರ'!ಜೆಡಿಎಸ್ ನಲ್ಲಿ ಅಸಮಾಧಾನ; ದೇವೇಗೌಡರದು ಬೆಂಗಳೂರು 'ಉತ್ತರ'!

ಪ್ರಜ್ವಲ್​ಅಭ್ಯರ್ಥಿ ಎಂದು ಘೋಷಣೆಯಾಗುವುದಕ್ಕೂ ಮುನ್ನ ಸಚಿವ ಎಚ್ ಡಿ ರೇವಣ್ಣ ಅವರ ಕುಟುಂಬದವರು ದೇಗುಲಕ್ಕೆ ಭೇಟಿ ನೀಡಿದರು. ಚುನಾವಣಾ ಪ್ರಚಾರ ನಿರ್ವಿಘ್ನವಾಗಿ ನಡೆಯಲಿ ಎಂದು ಕೋರುತ್ತಾ ಹೊಳೆನರಸೀಪುರ ತಾಲೂಕು ಮೂಡಲಹಿಪ್ಪೆ ಚನ್ನಕೇಶವ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ಸಮಾವೇಶದ ವೇದಿಕೆ ತನಕ ತೆರದ ವಾಹನದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಅಭ್ಯರ್ಥಿ ಪ್ರಜ್ವಲ್, ರೇವಣ್ಣ ದಂಪತಿ ಪ್ರಚಾರ ನಡೆಸಿದರು.

ದೇವೇಗೌಡರ ಭಾವನಾತ್ಮಕ ಭಾಷಣ

ದೇವೇಗೌಡರ ಭಾವನಾತ್ಮಕ ಭಾಷಣ

ಮೂಡಲಹಿಪ್ಪೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ದೇವೇಗೌಡರು, ಯಾವ ಸುದ್ದಿ ಮಾಧ್ಯಮ ನೋಡಿದರೂ ನಮ್ಮ ಕುಟುಂಬದ ವಿರುದ್ಧವೇ ಸುದ್ದಿ ಬರುತ್ತಿದೆ. ನಾನು ಕೇವಲ ನನ್ನ ಮಕ್ಕಳಿಗಾಗಿ ಹೋರಾಟ ಮಾಡುತ್ತೇನೆ ಎಂದು ಆರೋಪಿಸುತ್ತಾರೆ. ಆದರೆ, ನಾನು ಯಾರಿಗೆ ಮೋಸ ಮಾಡಿದ್ದೇನೆ ಹೇಳಿ ಎಂದು ನೆರೆದಿದ್ದವರನ್ನು ಪ್ರಶ್ನಿಸಿ ಕಣ್ಣೊರೆಸಿಕೊಂಡರು.

ದೇವೇಗೌಡರ ಕುಟುಂಬದ ಕಣ್ಣೀರ ನಾಟಕ ಶುರು: ಬಿಜೆಪಿ ವ್ಯಂಗ್ಯದೇವೇಗೌಡರ ಕುಟುಂಬದ ಕಣ್ಣೀರ ನಾಟಕ ಶುರು: ಬಿಜೆಪಿ ವ್ಯಂಗ್ಯ

ರೇವಣ್ಣರನ್ನು ಹೊಗಳಿದ ದೇವೇಗೌಡರು

ರೇವಣ್ಣರನ್ನು ಹೊಗಳಿದ ದೇವೇಗೌಡರು

ನಿಮ್ಮ ಅಪೇಕ್ಷೆಯಂತೆ ನನ್ನ ಮೊಮ್ಮಗನನ್ನೇ ನಿಲ್ಲಿಸುವ ತೀರ್ಮಾನಕ್ಕೆ ಬಂದಿದ್ದೇನೆ.ಈ ಬಗ್ಗೆ ಹಲವು ಮುಖಂಡರ ಜೊತೆ ಈಗಾಗಲೇ ಮಾತಾಡಿ ತೀರ್ಮಾನ ಮಾಡಿದ್ದೇನೆ. ರೇವಣ್ಣ ಸ್ವಲ್ಪ ಕೋಪಿಷ್ಟ, ಕೋಪ ಬಿಟ್ಟರೆ ಅವನಂಥ ನಾಯಕನಿಲ್ಲ ಎಂದು ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಪ್ಪನ ಮಾತು ಕೇಳಿಸಿಕೊಂಡ ರೇವಣ್ಣ ಅವರು ಕಣ್ಣೀರಿಟ್ಟರು.

ಚುನಾವಣೆ ಸ್ಪರ್ಧಿಸಲು ಕಾಂಗ್ರೆಸ್‌ಗೆ ಷರತ್ತು ಹಾಕಿದ ದೇವೇಗೌಡ ಚುನಾವಣೆ ಸ್ಪರ್ಧಿಸಲು ಕಾಂಗ್ರೆಸ್‌ಗೆ ಷರತ್ತು ಹಾಕಿದ ದೇವೇಗೌಡ

ಪ್ರಜ್ವಲ್ ಮತ್ತು ಸೂರಜ್ ಲವಕುಶರಿದ್ದಂತೆ

ಪ್ರಜ್ವಲ್ ಮತ್ತು ಸೂರಜ್ ಲವಕುಶರಿದ್ದಂತೆ

ಪ್ರಜ್ವಲ್ ಗೆ ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡು ಅಂತಾ ಹೇಳಿದ್ದೆ, ಅವನು ಹೋಗಲಿಲ್ಲ, ಸೂರಜ್ ಒಳ್ಳೆಯ ವೈದ್ಯನಾದ. ಪ್ರಜ್ವಲ್ ಮತ್ತು ಸೂರಜ್ ಲವಕುಶರಿದ್ದಂತೆ. ನಿಮ್ಮೆಲ್ಲರ ಆಶೀರ್ವಾದ ಪ್ರಜ್ವಲ್ ಮತ್ತು ಸೂರಜ್ ಮೇಲಿರಲಿ. ಅಣ್ಣ-ತಮ್ಮ ಇಬ್ಬರೂ ಒಟ್ಟಿಗೆ ಹೋಗಿ ಮೂಡಲಹಿಪ್ಪೆ ಚನ್ನಕೇಶವ ದೇಗುಲದಲ್ಲಿ ನಾಮಪತ್ರ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಅವರಿಗೆ ಒಳಿತಾಗಲಿ ಎಂದು ಹಾರೈಸಿದರು.

ಐದು ಹಳ್ಳಿಗಳಲ್ಲಿ ಸಾಂಕೇತಿಕ ಜೆಡಿಎಸ್ ಪ್ರಚಾರ ನಡೆಸಲಿದೆ

ಐದು ಹಳ್ಳಿಗಳಲ್ಲಿ ಸಾಂಕೇತಿಕ ಜೆಡಿಎಸ್ ಪ್ರಚಾರ ನಡೆಸಲಿದೆ

ಐದು ಹಳ್ಳಿಗಳಲ್ಲಿ ಸಾಂಕೇತಿಕ ಜೆಡಿಎಸ್ ಪ್ರಚಾರ ನಡೆಸಲಾಯಿತು. ಸಂಪ್ರದಾಯದಂತೆ ಪೂರ್ವ ದಿಕ್ಕಿಗೆ ತೆರಳಿ ಪ್ರಚಾರ ನಡೆಸಲಾಗುತ್ತದೆ. ಈ ವೇಳೆ ಜಿಲ್ಲೆಯ ಜೆಡಿಎಸ್ ಶಾಸಕರು, ಜೆಡಿಎಸ್ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

ಲೋಕಸಭಾ ಚುನಾವಣೆ ಹೊತ್ತಿಗೆ ಗೌಡರ ಕುಟುಂಬದಲ್ಲಿ ಯಾರ್ಯಾರು, ಏನೇನು? ಲೋಕಸಭಾ ಚುನಾವಣೆ ಹೊತ್ತಿಗೆ ಗೌಡರ ಕುಟುಂಬದಲ್ಲಿ ಯಾರ್ಯಾರು, ಏನೇನು?

English summary
Former PM, HD Deve Gowda weeps and announces Prajwal Revanna as the official candidate for Hassan. JDS Election campaign begins today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X